HOME » NEWS » National-international » CRPF ASSISTANT COMMANDANT KILLED 10 INJURED IN CHHATTISGARH SUKMA NAXAL ATTACK SCT

ಛತ್ತೀಸ್​ಗಢದಲ್ಲಿ ನಕ್ಸಲರಿಂದ ಐಇಡಿ ದಾಳಿ; ಸಿಆರ್​ಪಿಎಫ್ ಯೋಧ ಸಾವು, 10 ಮಂದಿಗೆ ಗಂಭೀರ ಗಾಯ

ಸಿಆರ್​ಪಿಎಫ್​ ಪಡೆ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ನಿನ್ನೆ ರಾತ್ರಿ 10 ಗಂಟೆಗೆ ಈ ಘಟನೆ ಸಂಭವಿಸಿದೆ. ಗಾಯಗೊಂಡ 10 ಮಂದಿ ಯೋಧರನ್ನು ಏರ್​ಲಿಫ್ಟ್​ ಮಾಡುವ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ

news18-kannada
Updated:November 29, 2020, 9:18 AM IST
ಛತ್ತೀಸ್​ಗಢದಲ್ಲಿ ನಕ್ಸಲರಿಂದ ಐಇಡಿ ದಾಳಿ; ಸಿಆರ್​ಪಿಎಫ್ ಯೋಧ ಸಾವು, 10 ಮಂದಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
  • Share this:
ಸುಕ್ಮಾ (ನ. 29): ನಕ್ಸಲರು ನಡೆಸಿದ ದಾಳಿಯಿಂದ ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯಲ್ಲಿ ಓರ್ವ ಸಿಆರ್​​ಪಿಎಫ್​ ಯೋಧ ಹುತಾತ್ಮರಾಗಿದ್ದಾರೆ. ಶನಿವಾರ ರಾತ್ರಿ ಸುಕ್ಮಾ ಜಿಲ್ಲೆಯ ತಾಲ್ಮೆತಲ ಪ್ರದೇಶದಲ್ಲಿ ನಕ್ಸಲರು ದಾಳಿ ನಡೆಸಿ, ಐಇಡಿ ಸ್ಫೋಟಿಸಿದ್ದಾರೆ. ಈ ಘಟನೆಯಲ್ಲಿ ಸಿಆರ್​ಪಿಎಫ್​ ಯೋಧ ಸಾವನ್ನಪ್ಪಿದ್ದು, 10 ಯೋಧರಿಗೆ ಗಂಭೀರ ಗಾಯಗಳಾಗಿವೆ.

ಸಿಆರ್​ಪಿಎಫ್​ ಪಡೆ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ನಿನ್ನೆ ರಾತ್ರಿ 10 ಗಂಟೆಗೆ ಈ ಘಟನೆ ಸಂಭವಿಸಿದೆ. ಎರಡು ಸುಧಾರಿತ ಐಇಡಿಗಳು ಸ್ಫೋಟಗೊಂಡ ಪರಿಣಾಮ 11 ಮಂದಿ ಗಾಯಗೊಂಡಿದ್ದರು. ಅವರಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಗಾಯಗೊಂಡಿದ್ದ ಎಲ್ಲ ಯೋಧರು ಸಿಆರ್​ಪಿಎಫ್​ನ ಕೋಬ್ರಾ 206ನೇ ಬೆಟಾಲಿಯನ್​ಗೆ ಸೇರಿದವರಾಗಿದ್ದಾರೆ.


ಸಿಆರ್​ಪಿಎಫ್​ ಕಮಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್ (ಕೋಬ್ರಾ) 206 ಬೆಟಾಲಿಯನ್ ಅಸಿಸ್ಟೆಂಟ್ ಕಮಾಂಡೆಂಟ್ ನಿತಿನ್ ಭಲೇರಾವ್ ನಿನ್ನೆ ನಕ್ಸಲರು ನಡೆಸಿದ ಸ್ಫೋಟದಲ್ಲಿ ಹುತಾತ್ಮರಾಗಿದ್ದಾರೆ. ಗಾಯಗೊಂಡ 10 ಮಂದಿ ಯೋಧರನ್ನು ಏರ್​ಲಿಫ್ಟ್​ ಮಾಡುವ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಎಎನ್​ಐ ವರದಿ ಮಾಡಿದೆ.ನಿನ್ನೆ ರಾತ್ರಿ ನಕ್ಸಲರ ವಿರುದ್ಧದ ಕಾರ್ಯಾಚರಣೆಗೆ ಸಿಆರ್​ಇಎಫ್​ನ ಯೋಧರ ತಂಡ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳು ತೆರಳಿದ್ದರು. ಈ ವೇಳೆ ನಕ್ಸಲರು ಸ್ಫೋಟಿಸಿದ ಐಇಡಿಯಿಂದ ಓರ್ವ ಅಧಿಕಾರಿ ಸಾವನ್ನಪ್ಪಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಬಚಾವಾಗಿದ್ದಾರೆ ಎಂದು ಬಾಸ್ಟರ್​ನ ಐಜಿಪಿ ಪಿ. ಸುಂದರ್ ರಾಜ್ ತಿಳಿಸಿದ್ದಾರೆ.
Published by: Sushma Chakre
First published: November 29, 2020, 9:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading