HOME » NEWS » National-international » CENTRE SERVES FINAL NOTICE TO TWITTER ON NEW IT RULES KVD

ಬ್ಲೂ ಟಿಕ್ ರದ್ದು ಬೆನ್ನಲ್ಲೇ Twitterಗೆ ಹೊಸ IT ನಿಯಮಗಳನ್ನು ಪಾಲಿಸುವಂತೆ ಕೇಂದ್ರದಿಂದ ನೋಟಿಸ್

. ಕೇಂದ್ರ ಸರ್ಕಾರ ಹೊಸ ಐಟಿ ನಿಯಮಗಳನ್ನು ರೂಪಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಅದಕ್ಕೆ ಮೇ.15ರವರೆಗೆ ಆಕ್ಷೇಪಣೆಗೆ ಕಾಲಾವಕಾಶ ಕೂಡ ನೀಡಲಾಗಿತ್ತು. ಈ ಹಿನ್ನೆಲೆ ಈಗ ಟ್ವಿಟ್ಟರ್​ಗೆ ಅಂತಿಮ ಸೂಚನೆ ನೀಡಲಾಗಿದೆ.

Kavya V | news18-kannada
Updated:June 5, 2021, 4:11 PM IST
ಬ್ಲೂ ಟಿಕ್ ರದ್ದು ಬೆನ್ನಲ್ಲೇ Twitterಗೆ ಹೊಸ IT ನಿಯಮಗಳನ್ನು ಪಾಲಿಸುವಂತೆ ಕೇಂದ್ರದಿಂದ ನೋಟಿಸ್
ಟ್ವಿಟ್ಟರ್​ಗೆ ನೋಟಿಸ್​
  • Share this:
ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟ್ಟರ್​ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿದೆ. ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿದಂತೆ RSS ಮುಖಂಡರ ಖಾತೆಗಳ ಬ್ಲೂ ಟಿಕ್​​ ರದ್ದು ಬೆನ್ನಲ್ಲೇ ಕೇಂದ್ರ ಸರ್ಕಾರ ಟ್ವಿಟ್ಟರ್​ಗೆ ನೋಟಿಸ್​ ಜಾರಿ ಮಾಡಿದೆ. ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ನೋಟಿಸ್​ ನೀಡಲಾಗಿದೆ. ಕೇಂದ್ರ ಸರ್ಕಾರ ಹೊಸ ಐಟಿ ನಿಯಮಗಳನ್ನು ರೂಪಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಅದಕ್ಕೆ ಮೇ.15ರವರೆಗೆ ಆಕ್ಷೇಪಣೆಗೆ ಕಾಲಾವಕಾಶ ಕೂಡ ನೀಡಲಾಗಿತ್ತು. ಈಗ ಕಾಲಾವಕಾಶ ಮುಕ್ತಾಯಗೊಂಡಿದೆ. ಈಗಾಗಲೇ ವಾಟ್ಸ್ ಆಪ್ ಸೇರಿದಂತೆ ಅನೇಕ ಸೋಷಿಯಲ್ ಮೀಡಿಯಾಗಳಿಗೆ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಂತ ಕೇಂದ್ರ ಸರ್ಕಾರ, ಈಗ ಟ್ವಿಟ್ಟರ್ ಗೆ ಅಂತಿಮ ಸೂಚನೆ ನೀಡಿದೆ.

ಹೊಸ ಐಟಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಪರಿಣಾಮಗಳನ್ನು ಎದುರಿಸಬೇಕಾದಿತು ಎಂದು ಟ್ವಿಟ್ಟರ್​ಗೆ ನೋಟಿಸ್​ನಲ್ಲಿ ಎಚ್ಚರಿಸಲಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮುಖ್ಯ ಅನುಸರಣಾ ಅಧಿಕಾರಿಯವರು ವಿವರಗಳನ್ನು ಒಳಗೊಂಡಂತ ಹೊಸ ಐಟಿ ನಿಯಮಗಳ್ನು ಪಾಲಿಸುವ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಅಂತಿಮ ಸೂಚನೆಯನ್ನು ಪತ್ರದ ಮೂಲಕ ತಿಳಿಸಿದೆ.




ಇಂದು ಟ್ವಿಟ್ಟರ್ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ರದ್ದು ಪಡಿಸಿ ವಿವಾದಕ್ಕೂ ಗುರಿಯಾಗಿತ್ತು. ಆ ನಂತ್ರ ಮರುಸ್ಥಾಪಿಸಿತ್ತು ಕೂಡ. ಇದಾದ ನಂತ್ರ ಈಗ RSS ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ವಿವಿಧ RSS ಮುಖಂಡರಿಗೆ ನೀಡಿದ್ದಂತ ಬ್ಲೂ ಟಿಕ್ ವೆರಿಫಿಕೇಷನ್ ಬ್ಯಾಡ್ಜ್ ಅನ್ನು ರದ್ದುಗೊಳಿಸಿ, RSS ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.

ಆರ್​ಎಸ್​ಎಸ್​ ಜಂಟಿ ಕಾರ್ಯದರ್ಶಿಗಳಾದ ಕೃಷ್ಣ ಗೋಪಾಲ್ ಮತ್ತು ಅರುಣ್ ಕುಮಾರ್, ಆರ್​ಎಸ್​ಎಸ್​ನ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಷಿ ಅಲಿಯಾಸ್ ಭಯ್ಯಾಜಿ, ಮಾಜಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಹಾಗೂ ಆರ್​ಎಸ್​ಎಸ್​ ಸಂಪರ್ಕ ಪ್ರಮುಖ್ ಅನಿರುದ್ಧ ದೇಶಪಾಂಡೆ ಅವರ ಟ್ವಿಟ್ಟರ್​ ಖಾತೆಯ ಬ್ಲೂ ಟಿಕ್​ ಅನ್ನು ಟ್ವಿಟ್ಟರ್​ ರದ್ದುಪಡಿಸಿದೆ.





ಖ್ಯಾತನಾಮರ ಅಧಿಕೃತ ಖಾತೆಗಳು ಎಂದು ಗುರುತಿಸಲು ಟ್ವಿಟರ್​ನಿಂದ ಅಧಿಕೃತವಾಗಿ ಬ್ಲೂ ಟಿಕ್​ ನೀಡಲಾಗುತ್ತೆ. ಈಗ ಆರ್​ಎಸ್​ಎಸ್​ ಮುಖಂಡರ ಖಾತೆಗಳಿಗೆ ಬ್ಲೂ ಟಿಕ್​ ರದ್ದು ಮಾಡಿರುವುದು ವಿವಾದಕ್ಕೆ ಗುರಿಯಾಗಿದೆ. ಟ್ವಿಟ್ಟರ್​​ ನಡೆ ಖಂಡಿಸಿ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Youtube Video

ಇನ್ನುಎರಡು ತಿಂಗಳಲ್ಲೇ ಇಂದು ಅತ್ಯಂತ ಕಡಿಮೆ ಕೊರೋನಾ ಕೇಸುಗಳು ದೇಶದಲ್ಲಿ ಪತ್ತೆಯಾಗಿವೆ. ಹೊಸದಾಗಿ 1,20,529 ಪಾಸಿಟಿವ್​​ ಪ್ರಕರಣಗಳು ಪತ್ತೆ ಆಗಿವೆ. ಇದರಿಂದ ದೇಶದ ಕೊರೋನಾ ಪ್ರಕರಣಗಳ ಸಂಖ್ಯೆ 2,86,94,879ಕ್ಕೆ ಏರಿಕೆ ಆಗಿದೆ. 24 ಗಂಟೆಗಳ ಅವಧಿಯಲ್ಲಿ ಸೋಂಕಿನಿಂದ 3,380 ಜನರ ಸಾವನ್ನಪ್ಪಿದ್ದಾರೆ.‌ ಈವರೆಗೆ ಕೊರೋನಾ ಬಲಿ ಆದವರ ಸಂಖ್ಯೆ 3,44,082 . ಕಳೆದ 24ಗಂಟೆಯಲ್ಲಿ ಗುಣಮುಖ ಆದವರು 1,97,894 ಜನ. ಇದರಿಂದ ಈವರೆಗೆ ಕೊರೋನಾದಿಂದ ಗುಣಮುಖರಾದವರ ಸಂಖ್ಯೆ 2,67,95,549ಕ್ಕೆ ಏರಿಯಾಗಿದೆ. ದೇಶದಲ್ಲಿ ಇನ್ನು 15,55,248 ಸಕ್ರಿಯ ಕೇಸುಗಳಿವೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 5, 2021, 4:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories