HOME » NEWS » National-international » BJPS IMAGE GETTING TARNISHED DUE TO INCOMPLETE DEVELOPMENT WORK UTTARKHAND MLA MAK

ಅಭಿವೃದ್ಧಿ ಸ್ಥಗಿತವಾಗಿರುವ ಕಾರಣ ಸಮಾಜದಲ್ಲಿ ಬಿಜೆಪಿಯನ್ನು ಕಳಂಕಿತಗೊಳಿಸಲಾಗುತ್ತಿದೆ; ಜೆಪಿ ನಡ್ಡಾಗೆ ಬಿಜೆಪಿ ಶಾಸಕನ ಪತ್ರ

ಉತ್ತರಾಖಂಡದ ವಿಧಾನಸಭೆಯಲ್ಲಿ ಡೆಹ್ರಾಡೂನ್ ಜಿಲ್ಲೆಯ ರಾಯಪುರ ಕ್ಷೇತ್ರವನ್ನು ಪ್ರತಿನಿಧಿಸುವ ಉಮೇಶ್ ಶರ್ಮಾ ಕೌ, ಕಳೆದ ಕೆಲವು ವರ್ಷಗಳಿಂದ ತಮ್ಮ ವಿಧಾನಸಭಾ ವಿಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಆರೋಪಿಸಿ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.

MAshok Kumar | news18
Updated:September 4, 2020, 6:03 PM IST
ಅಭಿವೃದ್ಧಿ ಸ್ಥಗಿತವಾಗಿರುವ ಕಾರಣ ಸಮಾಜದಲ್ಲಿ ಬಿಜೆಪಿಯನ್ನು ಕಳಂಕಿತಗೊಳಿಸಲಾಗುತ್ತಿದೆ; ಜೆಪಿ ನಡ್ಡಾಗೆ ಬಿಜೆಪಿ ಶಾಸಕನ ಪತ್ರ
ಬಿಜೆಪಿ ಶಾಸಕ ಉಮೇಶ್ ಶರ್ಮಾ ಕೌ.
  • News18
  • Last Updated: September 4, 2020, 6:03 PM IST
  • Share this:
ಡೆಹರಾಡೂನ್‌: ಅಭಿವೃದ್ಧಿಗೆ ಸಂಬಂಧಿಸಿದಂತೆ ನನ್ನ ಕ್ಷೇತ್ರವನ್ನು ನಿರ್ಲಕ್ಷಿಸಲಾಗುತ್ತಿದೆ. ಅಧಿಕಾರಿಗಳು ಈವರೆಗೆ ನ್ನನ ಕ್ಷೇತ್ರದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಇದರಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಕಳಂಕಿತ ಚಿತ್ರಣವನ್ನು ಮೂಡಿಸಲಾಗುತ್ತಿದೆ ಎಂದು ಆರೋಪಿಸಿ ಡೆಹ್ರಾಡೂನ್‌ನ ರಾಯಪುರ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಶರ್ಮಾ ಗುರುವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರದ ಮೂಲಕ ಆರೋಪಿಸಿದ್ದಾರೆ. "ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್‌ಗೆ ಕಳೆದ ಎರಡು ವರ್ಷದಿಂದ ಪದೇ ಪದೇ ವಿನಂತಿಸಿದರೂ, ನನ್ನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿಲ್ಲ. ಇನ್ನೂ ಅಧಿಕಾರಿಗಳೂ ಸಹ ನನ್ನ ಸೂಚನೆಯನ್ನು ಪಾಲಿಸುತ್ತಿಲ್ಲ. ಹೀಗಾಗಿ ಜನರ ಮುಂದೆ ನಾನು ಮತ್ತು ಪಕ್ಷ ಕಳಂಕಿತರೆಂಬಂತಹ ಚಿತ್ರಣ ಮೂಡುತ್ತಿದೆ" ಎಂದು ಆ ಪತ್ರದಲ್ಲಿ ಉಲ್ಲೇಖಿಸಲಾಗುತ್ತಿದೆ.

ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧ ರಾಜ್ಯದ ಹಲವು ಶಾಸಕರು ಈ ಮುಂಚೆಯೂ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆಯುವ ಮೂಲಕ ಸಮರ ಸಾರಿದ್ದರು. ಈ ಸಾಲಿಗೆ ಇದೀಗ ಮತ್ತೊಬ್ಬ ಶಾಸಕ ಸೇರ್ಪಡೆಯಾಗಿದ್ದು, ಉತ್ತಾಖಂಡ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಉತ್ತರಾಖಂಡದ ವಿಧಾನಸಭೆಯಲ್ಲಿ ಡೆಹ್ರಾಡೂನ್ ಜಿಲ್ಲೆಯ ರಾಯಪುರ ಕ್ಷೇತ್ರವನ್ನು ಪ್ರತಿನಿಧಿಸುವ ಉಮೇಶ್ ಶರ್ಮಾ ಕೌ, ಕಳೆದ ಕೆಲವು ವರ್ಷಗಳಿಂದ ತಮ್ಮ ವಿಧಾನಸಭಾ ವಿಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಆರೋಪಿಸಿ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.

ಇದೇ ರೀತಿ ಚುನಾಯಿತ ಶಾಸಕರನ್ನು ಅಧಿಕಾರಶಾಹಿಗಳು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಪಕ್ಷದ ಮತ್ತೊಬ್ಬ ಶಾಸಕ ಮತ್ತು ಉತ್ತರಾಖಂಡದ ಮಾಜಿ ಬಿಜೆಪಿ ಮುಖ್ಯಸ್ಥ ಬಿಶನ್ ಸಿಂಗ್ ಚುಫಾಲ್ ಕೂಡ ಅವರ ಕುಂದುಕೊರತೆಗಳಿಗೆ ಪರಿಹಾರ ಕೋರಿ ನಡ್ಡಾ ಅವರನ್ನು ಭೇಟಿಯಾಗಿದ್ದರು.

ಇನ್ನು ತಮ್ಮ ಕ್ಷೇತ್ರದ ತೊಂದರೆಗಳ ಬಗ್ಗೆ ವಿವರವಾಗಿ ತಿಳಿಸುವ ಉದ್ದೇಶದಿಂದ ನಡ್ಡಾ ಅವರೊಂದಿಗೆ ಸಮಯ ಕೋರಿದ್ದು, ರಾಯ್‌ಪುರದ ನಿರ್ಲಕ್ಷ್ಯದ ಬಗ್ಗೆ ಅವರ ಪಕ್ಷದ ಕಾರ್ಯಕರ್ತರು ತೀವ್ರವಾಗಿ ದುಖಿಃತರಾಗಿದ್ದಾರೆ ಎಂದು ಒತ್ತಿಹೇಳಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಅಭಿವೃದ್ಧಿ ಕೆಲಸ ಮಾಡದ ರಾಜ್ಯ ಸರ್ಕಾರದ ಬಗ್ಗೆ ಬೇಸರವಿದೆ ಎಂದು ತಮ್ಮ ಪತ್ರದಲ್ಲಿ ಉಮೇಶ್ ಶರ್ಮಾ ಕೌ ತಿಳಿಸಿದ್ದಾರೆ.

ಇದನ್ನೂ ಓದಿ : NEET, JEE 2020 Exam: ಪರೀಕ್ಷೆ ಮುಂದೂಡುವಂತೆ ಕೋರಿ 6 ರಾಜ್ಯಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ

ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜ್ಯ ಸರ್ಕಾರದಲ್ಲಿ ಸದ್ಯ ಮೂರು ಸಚಿವ ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಬಗ್ಗೆ ಸಿಎಂ ತಿಳಿಸಿದ್ದರು. ಕೌ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಆರೋಪವಿದೆ.

ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಉಮೇಶ್ ಶರ್ಮಾ ಕೌ, "ನಾನು ಕ್ಯಾಬಿನೆಟ್‌ನಲ್ಲಿ ಸೇರ್ಪಡೆಗೊಳ್ಳಲು ಬಯಸಿದರೆ, 2017 ರಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು ಧ್ವನಿ ಎತ್ತುತ್ತಿದ್ದೆ. ನಾನು ಈಗ ಅದನ್ನು ಏಕೆ ಬಯಸಬೇಕು? ನಾನು ರಾಜ್ಯ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಬಗೆಗಳಲ್ಲಿ ಪಕ್ಷಕ್ಕೆ ಕೊಡುಗೆ ನೀಡಿದ್ದೇನೆ. ಆದರೆ, ಪ್ರಸ್ತುತ ನಾನು ನನ್ನ ಕ್ಷೇತ್ರದ ಸಮಸ್ಯೆಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಇದನ್ನು ನಾನು ಮುಖ್ಯಮಂತ್ರಿಯ ವಿರುದ್ಧದ ಷಡ್ಯಂತ್ರ ಅಥವಾ ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಲು ನಾನು ಒತ್ತಡ ಹೇರುತ್ತಿದ್ದೇನೆ ಎಂದು ನೋಡಬಾರದು" ಎಂದು ತಿಳಿಸಿದ್ದಾರೆ.
Published by: MAshok Kumar
First published: September 4, 2020, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading