Bollywood Drugs Case: ನಟಿ ಶ್ರದ್ಧಾ ಕಪೂರ್​, ಸಾರಾ ಆಲಿಖಾನ್​ಗೆ ಸಮನ್ಸ್​ ಜಾರಿ ಸಾಧ್ಯತೆ

ಸಾರಾ ಆಲಿಖಾನ್​ ಚೊಚ್ಚಲ ಚಿತ್ರ ಕೇದರ್​ನಾಥ್​ ಸಿನಿಮಾದಲ್ಲಿ ನಟ ಸುಶಾಂತ್​ರೊಂದಿಗೆ ತೆರೆಹಂಚಿಕೊಂಡಿದ್ದರು. ಆಶಿಕಿ-2, ವಿಲನ್​ ಸೇರಿದಂತೆ ಹಲವಾರು ಹಿಂದಿ ಸಿನಿಮಾದಲ್ಲಿ ನಟಿಸಿರುವ ಶ್ರದ್ಧಾ ಟಾಲಿವುಡ್​ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ.  

news18-kannada
Updated:September 21, 2020, 3:27 PM IST
Bollywood Drugs Case: ನಟಿ ಶ್ರದ್ಧಾ ಕಪೂರ್​, ಸಾರಾ ಆಲಿಖಾನ್​ಗೆ ಸಮನ್ಸ್​ ಜಾರಿ ಸಾಧ್ಯತೆ
ಶ್ರದ್ಧಾ ಕಪೂರ್​ ಹಾಗೂ ಸಾರಾ ಆಲಿಖಾನ್
  • Share this:
ಮುಂಬೈ (ಸೆ.21): ಸುಶಾಂತ್​ ಸಿಂಗ್​ ಸಾವಿನ ಬಳಿಕ ಬಾಲಿವುಡ್​ನಲ್ಲಿ ನಟ-ನಟಿಯರ ಡ್ರಗ್ಸ್​ ಸೇವನೆ ಪ್ರಕರಣ ಸಂಚಲನ ಮೂಡಿಸುತ್ತಿದೆ. ಅನೇಕ ನಟ-ನಟಿಯರೊಂದಿಗೆ ಈ ಪ್ರಕರಣ ತಳಕು ಹಾಕಿಕೊಂಡಿದ್ದು, ಈ ಕುರಿತು ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇನ್ನು ನಟ ಸಾವಿನ ಕುರಿತ ತನಿಖೆಯ ಹೊಸ ಬೆಳವಣಿಗೆಯಲ್ಲಿ ​ ನಟಿ ಶ್ರದ್ಧಾ ಕಪೂರ್​ ಹಾಗೂ ಸಾರಾ ಆಲಿಖಾನ್ ಅವರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ. ನಟನಿಗೆ ಡ್ರಗ್ಸ್​ ನೀಡಲಾಗುತ್ತಿತ್ತು ಎಂಬ ಆರೋಪದಲ್ಲಿ ಈಗಾಗಲೇ ನಟಿ ರಿಯಾ ಚಕ್ರವರ್ತಿ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಸೈಫ್​ ಆಲಿಖಾನ್​ ಪುತ್ರಿ ನಟಿ ಸಾರಾ ಆಲಿಖಾನ್ ​ಕೂಡ ಡ್ರಗ್ಸ್​ ಪೆಡ್ಲರ್​ ಜೊತೆ ಸಂಬಂಧ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆ ಆಕೆಯನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಈ ನಡುವೆ ಬಾಲಿವುಡ್​ನ ಖ್ಯಾತ ಖಳನಟ ಶಕ್ತಿ ಕಪೂರ್​ ಮಗಳು ನಟಿ ಶ್ರದ್ಧಾ ಕಪೂರ್​ ಹೆಸರು ಕೂಡ ಈ ಡ್ರಗ್ಸ್​ ಜಾಲದಲ್ಲಿ ಕೇಳಿಬಂದಿದೆ.

ರಿಯಾ ಚಕ್ರವರ್ತಿ ಡ್ರಗ್ಸ್​ ಪೆಡ್ಲರ್​ಗಳೊಂದಿಗೆ ನಡೆಸಿರುವ ವಾಟ್ಸಾಪ್​​, ಚಾಟಿಂಗ್​​ ಆಧಾರದ ಮೇಲೆ ದಾಖಲಾಗಿರುವ ಪ್ರಕರಣದ ಅಡಿ ಈ ನಟಿಯರಿಗೆ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೊ ಸಮನ್ಸ್​ ಜಾರಿ ಮಾಡುವ ಸಾಧ್ಯತೆ ಇದೆ.. ಈ ವಾರದಲ್ಲಿ ಅವರು ಎನ್​ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆಗೆ ಒಳಪಡಲಿದ್ದಾರೆ ಎನ್ನಲಾಗಿದೆ.

ಸಾರಾ ಆಲಿಖಾನ್​ ಚೊಚ್ಚಲ ಚಿತ್ರ 'ಕೇದರ್​ನಾಥ್'​ ಸಿನಿಮಾದಲ್ಲಿ ನಟ ಸುಶಾಂತ್​ರೊಂದಿಗೆ ತೆರೆಹಂಚಿಕೊಂಡಿದ್ದರು. ಆಶಿಕಿ-2,  ವಿಲನ್​ ಸೇರಿದಂತೆ ಹಲವಾರು ಹಿಂದಿ ಸಿನಿಮಾದಲ್ಲಿ ನಟಿಸಿರುವ ಶ್ರದ್ಧಾ ಟಾಲಿವುಡ್​ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ.

ನಟ ಸುಶಾಂತ್​ ಸಿಂಗ್​ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ನಟಿ ರಿಯಾಚಕ್ರವರ್ತಿ ಹೆಸರು ಬಳಿಕ ಡ್ರಗ್ಸ್​ ಜಾಲದಲ್ಲಿ ತಳುಕು ಹಾಕಿಕೊಂಡಿತ್ತು. ರಿಯಾ ಸುಶಾಂತ್​ ಸಿಂಗ್​ಗೆ ಡ್ರಗ್ಸ್​ ತರಿಸಿಕೊಡುವ ವ್ಯವಸ್ಥೆ ಮಾಡಿದ್ದಳು ಎಂಬುದು ಆಕೆಯ ಮೊಬೈಲ್​ ಸಂದೇಶದಿಂದ ಬಯಲಾಗಿತ್ತು. ಬಳಿಕ ಆಕೆಯನ್ನು ಡ್ರಗ್ಸ್​ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್​ ಸಿಂಗ್​ ಮ್ಯಾನೇಜರ್​ ಶೃತಿ ಮೋದಿ ಮತ್ತು ಮಾಜಿ ಟ್ಯಾಲೆಂಟ್​ ಮ್ಯಾನೇಜರ್​ ಜಯಾ ಸಹಾ ಕೂಡ  ಇಂದು ಸಮನ್ಸ್​ ಜಾರಿ ಮಾಡಲಾಗಿದೆ.

ಇದನ್ನು ಓದಿ: ವಿಚಾರಣೆಗೆ ಹಾಜರಾದ ಅಕುಲ್​ ಬಾಲಾಜಿ-ಸಂತೋಷ್​: ತನಿಖೆಗೆ ಸಹಕರಿಸುವೆವು ಎಂದ ನಟರು

ಸದ್ಯ ಪೊಲೀಸರ ವಶದಲ್ಲಿರುವ ರಿಯಾ ತಮಗೆ ಜಾಮೀನು ಸಲ್ಲಿಸಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ರಿಯಾ ಚಕ್ರವರ್ತಿ ಡ್ರಗ್ಸ್​ ಸೇವಿಸಿಲ್ಲ. ಬೇಕಾದಲ್ಲಿ ಈ ಕುರಿತು ಅವರು ಪರೀಕ್ಷೆಗೆ ಒಳಪಡಲಿದ್ದಾರೆ. ಅವರಿಗೆ ಜಾಮೀನು ನೀಡಬೇಕು ಎಂದು ಒರಿಯಾ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಈ ಪ್ರಕರಣದಲ್ಲಿ ಪ್ರಮುಖವಾಗಿರುವ ಹೆಸರನ್ನು ಹೊಂದಿರುವವರಿಗೆ ಆಕೆ ಎಚ್ಚರಿಸಬಹುದು. ಅಲ್ಲದೇ, ಪ್ರಕರಣದಲ್ಲಿ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇದೆ ಎಂದು ಜಾಮೀನು ನಿರಾಕರಿಸಲಾಗಿತ್ತು.ನಟನ ಸಾವಿನ ಬಳಿಕ ಮಾತನಾಡಿದ ಸುಶಾಂತ್​ ಸ್ನೇಹಿತ ಯುವರಾಜ್ ಎಸ್​ ಸಿಂಗ್​  ಬಾಲಿವುಡ್​ನಲ್ಲಿ ಎ ದರ್ಜೆಯ ನಾಯಕರು ಮಾದಕ ವಸ್ತು ಜಾಲತಾಣದೊಂದಿಗೆ ನಂಟು ಹೊಂದಿದ್ದಾರೆ ಎಂದು ತಿಳಿಸಿದ್ದು. ಇದು ಸಾಕಷ್ಟು ಸಂಚಲನ ಉಂಟುಮಾಡಿತ್ತು. ಇದಾದ ಬಳಿಕ ಶನಿವಾರ  ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ   ಬಾಲಿವುಡ್​ನ ಡ್ಯಾನ್ಸರ್​ ಕಮ್​ ನತ್ಯ ಸಂಯೋಜಕನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.
Published by: Seema R
First published: September 21, 2020, 3:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading