HOME » NEWS » National-international » FACEBOOK BANS FORMER US PRESIDENT DONALD TRUMP FOR 2 YEARS MAK

Donald Trump: ಟ್ವಿಟರ್​ ಬೆನ್ನಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಖಾತೆಗೆ 2 ವರ್ಷ ನಿಷೇಧ ಹೇರಿದ ಫೇಸ್‌ಬುಕ್!

ಜನವರಿ 6 ರ ದಂಗೆಗೆ ಡೊನಾಲ್ಡ್​ ಟ್ರಂಪ್ ಪ್ರಚೋಧನೆ ನೀಡಿರುವುದು ದೃಢವಾಗಿದೆ. ಆದಕಾರಣ ಅವರನ್ನು ಖಾತೆಯನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿದೆ ಎಂದು ಫೇಸ್​ಬುಕ್ ತಿಳಿಸಿದೆ.

news18-kannada
Updated:June 4, 2021, 11:48 PM IST
Donald Trump: ಟ್ವಿಟರ್​ ಬೆನ್ನಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಖಾತೆಗೆ 2 ವರ್ಷ ನಿಷೇಧ ಹೇರಿದ ಫೇಸ್‌ಬುಕ್!
ಡೊನಾಲ್ಡ್ ಟ್ರಂಪ್.
  • Share this:
ನ್ಯೂಯಾರ್ಕ್​ (ಜೂನ್ 04); ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸಮಾಜದಲ್ಲಿ ದ್ವೇಷವನ್ನು ಹುಟ್ಟುಹಾಕುವ ವಿಚಾರಗಳನ್ನು ಹಂಚಿಕೊಳ್ಳಲು ಮುಂದಾಗಿದ್ದರು. ಪರಿಣಾಮ ಜನವರಿ 6 ರಂದು ಡೊನಾಲ್ಡ್​ ಟ್ರಂಪ್ ಬೆಂಬಲಿಗರು ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಲ್ಲಿನ ಸಂಸತ್​ ಮೇಲೆ ದಾಳಿ ನಡೆಸಿದ್ದರು. ಪರಿಣಾಮ ನಾಲ್ಕು ಜನ ಮೃತಪಟ್ಟಿದ್ದರು. ಈ ಘಟನೆಯ ನಂತರ ಇದಕ್ಕೆ ಟ್ರಂಪ್ ಅವರೇ ಕಾರಣ ಎಂದು ಆರೋಪಿಸಿದ್ದ ಟ್ವಿಟರ್​ ಸಂಸ್ಥೆ ಅವರನ್ನು ಟ್ವಿಟರ್​ನಿಂದ ನಿಷೇಧಿಸಿತ್ತು. ಇದೀಗ ಟ್ವಿಟರ್​ ಬೆನ್ನಿಗೆ ಫೇಸ್​ಬುಕ್ ಸಹ "ಜನವರಿ 6 ರ ದಂಗೆಗೆ ಡೊನಾಲ್ಡ್​ ಟ್ರಂಪ್ ಪ್ರಚೋಧನೆ ನೀಡಿರುವುದು ದೃಢವಾಗಿದೆ. ಆದಕಾರಣ ಅವರನ್ನು ಖಾತೆಯನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿದೆ" ಎಂದು ತಿಳಿಸಿದೆ.

ಈ ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ಫೇಸ್​ಬುಕ್ ಉಪಾಧ್ಯಕ್ಷ ನಿಕ್ ಕ್ಲೆಗ್, "ಡೊನಾಲ್ಡ್​ ಟ್ರಂಪ್ ಅವರ ಖಾತೆಯನ್ನು ಫೇಸ್​ಬುಕ್​ನಲ್ಲಿ ಎರಡು ವರ್ಷಗಳ ಕಾಲ ನಿಷೇಧಿಸಲಾಗಿದೆ. ಆದರೆ, ಈ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಸುರಕ್ಷತೆಗೆ ಎಷ್ಟರ ಮಟ್ಟಿಗೆ ಅಪಾಯ ಕಡಿಮೆಯಾಗಿದೆ ಎಂದು ನಿರ್ಣಯಿಸಲು ನಾವು ತಜ್ಞರ ಸಲಹೆ ಪಡೆಯುತ್ತೇವೆ. ಹಿಂಸಾಚಾರದ ನಿದರ್ಶನಗಳು, ಶಾಂತಿಯುತ ಸಭೆ ಮತ್ತು ನಾಗರಿಕ ಅಶಾಂತಿಯ ಇತರ ಗುರುತುಗಳು ಸೇರಿದಂತೆ ಬಾಹ್ಯ ಅಂಶಗಳನ್ನು ನಾವು ಮೌಲ್ಯಮಾಪನ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.

ಈ ಹಿಂದೆ ಫೇಸ್​ಬುಕ್ ಸಂಸ್ಥಾಪದ ಅಧ್ಯಕ್ಷ ಸಿಇಓ ಮಾರ್ಕ್ ಜುಕರ್‌ಬರ್ಗ್ ಫೇಸ್​ಬುಕ್​ನಲ್ಲಿ ವಿವಾದಾತ್ಮಕ ನೀತಿ ಒಂದನ್ನು ಜಾರಿಗೆ ತಂದಿದ್ದರು. ಈ ನೀತಿಯು ರಾಜಕಾರಣಿಗಳಿಗೆ ಕೆಲವು ಸ್ವಯಂ ಚಾಲಿತ ವಿನಾಯಿತಿಗಳನ್ನು ನೀಡುವಂತಿದ್ದವು. ಈ ನೀತಿ ಇದೀಗ ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದು, ಈ ನೀತಿಯನ್ನೇ ಕೊನೆಗೊಳಿಸಲು ಇದೀಗ ಫೇಸ್‌ಬುಕ್ ಯೋಜಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ತೀವ್ರ ಜನಾಕ್ರೋಶ: ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಸುವ ಆದೇಶವನ್ನು ಹಿಂಪಡೆದ ಪಂಜಾಬ್ ಸರ್ಕಾರ

"ಕಂಪನಿಯ ಅರೆ-ಸ್ವತಂತ್ರ ಮೇಲ್ವಿಚಾರಣಾ ಮಂಡಳಿಯ ಶಿಫಾರಸುಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮವು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅನಿರ್ದಿಷ್ಟಾವಧಿಯವರೆಗೆ ಅಮಾನತುಗೊಳಿಸುವ ಫೇಸ್‌ಬುಕ್‌ನ ನಿರ್ಧಾರವನ್ನು ಕಳೆದ ತಿಂಗಳು ಎತ್ತಿಹಿಡಿದಿದೆ. ಇದೇ ಕಾರಣಕ್ಕೆ ಇದೀಗ ಅವರ ಖಾತೆಯನ್ನು ಎರಡು ವರ್ಷಗಳ ಅವಧಿಗೆ ನಿರ್ಬಂಧಿಸಲಾಗಿದೆ. ಆದರೆ ಮುಂದಿನ 6 ತಿಂಗಳೊಳಗೆ ಅವರ ಖಾತೆಯನ್ನು ಎರಡು ವರ್ಷಗಳ ನಂತರ ಏನು ಮಾಡಬೇಕು ಎಂದು ಕಂಪನಿಯು ನಿರ್ಧರಿಸಲಿದೆ" ಎಂದು ಫೇಸ್​ಬುಕ್ ಉಪಾಧ್ಯಕ್ಷ ನಿಕ್ ಕ್ಲೆಗ್ ತಿಳಿಸಿದ್ದಾರೆ.

ಇದನ್ನೂ ಓದಿ: Pinarayi Vijayan: ಬಜೆಟ್​ನಲ್ಲಿ 20,000 ಕೋಟಿ ವಿಶೇಷ ಕೋವಿಡ್​ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ!

ಈ ಹಿಂದೆ ಟ್ವಿಟರ್​ ಸಂಸ್ಥೆ ತನ್ನ ಖಾತೆಯನ್ನು ನಿರ್ಬಂಧಿಸಿದ್ದ ಸಂದರ್ಭದಲ್ಲಿ ಡೊನಾಲ್ಡ್​ ಟ್ರಂಪ್​, ಟ್ವಿಟರ್​ ಅನ್ನೇ ಹೋಲುವ ಮತ್ತೊಂದು ಸಾಮಾಜಿಕ ಜಾಲತಾಣವನ್ನು ತಾನೇ ನಿರ್ಮಾಣ ಮಾಡಿದ್ದರು. ಮೂಲತಃ ದೊಡ್ಡ ಉದ್ಯಮಿಯೂ ಆಗಿರುವ ಅವರು ಈಗಾಗಲೇ ಟ್ವಿಟರ್​ಗೆ ಪೈಪೋಟಿ ನೀಡುವ ಸೂಚನೆ ನೀಡಿದ್ದರು. ಆದರೆ, ಆನಂತರ ಈ ವಿಚಾರದ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ. ಇದೀಗ ಫೇಸ್​ಬುಕ್​ ಸಹ ಅವರ ಖಾತೆಯನ್ನು ಎರಡು ವರ್ಷಗಳ ಕಾಲಕ್ಕೆ ನಿಷೇಧಿಸಿದ್ದು, ಯಾವಾಗಲೂ ವಿವಾದಗಳಿಂದಲೇ ಗುರುತಿಸಿಕೊಳ್ಳುವ ಡೋನಾಲ್ಡ್​ ಟ್ರಂಪ್ ಇದೀಗ ಏನು ಮಾಡಲಿದ್ದಾರೆ? ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: MAshok Kumar
First published: June 4, 2021, 11:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories