Laungi Bhuiyan - ಏಕಾಂಗಿಯಾಗಿ 3 ಕಿಮೀ ಉದ್ದದ ಕಾಲುವೆ ತೋಡಿದ ಬಿಹಾರದ ಲೌಂಗಿ ಭುಯನ್

ಗ್ರಾಮದ ಸುತ್ತಲಿನ ಬೆಟ್ಟ, ಕಾಡುಗಳಲ್ಲಿ ಬಿದ್ದ ಮಳೆಯ ನೀರು ಪೋಲಾಗದೆ ಗ್ರಾಮಕ್ಕೆ ಸಿಗಲೆಂದು 30 ವರ್ಷಗಳ ಹಿಂದೆ ಕೈಂಕರ್ಯ ಆರಂಭಿಸಿದ ಬಿಹಾರದ ಲೋಂಗಿ ಭುಯನ್ ಏಕಾಂಗಿಯಾಗಿ 3 ಕಿಮೀ ಕಾಲುವೆ ತೋಡಿದ್ದಾರೆ.

news18
Updated:September 13, 2020, 2:39 PM IST
Laungi Bhuiyan - ಏಕಾಂಗಿಯಾಗಿ 3 ಕಿಮೀ ಉದ್ದದ ಕಾಲುವೆ ತೋಡಿದ ಬಿಹಾರದ ಲೌಂಗಿ ಭುಯನ್
ಲೋಂಗಿ ಭುಯನ್
  • News18
  • Last Updated: September 13, 2020, 2:39 PM IST
  • Share this:
ಪಾಟ್ನಾ(ಸೆ. 13): ಬಿಹಾರದ ದಶರಥ ಮಾಂಝಿ ಹೆಸರು ನೀವು ಕೇಳಿರಬಹುದು. ‘ಮಾಂಝಿ ದಿ ಮೌಂಟೇನ್ ಮ್ಯಾನ್’ ಬಾಲಿವುಡ್ ಸಿನಿಮಾವನ್ನಾದರೂ ನೋಡಿರಬಹುದು. ಬೆಟ್ಟದಿಂದ ಬಿದ್ದು ತನ್ನ ಹೆಂಡತಿ ಸತ್ತ ನಂತರ ಮಾಂಝಿ 22 ವರ್ಷ ಕಾಲ ಸತತವಾಗಿ ಗುದ್ದಲಿ, ಪಿಕಾಸಿ ಹಿಡಿದು ಬೆಟ್ಟವನ್ನೇ ಕಡಿದು ರಸ್ತೆ ಮಾಡಿದ್ದರು. ಈಗ ಇದೇ ಬಿಹಾರದಲ್ಲಿ ಮಾಂಝಿಯಂಥ ಮತ್ತೊಬ್ಬ ಛಲದಂಕಮಲ್ಲನ ಕಥೆ ಬೆಳಕಿಗೆ ಬಂದಿದೆ. ಗಯಾ ಜಿಲ್ಲೆಯ ಲೋಂಗಿ ಭುಯನ್ ಏಕಾಂಗಿಯಾಗಿ ಕೆಲಸ ಮಾಡಿ ತನ್ನೂರಿಗೆ ಕಾಲುವೆ ನಿರ್ಮಿಸಿದ್ದಾರೆ. 30 ವರ್ಷ ಕಾಲ ಒಬ್ಬರೇ ಕೆಲಸ ಮಾಡಿದ ಅವರು ತೋಡಿದ ಕಾಲುವೆ ಬರೋಬ್ಬರಿ 3 ಕಿಮೀ ಉದ್ದವಿದೆ. ಗಯಾದಿಂದ 80 ಕಿಮೀ ದೂರದಲ್ಲಿರುವ ಕೋತಿಲಾವ ಎಂಬ ಗ್ರಾಮದವರು ಈ ಲೋಂಗಿ ಭುಯನ್.

“ಕಳೆದ 30 ವರ್ಷಗಳಿಂದಲೂ ದನ ಮೇಯಿಸಲು ಸಮೀಪದ ಕಾಡಿಗೆ ಹೋಗುತ್ತಿದ್ದೆ. ಆಗ ಅಲ್ಲಿ ಕಾಲುವೆ ತೋಡುತ್ತಲೇ ಬಂದೆ. ಯಾರೂ ಕೂಡ ನನ್ನ ಕಾರ್ಯಕ್ಕೆ ಕೈಜೋಡಿಸಲಿಲ್ಲ. ಗ್ರಾಮದ ಜನರು ಹಣ ಸಂಪಾದನೆಗೆ ನಗರಕ್ಕೆ ಹೋಗುತ್ತಿದ್ದರೆ ನಾನು ಇಲ್ಲಿಯೇ ಇದ್ದು ಜೈಸಲು ನಿರ್ಧರಿಸಿದೆ” ಎಂದು ಭುಯನ್ ಹೇಳುತ್ತಾರೆ.
ಬೆಟ್ಟ ಗುಡ್ಡ, ಕಾಡುಗಳ ಮಧ್ಯೆ ಕೋತಿಲಾವ ಗ್ರಾಮ ಇರುವುದು. ಆದರೆ, ಬೆಟ್ಟ ಹಾಗು ಕಾಡುಗಳಲ್ಲಿ ಬಿದ್ದ ಮಳೆ ನೀರು ಸೀದಾ ನದಿಗೆ ಹರಿದುಹೋಗುತ್ತಿತ್ತು. ಗ್ರಾಮಕ್ಕೆ ಸರಿಯಾದ ನೀರಿನ ಸೌಲಭ್ಯ ಇರಲಿಲ್ಲ. ಕಾಡಿನಿಂದ ನೀರು ಪೋಲಾಗಿ ಹರಿದುಹೋಗುವುದನ್ನು ಕಂಡು ಭುಯನ್ ವಿಚಲಿತಗೊಂಡಿದ್ದರು. ಆಗಲೇ ಅವರು ಆ ನೀರು ಗ್ರಾಮದವರೆಗೂ ಹರಿದುಬರುವಂತೆ ಕಾಲುವೆ ತೋಡುವ ಕಾರ್ಯಕ್ಕೆ ಭುಯನ್ ಕೈ ಹಾಕಿದರು. ಯಾರೂ ಕೂಡ ಬೆಂಬಲಕ್ಕೆ ಬರದಿದ್ದರೂ ಉತ್ಸಾಹ ಕಳೆದುಕೊಳ್ಳದೆ ದಿನವೂ ಶ್ರಮ ಹಾಕಿ 30 ವರ್ಷಗಳ ಬಳಿಕ ತಮ್ಮ ಕನಸನ್ನು ನನಸು ಮಾಡಿಸಿದರು. ಇದರ ಜೊತೆಗೆ ಗ್ರಾಮಸ್ಥರ ಬದುಕಿಗೂ ಒಂದು ಪ್ರಮುಖ ಆಸರೆ ಒದಗಿಸಿದರು.ಇದನ್ನೂ ಓದಿ: Raghuvansh Prasad Death - ಕ್ರಾಂತಿಕಾರಕ ನರೇಗಾ ಯೋಜನೆಯ ರೂವಾರಿ ರಘುವಂಶ್ ಪ್ರಸಾದ್ ವಿಧಿವಶ

“30 ವರ್ಷಗಳಿಂದ ಅವರು ಏಕಾಂಗಿಯಾಗಿ ಕಾಲುವೆ ತೋಡುತ್ತಿದ್ದಾರೆ. ಇದರಿಂದ ನೀರಾವರಿಗೆ ಹಾಗೂ ಪಶುಗಳಿಗೆ ಪ್ರಯೋಜನವಾಗಲಿದೆ. ಅವರೊಬ್ಬರಿಗಷ್ಟೇ ಅಲ್ಲ ಇಡೀ ಗ್ರಾಮಕ್ಕೆ ಇದರಿಂದ ಪ್ರಯೋಜನವಾಗುತ್ತದೆ” ಎಂದು ಇದೇ ಗ್ರಾಮದ ಪಟ್ಟಿ ಮಾಂಝಿ ಎಂಬುವರು ಹೇಳುತ್ತಾರೆ.
Published by: Vijayasarthy SN
First published: September 13, 2020, 2:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading