HOME » NEWS » National-international » COVID 19 VACCINES EXPORTS WILL BEGIN ON WEDNESDAY SESR

Covid-19 Vaccines: ಬುಧವಾರದಿಂದ ನೆರೆಯ ದೇಶಗಳಿಗೆ ಕೋವಿಡ್​ ಲಸಿಕೆ ರಫ್ತು ಕಾರ್ಯಾರಂಭ

ಭಾರತ ನೆರೆಯ ಭೂತಾನ್​, ನೇಪಾಳ, ಬಾಂಗ್ಲಾದೇಶ, ಮಾಲ್ಡೀವ್ಸ್​, ಸೀಶೆಲ್ಸ್​ , ಬಾಂಗ್ಲಾದೇಶಗಳಿಗೆ ಲಸಿಕೆ ರಫ್ತು ಮಾಡಲಾಗುವುದು ಎಂದು ಪ್ರಧಾನಿಗಳು ಟ್ವೀಟ್​ ಮೂಲಕ ತಿಳಿಸಿದ್ದಾರೆ.

news18-kannada
Updated:January 20, 2021, 6:37 AM IST
Covid-19 Vaccines: ಬುಧವಾರದಿಂದ ನೆರೆಯ ದೇಶಗಳಿಗೆ ಕೋವಿಡ್​ ಲಸಿಕೆ ರಫ್ತು ಕಾರ್ಯಾರಂಭ
ಕೊರೋನಾ ಲಸಿಕೆ.
  • Share this:
ನವದೆಹಲಿ (ಜ. 19): ವಿಶ್ವದ ಅತಿದೊಡ್ಡ ಔಷಧ ತಯಾರಿಕೆ ದೇಶಗಳಲ್ಲಿ ಒಂದಾಗಿರುವ ಭಾರತ ಬುಧವಾರದಿಮದ ನವಿದೇಶಗಳಿಗೆ ಕೋವಿಡ್​- 19 ಲಸಿಕೆ ರಫ್ತು ಮಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈಗಾಗಲೇ ದೇಶದಲ್ಲಿ ಲಸಿಕೆ ವಿತರಣೆ ಕಾರ್ಯ ಆರಂಭ ಮಾಡಿರುವ ಭಾರತ ನೆರೆಯ ಭೂತಾನ್​, ನೇಪಾಳ, ಬಾಂಗ್ಲಾದೇಶ, ಮಾಲ್ಡೀವ್ಸ್​, ಸೀಶೆಲ್ಸ್​ , ಬಾಂಗ್ಲಾದೇಶಗಳಿಗೆ ಲಸಿಕೆ ವಿತರಿಸುವ ಕುರಿತು ತಿಳಿಸಿದೆ. ನೆರೆಯ ಮತ್ತು ದೇಶದೊಂದಿಗೆ ಉತ್ತಮ ಬಾಂಧವ್ಯಹೊಂದಿರುವ ಪ್ರಮುಖ ದೇಶಗಳಿಂದ ಲಸಿಕೆ ಪೂರೈಸುವಂತೆ ಹಲವು ಮನವಿಗಳಿಗೆ ಸ್ವೀಕರಿಸಲಾಗಿದೆ. ಕೋವಿಡ್​ ಸಾಂಕ್ರಾಮಿಕ ವಿರುದ್ಧ ಹೋರಾಡುವ ಹೇಳಿಕೆಗೆ ಭಾತದ ಬದ್ಧವಾಗಿದ್ದು, ನೆರೆಯ ದೇಶಗಳಿಗೆ ಅನುದಾನದ ಸಹಾಯದಡಿ ಲಸಿಕೆಗಳನ್ನು ನಾಳೆಯಿಂದ ರಫ್ತು ಮಾಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.



ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ದೃಢಪಡಿಸಿದ್ದು, ಆರೋಗ್ಯ ಸೇವೆ ಜಾಗತಿಕ ಸಮುದಾಯಕ್ಕೆ ಬೇಕಾಗಿದೆ. ಈ ಹಿನ್ನಲೆ ನಾಳೆಯಿಂದಲೇ ಕೋವಿಡ್​ ಲಸಿಕೆ ರಫ್ತು ಮಾಡಲಾಗುವುದು ಎಂದಿದ್ದಾರೆ.

ಪುಣೆ ಮೂಲದ ಸೀರಮ್​ ಇನ್​ಸ್ಟಿಟ್ಯೂಟ್​ ತಯಾರಿಸಿರುವ ಆಕ್ಸ್​ಫರ್ಡ್​ ಆಸ್ಟ್ರಾಝೆನಿಕಾ ಸಂಸ್ಥೆಯ ಕೋವಿಶೀಲ್ಡ್​​ ಲಸಿಕೆಗಳನ್ನು ಬಾಂಗ್ಲಾದೇಶಕ್ಕೆ ನಾಳೆ ರವಾನಿಸಲಾಗುವುದು. ಬ್ಎಜಿಲ್​ ತುರ್ತು ಮನವಿ ಸೇರಿದಂತೆ 12ಕ್ಕೂ ಹೆಚ್ಚು ರಾಷ್ಟ್ರಗಳು ಕೋವಿಡ್​ ಲಸಿಕೆಗೆ ಭಾರತಕ್ಕೆ ಮನವಿ ಸಲ್ಲಿಸಿದೆ.
Published by: Seema R
First published: January 19, 2021, 9:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories