HOME » NEWS » National-international » BOLLYWOOD ACTRESS KANGANA RANAUT CALLS FOR VIOLENCE AGAINST TANDAV WEB SERIES MAKERS MAK

ಇದು ತಲೆ ಕತ್ತರಿಸುವ ಸಮಯ; ತಾಂಡವ್​ ವೆಬ್​ ಸಿರೀಸ್​ ತಂಡದ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ ನಟಿ ಕಂಗನಾ

Kangana Ranaut: ಆನ್‌ಲೈನ್ ನಿಂದನೆ, ಟ್ರೋಲಿಂಗ್ ಮತ್ತು ಕಿರುಕುಳವನ್ನು ತಡೆಗಟ್ಟಲು ಕೆಲಸ ಮಾಡುವ ಟೀಮ್ ಸಾಥ್ ಎಂಬ ಸಂಘಟನೆಯು ಕಂಗನಾ ಅವರ ಮಾತುಗಳನ್ನು ಖಂಡಿಸಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.

news18-kannada
Updated:January 19, 2021, 11:33 AM IST
ಇದು ತಲೆ ಕತ್ತರಿಸುವ ಸಮಯ; ತಾಂಡವ್​ ವೆಬ್​ ಸಿರೀಸ್​ ತಂಡದ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ ನಟಿ ಕಂಗನಾ
ನಟಿ ಕಂಗನಾ ರಣಾವತ್​ ಮಾಡಿರುವ ಟ್ವೀಟ್​.
  • Share this:
ವಿವಾದಾತ್ಮಕ ಟ್ವೀಟ್ ಮಾಡುವ ಅಥವಾ ಹೇಳಿಕೆ ನೀಡುವ ಮೂಲಕ ಸದಾ ಚರ್ಚೆಯಲ್ಲಿರುವ ಸುದ್ದಿಯ ಕೇಂದ್ರದಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಇದೀಗ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ಟ್ವೀಟ್ ಮಾಡುವ ಮೂಲಕ ಬಹಿರಂಗವಾಗಿ ಹಿಂಸೆಗೆ ಪ್ರಚೋಧನೆ ನೀಡಿ ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆಯಾದ ವೆಬ್ ಸರಣಿ "ತಾಂಡವ್​" ವಿರುದ್ಧ ಪ್ರತಿಕ್ರಿಯೆ ನೀಡುವ ಭರದಲ್ಲಿ ಕಂಗನಾ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ತಮ್ಮ ಟ್ವೀಟ್​ನಲ್ಲಿ ತಾಂಡವ್ ವೆಬ್​ ಸೀರಿಸ್​ ತಂಡದ ವಿರುದ್ಧ ಕಿಡಿಕಾರಿರುವ ಕಂಗನಾ ರಣಾವತ್, "ಅವರ ತಲೆಗಳನ್ನು ಕತ್ತರಿಸುವ ಸಮಯ" ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ಕಂಗನಾ ಈ ಟ್ವೀಟನ್ನು ನಂತರ ಡಿಲೀಟ್ ಮಾಡಿದ್ದಾರೆಯಾದರೂ, ಅಷ್ಟರಲ್ಲೇ ಅದರ ಸ್ಕ್ರೀನ್ ಶಾರ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು ‌ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಜನವರಿ 18 ರಂದು ತಾಂಡವ್‌ ವೆಬ್ ಸಿರೀಸ್ ಬಗ್ಗೆ ಟ್ವೀಟ್ ಮಾಡಿದ್ದ ದಿ ಅತುಲ್ ಮಿಶ್ರಾ (@TheAtulMishra) ಎಂಬವರಿಗೆ ಪ್ರತಿಕ್ರಿಯಿಸಿರುವ ಕಂಗನಾ, "ಭಗವಾನ್‌ ಕೃಷ್ಣ ಶಿಶುಪಾಲ ಮಾಡಿದ್ದ 99 ಪಾಪಗಳನ್ನು ಕ್ಷಮಿಸಿದ್ದರೂ ಕೂಡಾ..ಮೊದಲು ಶಾಂತಿ ನಂತರ ಕ್ರಾಂತಿಯಾಗಬೇಕು. ಅವರ ತಲೆಗಳನ್ನು ಕತ್ತರಿಸುವ ಸಮಯವಾಗಿದೆ, ಜೈ ಶ್ರೀ ಕೃಷ್ಣ" ಎಂದು ಬರೆದುಕೊಂಡಿದ್ದಾರೆ. ಅತುಲ್ ಮಿಶ್ರ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ಮಾತ್ರವಲ್ಲದೆ, ಅದನ್ನು ರೀಟ್ವೀಟ್ ಕೂಡಾ ಮಾಡುವ ಮೂಲಕ ಕಂಗನಾ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಇದನ್ನು ಆಲ್ಟ್‌ನ್ಯೂಸ್ ಸಂಸ್ಥಾಪಕ ಝುಬೈರ್‌ ಹಂಚಿಕೊಂಡಿದ್ದು, 3 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಜನಪ್ರಿಯ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿಯೆ ಹಿಂಸೆಗೆ ಕರೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅದನ್ನು ಮತ್ತೇ ರೀಟ್ವೀಟ್ ಮಾಡಿ ಇನ್ನಷ್ಟು ಜನರಿಗೆ ತಲುಪುವಂತೆ ಮಾಡುತ್ತಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಳ್ಳುವಿರೇ ಎಂದು ಟ್ವೀಟ್ಟರ್‌ ನಿಯಂತ್ರಕರಿಗೆ ಪ್ರಶ್ನಿಸಿದ್ದಾರೆ.ಆನ್‌ಲೈನ್ ನಿಂದನೆ, ಟ್ರೋಲಿಂಗ್ ಮತ್ತು ಕಿರುಕುಳವನ್ನು ತಡೆಗಟ್ಟಲು ಕೆಲಸ ಮಾಡುವ ಟೀಮ್ ಸಾಥ್ ಎಂಬ ಸಂಘಟನೆಯು ಕಂಗನಾ ಅವರ ಮಾತುಗಳನ್ನು ಖಂಡಿಸಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಹಲವರು ಕಂಗನಾ ಅವರ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆದರೆ, ತಮ್ಮ ಮೇಲಿನ ಆರೋಪಗಳಿಗೆ ಮತ್ತೊಂದು ಟ್ವೀಟ್​ ಮೂಲಕ ಪ್ರತ್ಯುತ್ತರ ನೀಡಿರುವ ನಟಿ ಕಂಗನಾ, "ನಿಮ್ಮ ತಲೆಗಳನ್ನು ಕತ್ತರಿಸಲು ನಾನು ಹೇಳಿಲ್ಲ" ಎಂದು ಸ್ಪಷ್ಟೀಕರಣ ನೀಡಿದ್ದಾರೆ.ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿರುವ ಸೈಫ್ ಅಲಿಖಾನ್ ಮತ್ತು ಡಿಂಪಲ್ ಕಪಾಡಿಯ ನಟಿಸಿರುವ ಹೊಸ ವೆಬ್ ಸೀರೀಸ್ ಆದ‌ ‘ತಾಂಡವ್‌’ನಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂಬ ಆರೋಪವೆದ್ದಿದೆ. ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್, ಇದರ ನಿರ್ಮಾಪಕರು, ನಿರ್ದೇಶಕರು ಮತ್ತು ನಟರ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೆ ಉತ್ತರ ಪ್ರದೇಶದಲ್ಲಿಯೂ ಪ್ರಕರಣ ದಾಖಲಾಗಿದ್ದು, ಬಂಧನದ ಎಚ್ಚರಿಕೆ ನೀಡಲಾಗಿದೆ.
Published by: MAshok Kumar
First published: January 19, 2021, 11:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories