ಅಮ್ಮ ಬೇಕೆಂದು ಅಳುತ್ತಿದ್ದ ಮಗಳನ್ನು ಕತ್ತುಹಿಸುಕಿ ಕೊಂದ ಕ್ರೂರಿ ಅಪ್ಪ

ಆತನ ಹೆಂಡತಿ ತನ್ನ 3 ವರ್ಷದ ಮಗನ ಜೊತೆ ಮನೆ ಬಿಟ್ಟು ಹೋಗಿದ್ದಳು. 4 ವರ್ಷದ ಮಗಳು ತಂದೆ ಗುಪ್ತ ಜೊತೆಗೆ ಉಳಿದುಕೊಂಡಿದ್ದಳು. ತಾಯಿ ಮನೆ ಬಿಟ್ಟು ಹೋದ ಬಳಿಕ ಮಗಳು ಅಮ್ಮನಿಗಾಗಿ ಅಳುತ್ತಿದ್ದಳು.

news18-kannada
Updated:October 31, 2020, 1:02 PM IST
ಅಮ್ಮ ಬೇಕೆಂದು ಅಳುತ್ತಿದ್ದ ಮಗಳನ್ನು ಕತ್ತುಹಿಸುಕಿ ಕೊಂದ ಕ್ರೂರಿ ಅಪ್ಪ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಅ.31): ಮಕ್ಕಳು ಅಳುವುದು ಸಾಮಾನ್ಯ. ಹಾಗಂತ ಅಳುವ ಮಕ್ಕಳನ್ನು ಬಿಸಾಡಲು ಸಾಧ್ಯವೇ? ಅಥವಾ ಕೊಲ್ಲಲು ಸಾಧ್ಯವೇ? ಆದರೆ ಇಲ್ಲಿ ಇದಕ್ಕೆ ತದ್ವಿರುದ್ಧ. ನೋಯ್ಡಾದಲ್ಲಿ ತಂದೆಯೊಬ್ಬ ತನ್ನ ಮಗಳು ಅಳುವುದನ್ನು ನಿಲ್ಲಿಸಿಲ್ಲ ಎಂದು ಕತ್ತು ಹಿಸುಕಿ ಸಾಯಿಸೇಬಿಟ್ಟಿದ್ದಾನೆ. ಇವನೆಂಥ ಕ್ರೂರಿ ಅಪ್ಪ ಅಂತೀರಾ.! ಹೌದು, ವಾಸುದೇವ್ ಗುಪ್ತ ಎಂಬಾತ ತನ್ನ ವರ್ಷದ ಮಗಳನ್ನು ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಮಗಳು ಅಳುವುದನ್ನು ನಿಲ್ಲಿಸಲು ವಿಫಲವಾದ ಅಪ್ಪ ಕೊನೆಗೆ ಈ ಕೃತ್ಯ ಎಸಗಿದ್ದಾನೆ. ಆಟೋರಿಕ್ಷಾದಲ್ಲಿ ಮಗಳ ಶವವನ್ನು ಇಟ್ಟು, ತನ್ನ ಹೆಂಡತಿಯನ್ನು ಹುಡುಕುತ್ತಿದ್ದ ಆರೋಪಿ ವಾಸುದೇವ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮೂಲತಃ ಸುಲ್ತಾನ್​ಪುರದ ನಿವಾಸಿಯಾಗಿದ್ದು, ಆಟೋರಿಕ್ಷಾ ಓಡಿಸುತ್ತಿದ್ದ. ಕಳೆದ ಕೆಲವು ವರ್ಷಗಳಿಂದ ವಾಸುದೇವ್ ಖೋದಾ ಕಾಲೋನಿಯಲ್ಲಿ ಹೆಂಡತಿ-ಮಗಳ ಜೊತೆ ವಾಸವಾಗಿದ್ದ. ಆತನ ಹೆಂಡತಿ ನೋಯ್ಡಾದ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದಳು.

20 ದಿನಗಳ ಹಿಂದೆಯೇ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು ಎನ್ನಲಾಗಿದೆ. ಈ ಕಾರಣದಿಂದ ಆಕೆ ತನ್ನ ಗಂಡನನ್ನು ಬಿಟ್ಟು ಹೋಗಿದ್ದಳು. ತಾಯಿಯಿಂದ ದೂರವಾದ ಮಗು ಅಮ್ಮನಿಗಾಗಿ ಅಳುತ್ತಲೇ ಇತ್ತು. ವಾಸುದೇವ್ ಮಗುವಿನ ಅಳು ನಿಲ್ಲಿಸಲು ತುಂಬಾ ಪ್ರಯತ್ನಿಸಿದ. ಮಗು ಅಳು ನಿಲ್ಲಿಸದಿದ್ದಾಗ ಕೋಪಗೊಂಡ ಆತ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವಿಕನಿಲ್ಲದ ದೋಣಿಯಂತಾಗಿದೆ ಚಿಕ್ಕಮಗಳೂರು ನಗರಸಭೆ; ಜನಪ್ರತಿನಿಧಿಗಳಿಲ್ಲದೇ ಅಭಿವೃದ್ಧಿ ಕುಂಠಿತ

ಆತನ ಹೆಂಡತಿ ತನ್ನ 3 ವರ್ಷದ ಮಗನ ಜೊತೆ ಮನೆ ಬಿಟ್ಟು ಹೋಗಿದ್ದಳು. 4 ವರ್ಷದ ಮಗಳು ತಂದೆ ಗುಪ್ತ ಜೊತೆಗೆ ಉಳಿದುಕೊಂಡಿದ್ದಳು. ತಾಯಿ ಮನೆ ಬಿಟ್ಟು ಹೋದ ಬಳಿಕ ಮಗಳು ಅಮ್ಮನಿಗಾಗಿ ಅಳುತ್ತಿದ್ದಳು. ತುಂಬಾ ಸಮಯದಿಂದ ಅಳುತ್ತಲೇ ಇದ್ದ ಮಗಳನ್ನು ನೋಡಿದ ತಂದೆ ಅಳು ನಿಲ್ಲಿಸಲು ಯತ್ನಿಸಿದ್ದಾನೆ. ಆದರೆ ಮಗಳು ಅಳು ನಿಲ್ಲಿಸಿರಲಿಲ್ಲ.

ಇದರಿಂದ ಕೋಪಗೊಂಡ ಅಪ್ಪ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮಗಳ ಮೃತದೇಹವನ್ನು ಆಟೋರಿಕ್ಷಾದಲ್ಲೇ ಇಟ್ಟುಕೊಂಡು, ಹೆಂಡತಿಯನ್ನು ಹುಡಕುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Published by: Latha CG
First published: October 31, 2020, 1:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading