ರೋಸ್ ಈರುಳ್ಳಿ ರಫ್ತು ಸ್ಥಗಿತ ತೆರವುಗೊಳಿಸುವಂತೆ ರೈತ ನಿಯೋಗದಿಂದ ಸದಾನಂದಗೌಡರಿಗೆ ಮನವಿ

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸದಾನಂದಗೌಡ, ಕೂಡಲೆ ಕೇಂದ್ರದ‌‌ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಶೀಘ್ರಕ್ರಮಕೈಗೊಳ್ಳಲು ಒತ್ತಾಯಿಸುವುದಾಗಿ ರೈತರಿಗೆ ಭರವಸೆ ನೀಡಿದರು.

news18-kannada
Updated:September 19, 2020, 3:03 PM IST
ರೋಸ್ ಈರುಳ್ಳಿ ರಫ್ತು ಸ್ಥಗಿತ ತೆರವುಗೊಳಿಸುವಂತೆ ರೈತ ನಿಯೋಗದಿಂದ ಸದಾನಂದಗೌಡರಿಗೆ ಮನವಿ
ಕೇಂದ್ರ ಸಚಿವ ಡಿವಿ ಸದಾನಂದಗೌಡ
  • Share this:
ನವದೆಹಲಿ(ಸೆ.19): ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದ ಕೋಲಾರ ಜಿಲ್ಲೆಯ ಈರುಳ್ಳಿ ಬೆಳೆಗಾರರು ಇಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ‌ ಡಿ.ವಿ. ಸದಾನಂದಗೌಡ ಅವರನ್ನು ಭೇಟಿ ಮಾಡಿ ರೋಸ್ ಈರುಳ್ಳಿಯ 'ರಫ್ತು ಸ್ಥಗಿತ'ವನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.

ಕೇಂದ್ರ ಸರ್ಕಾರವು ರೋಸ್‌ ಈರುಳ್ಳಿ ರಫ್ತು ಸ್ಥಗಿತಗೊಳಿಸಿದೆ. ಇದರಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆದ ಸುಮಾರು 10 ಸಾವಿರ ಟನ್ ರೊಸ್ ಈರುಳ್ಳಿ ಹಾಳಾಗಲಿದೆ. ಆದುದರಿಂದ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಯೊಂದಿಗೆ ಸಮಾಲೋಚಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಸಚಿವ ಸದಾನಂದಗೌಡರಲ್ಲಿ ರೈತರ‌ ನಿಯೋಗ‌ ಮನವಿ ಮಾಡಿತು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸದಾನಂದಗೌಡ, ಕೂಡಲೆ ಕೇಂದ್ರದ‌‌ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಶೀಘ್ರಕ್ರಮಕೈಗೊಳ್ಳಲು ಒತ್ತಾಯಿಸುವುದಾಗಿ ರೈತರಿಗೆ ಭರವಸೆ ನೀಡಿದರು.

ಇದನ್ನೂ ಓದಿ: Karnataka Cabinet Expansion: ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ; ಸುಳಿವು ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ

ಕೇಂದ್ರದ ವಾಣಿಜ್ಯ ಮತ್ರು ಕೈಗಾರಿಕ ಸಚಿವರು ಮತ್ತು ಕೃಷಿ ಸಚಿವರಿಗೆ ಸದಾನಂದಗೌಡ ಪತ್ರ ಬರೆದು ರೋಸ್ ಈರುಳ್ಳಿಯ 'ರಫ್ತು ಸ್ಥಗಿತ'ವನ್ನು ತೆರವುಗೊಳಿಸುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
Published by: Ganesh Nachikethu
First published: September 19, 2020, 3:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading