Gang Rape: ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಯುವತಿ ಮೇಲೆ ಪೊಲೀಸರಿಂದಲೇ ಸಾಮೂಹಿಕ ಅತ್ಯಾಚಾರ!

Gang Rape Case: ಕೊಲೆ ಆರೋಪದಲ್ಲಿ ಲಾಕಪ್​ನಲ್ಲಿದ್ದ ನನ್ನ ಮೇಲೆ 10 ದಿನಗಳ ಕಾಲ ಐವರು ಪೊಲೀಸರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಮಧ್ಯಪ್ರದೇಶದ 20 ವರ್ಷದ ಯುವತಿ ಆರೋಪಿಸಿದ್ದಾಳೆ.

Sushma Chakre | news18-kannada
Updated:October 19, 2020, 1:42 PM IST
Gang Rape: ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಯುವತಿ ಮೇಲೆ ಪೊಲೀಸರಿಂದಲೇ ಸಾಮೂಹಿಕ ಅತ್ಯಾಚಾರ!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಅ. 19): ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ 20 ವರ್ಷದ ಯುವತಿಯ ಮೇಲೆ ಜೈಲಿನಲ್ಲಿ ಐವರು ಪೊಲೀಸ್ ಅಧಿಕಾರಿಗಳು 10 ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಧ್ಯಪ್ರದೇಶ ರಾಜ್ಯದ ರೇವಾ ಜಿಲ್ಲೆಯಲ್ಲಿ ಈ ಹೀನ ಕೃತ್ಯ ನಡೆದಿದೆ. ಈ ಬಗ್ಗೆ 20 ವರ್ಷದ ಕೊಲೆ ಆರೋಪಿ ನ್ಯಾಯಾಧೀಶರ ಮುಂದೆ ತನ್ನ ಸಂಕಷ್ಟ ಹೇಳಿಕೊಂಡಿದ್ದು, ಕೊಲೆ ಆರೋಪದಲ್ಲಿ ಲಾಕಪ್​ನಲ್ಲಿದ್ದ ನನ್ನ ಮೇಲೆ 10 ದಿನಗಳ ಕಾಲ ಐವರು ಪೊಲೀಸರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ.

10 ದಿನಗಳ ಕಾಲ ಲಾಕಪ್​ನಲ್ಲಿದ್ದ ವೇಳೆ ಸಬ್ ಡಿವಿಜನಲ್ ಆಫೀಸರ್ ಆಫ್ ಪೊಲೀಸ್, ಪೊಲೀಸ್ ಠಾಣೆಯ ಉಸ್ತುವಾರಿ ಮತ್ತು ಮೂವರು ಕಾನ್​ಸ್ಟೇಬಲ್​ಗಳು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ವಿಷಯ ಯಾರಿಗಾದರೂ ಹೇಳಿದರೆ ನನ್ನ ಅಪ್ಪನನ್ನೂ ಕೊಲೆ ಪ್ರಕರಣದಲ್ಲಿ ಫಿಕ್ಸ್​ ಮಾಡುವುದಾಗಿ ಅವರು ಬೆದರಿಕೆಯೊಡ್ಡಿದ್ದರು. ನನ್ನ ಮೇಲೆ ಲಾಕಪ್​ನಲ್ಲಿ ನಡೆದ ಅತ್ಯಾಚಾರವನ್ನು ವಿರೋಧಿಸಿದ್ದಕ್ಕೆ ಲೇಡಿ ಕಾನ್​ಸಟೇಬಲ್ ಮೇಲೂ ಪೊಲೀಸ್ ಅಧಿಕಾರಿಗಳು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆ ಮಹಿಳಾ ಆರೋಪಿ ದೂರು ನೀಡಿದ್ದಾಳೆ.

ಈ ಆಘಾತಕಾರಿ ವಿಷಯ ಹೊರಬೀಳುತ್ತಿದ್ದಂತೆ ನ್ಯಾಯಾಧೀಶರು ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ, ವರದಿ ನೀಡುವಂತೆ ಆದೇಶಿಸಿದ್ದಾರೆ. ಈ ಬಗ್ಗೆ ರೇವಾ ಎಸ್​ಪಿ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆದಿರುವ ನ್ಯಾಯಾಧೀಶರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಮತ್ತೊಂದು ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ; ಹಣೆಗೆ ಗನ್ ಇಟ್ಟು ಹೇಯ ಕೃತ್ಯ!

ಜೈಲುಗಳಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಲು ನ್ಯಾಯಾಧೀಶರು ಬಂದಿದ್ದ ವೇಳೆ ಅತ್ಯಾಚಾರಕ್ಕೊಳಗಾದ ಕೊಲೆ ಆರೋಪಿ ಜಡ್ಜ್ ಎದುರು ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಾಳೆ. ಮೇ 9ರಿಂದ 21ರ ಒಳಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ವಿಷಯವನ್ನು ಹೊರಗಿನವರಿಗೆ ತಿಳಿಸಲು ಯಾರೂ ಬಿಟ್ಟಿರಲಿಲ್ಲ ಎಂದು ಆಕೆ ಆರೋಪಿಸಿದ್ದಾಳೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು ಆ ಯುವತಿಯನ್ನು ಮೇ 21ರಂದು ಬಂಧಿಸಲಾಗಿತ್ತು. ಅದಕ್ಕೂ ಮೊದಲು ಜೈಲಿನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಯಲು ಹೇಗೆ ಸಾಧ್ಯ? ಆಕೆ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದಿದ್ದಾರೆ.

ಕೊಲೆಯ ಆರೋಪದಲ್ಲಿ ಮೇ 21ರಂದು ಯುವತಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿತ್ತು. ಫೋನ್ ಕರೆಗಳು, ಮೊಬೈಲ್ ಲೊಕೇಷನ್ ಮತ್ತಿತರ ಸಾಕ್ಷಿಗಳ ಆಧಾರದಲ್ಲಿ ಅವರಿಬ್ಬರನ್ನೂ ಬಂಧಿಸಲಾಗಿತ್ತು. ಆಕೆಯ ರಕ್ತಸಿಕ್ತವಾದ ಬಟ್ಟೆಯನ್ನು ಕೂಡ ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ವಿಷಯವನ್ನು ಇಷ್ಟು ದಿನಗಳ ಕಾಲ ಯಾಕೆ ಮುಚ್ಚಿಟ್ಟಿದ್ದು? ಎಂದು ತನಿಖಾಧಿಕಾರಿಗಳು ವಿಚಾರಿಸಿದ್ದಾರೆ. ನಾನು 3 ತಿಂಗಳ ಹಿಂದೆಯೇ ಜೈಲಧಿಕಾರಿಗೆ ಈ ವಿಷಯ ತಿಳಿಸಿದ್ದೆ. ಆದರೆ, ಅವರು ನನ್ನ ಮಾತು ನಂಬಿರಲಿಲ್ಲ. ನನಗೆ ಬೈದು ಸುಮ್ಮನಾಗಿಸಿದ್ದರು. ಅಲ್ಲದೆ, ಈ ವಿಷಯ ಗೊತ್ತಾದ ಮೇಲೆ ಆ ಪೊಲೀಸರು ತಾವು ಅತ್ಯಾಚಾರ ನಡೆಸಿದ ವಿಷಯ ಹೇಳಿದರೆ ಈ ಕೊಲೆ ಪ್ರಕರಣದಲ್ಲಿ ನನ್ನ ತಂದೆಯನ್ನು ಫಿಕ್ಸ್​ ಮಾಡಿ, ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಕೊಲೆ ಆರೋಪಿ ಯುವತಿ ಹೇಳಿದ್ದಾಳೆ. ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.
Published by: Sushma Chakre
First published: October 19, 2020, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading