Gold Rate: ಒಂದೇ ದಿನ ಭಾರೀ ಏರಿಕೆ ಕಂಡ ಬೆನ್ನಲ್ಲೇ ಇಳಿಕೆ ಹಾದಿ ಹಿಡಿದ ಚಿನ್ನದ ಬೆಲೆ; ಇಲ್ಲಿದೆ ಇಂದಿನ ದರ

 ಕಳೆದ ವಾರ ಬೆಳ್ಳಿ ದರ 4 ದಿನ ಇಳಿಕೆ ಹಾಗೂ 2  ದಿನ ಏರಿಕೆ ಕಂಡಿದೆ.  ಈ ಮೂಲಕ ಬೆಳ್ಳಿ ದರ 350  ರೂಪಾಯಿ ಏರಿಕೆ ಕಂಡಂತಾಗಿತ್ತು. ಸೋಮವಾರ ಕೆಜಿ ಚಿನ್ನ 300  ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 62,400 ರೂಪಾಯಿ ಆಗಿದೆ.

news18-kannada
Updated:October 29, 2020, 10:03 AM IST
Gold Rate: ಒಂದೇ ದಿನ ಭಾರೀ ಏರಿಕೆ ಕಂಡ ಬೆನ್ನಲ್ಲೇ ಇಳಿಕೆ ಹಾದಿ ಹಿಡಿದ ಚಿನ್ನದ ಬೆಲೆ; ಇಲ್ಲಿದೆ ಇಂದಿನ ದರ
Gold
  • Share this:
Gold Price Today: ಬೆಂಗಳೂರು (ಅಕ್ಟೋಬರ್ 29): ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.  

ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ನಾಲ್ಕು ದಿನ ಏರಿಕೆ ಕಂಡು ಎರಡು ದಿನ ಇಳಿಕೆ ಕಂಡಿತ್ತು. ಈ ಮೂಲಕ 10ಗ್ರಾಂ ಆಭರಣ ಚಿನ್ನ ಕಳೆದ  ವಾರ ಒಟ್ಟು 940 ರೂಪಾಯಿ ಇಳಿಕೆ ಕಂಡಂತಾಗಿತ್ತು. ಬುಧವಾರ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. ಆಭರಣ ದರ 10 ಗ್ರಾಂಗೆ 140 ರೂಪಾಯಿ ಇಳಿಕೆ ಕಂಡು 47,730 ರೂಪಾಯಿ ಆಗಿದೆ. ಇನ್ನು, ಶುದ್ಧ ಚಿನ್ನ 160 ರೂಪಾಯಿ ಇಳಿಕೆ ಕಾಣುವ ಮೂಲಕ 52,060 ರೂಪಾಯಿ ಆಗಿದೆ. ಮಂಗಳವಾರ ವಿನ್ನದ ದರ ಸುಮಾರು ಒಂದು ಸಾವಿರ ರೂಪಾಯಿ ಏರಿಕೆ ಕಂಡಿತ್ತು.

 ಕಳೆದ ವಾರ ಬೆಳ್ಳಿ ದರ 4 ದಿನ ಇಳಿಕೆ ಹಾಗೂ 2  ದಿನ ಏರಿಕೆ ಕಂಡಿದೆ.  ಈ ಮೂಲಕ ಬೆಳ್ಳಿ ದರ 350  ರೂಪಾಯಿ ಏರಿಕೆ ಕಂಡಂತಾಗಿತ್ತು. ಸೋಮವಾರ ಕೆಜಿ ಚಿನ್ನ 300  ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 62,400 ರೂಪಾಯಿ ಆಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.

Gold rate today gold price in Bangalore Gold rate on September 20,
ಸಾಂದರ್ಭಿಕ ಚಿತ್ರ


ಮತ್ತೆ ಏರಿಕೆ ಕಾಣಲಿದೆ ಚಿನ್ನ?:
ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
Published by: Rajesh Duggumane
First published: October 29, 2020, 10:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading