ಶೋಪಿಯಾನ್ ಎನ್​ಕೌಂಟರ್ ನಕಲಿ; ಎಎಫ್ಎಸ್​ಪಿ ಕಾಯ್ದೆ ಉಲ್ಲಂಘನೆ; ಶಿಸ್ತಿನ ಕ್ರಮಕ್ಕೆ ಸೇನೆ ಮುಂದು

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಮಶಿಪುರದಲ್ಲಿ ಜುಲೈ 18ರಂದು ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಅಮಾಯಕರು ಬಲಿಯಾದರೆಂಬ ಆರೋಪ ಕೇಳಿಬಂದಿತ್ತು. ಇದೀಗ ಅದೊಂದು ನಕಲಿ ಎನ್ಕೌಂಟರ್ ಆಗಿದ್ದಿರಬಹುದು ಎಂದು ಸೇನೆ ಕೂಡ ಒಪ್ಪಿಕೊಂಡಿದೆ.

news18-kannada
Updated:September 19, 2020, 8:58 AM IST
ಶೋಪಿಯಾನ್ ಎನ್​ಕೌಂಟರ್ ನಕಲಿ; ಎಎಫ್ಎಸ್​ಪಿ ಕಾಯ್ದೆ ಉಲ್ಲಂಘನೆ; ಶಿಸ್ತಿನ ಕ್ರಮಕ್ಕೆ ಸೇನೆ ಮುಂದು
ಭಾರತೀಯ ಸೇನೆ
  • Share this:
ಶ್ರೀನಗರ: ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಮೂವರು ವ್ಯಕ್ತಿಗಳನ್ನ ಹತ್ಯೆಗೈದಿದ್ದವು. ಆದರೆ, ಅದು ನಕಲಿ ಎನ್​ಕೌಂಟರ್ ಎಂಬ ಆರೋಪ ಕೇಳಿಬಂದಿದ್ದವು. ಇದೀಗ ಭಾರತೀಯ ಸೇನೆ ಕೂಡ ಇದು ನಕಲಿ ಕಾರ್ಯಾಚರಣೆಯಾಗಿದ್ದಿರುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿದೆ. ಮೇಲ್ನೋಟಕ್ಕೆ ಈ ಎನ್​ಕೌಂಟರ್ ಅಕ್ರಮವಾಗಿರುವಂತೆ ಕಂಡುಬಂದಿದೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್​ಎಸ್​ಪಿಎ) ಅನ್ನು ದುರ್ಬಳಕೆ ಮಾಡಿಕೊಂಡಿರುವಂತೆ ತೋರುತ್ತಿದೆ ಎಂದು ಸೇನೆ ಹೇಳಿದೆ. ಈ ಎನ್​ಕೌಂಟರ್​ನಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ವಿರುದ್ಧ ಸೇನೆ ಶಿಸ್ತಿನ ಕ್ರಮ ಜರುಗಿಸುತ್ತಿದೆ. ಹಾಗೆಯೇ, ಪೂರ್ಣಪ್ರಮಾಣದಲ್ಲಿ ಘಟನೆಯ ತನಿಖೆ ನಡೆಸಲು ನಿರ್ಧರಿಸಿದೆ.

“ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯಾಚರಿಸುವಾಗ ನಿಗದಿತ ಮಾರ್ಗಸೂಚಿಗೆ ಸಂಪೂರ್ಣ ಬದ್ಧವಾಗಿರಬೇಕಾಗುತ್ತದೆ… ಈ ಘಟನೆಯನ್ನು ಬಹಳ ನ್ಯಾಯಯುತವಾಗಿ ತನಿಖೆ ನಡೆಸಿ ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುತ್ತೇವೆ” ಎಂದು ಭಾರತೀಯ ಸೇನೆ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ತಿಳಿಸಿದರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Agri Reforms - ಕೇಂದ್ರ ಸರ್ಕಾರದ ಕೃಷಿ ಸುಧಾರಣೆಯ ಮಸೂದೆಗಳು: ರೈತರ ಆತಂಕಕ್ಕೆ ಏನು ಕಾರಣ?

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆನಲ್ಲಿರುವ ಅಮಶಿಪುರ ಗ್ರಾಮದಲ್ಲಿ ಜುಲೈ 18ರಂದು ಭದ್ರತಾ ಪಡೆಗಳ ಎನ್​ಕೌಂಟರ್​ನಲ್ಲಿ ಮೂವರು ಉಗ್ರಗಾಮಿಗಳು ಹತರಾದರು ಎಂದು ಸೇನೆ ಹೇಳಿಕೊಂಡಿತ್ತು. ಆದರೆ, ಆ ಕಾರ್ಯಾಚರಣೆಯಲ್ಲಿ ಬಲಿಯಾದ ಮೂವರು ವ್ಯಕ್ತಿಗಳು ಜಮ್ಮುವಿನ ರಜೌರಿ ಜಿಲ್ಲೆಯ ವ್ಯಕ್ತಿಗಳಾಗಿದ್ದು, ಅಮಶಿಪುರದಲ್ಲಿ ಅವರು ಕಾಣೆಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಬಂದಿತು. ಹಾಗೆಯೇ, ಆ ಮೂವರು ವ್ಯಕ್ತಿಗಳ ಕುಟುಂಬದವರು ಜುಲೈ 17ರಂದು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದರು. ಆಗ ಸೇನೆ ಆಂತರಿಕ ತನಿಖೆ ನಡೆಸಿತು. ನಾಲ್ಕು ವಾರಗಳ ಕಾಲ ನಡೆದ ತನಿಖೆಯಲ್ಲಿ ಭದ್ರತಾ ಪಡೆಯ ತಪ್ಪು ಎದ್ದುಕಂಡಿದೆ. ಶೋಪಿಯಾನ್​ನಲ್ಲಿ ನಡೆದದ್ದು ನಕಲಿ ಎನ್​ಕೌಂಟರ್ ಎಂದು ಈ ತನಿಖೆಯಲ್ಲಿ ಸಂಶಯ ವ್ಯಕ್ತವಾಗಿದೆ.

ಶೋಪಿಯಾನ್ ಎನ್​ಕೌಂಟರ್​ನಲ್ಲಿ ಮೃತಪಟ್ಟವರನ್ನು ಇಮ್ತಿಯಾಜ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮೊಹಮ್ಮದ್ ಇಬ್ರಾರ್ ಎಂದು ಗುರುತಿಸಲಾಗಿದೆ. ಈ ಮೂವರು ವ್ಯಕ್ತಿಗಳು ಭಯೋತ್ಪಾದನೆ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರಾ ಇಲ್ಲವಾ ಎಂಬುದನ್ನೂ ಸೇನೆ ಪರಿಶೀಲಿಸುತ್ತಿದೆ. ಹಾಗೆಯೇ ಅವರ ಕಾಲ್ ರೆಕಾರ್ಡ್​​ಗಳನ್ನೂ ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ: Indian Railways - ರೈಲ್ವೆ ಪ್ರಯಾಣ ದರ ನಿಗದಿ ಮಾಡಲು ಖಾಸಗಿಯವರೂ ಸ್ವತಂತ್ರ: ಸರ್ಕಾರ

ಆ ಮೂವರು ವ್ಯಕ್ತಿಗಳು ಕೂಲಿ ಕೆಲಸಕ್ಕಾಗಿ ಅಮಶಿಪುರಗೆ ಹೋಗಿದ್ದರು. ಜುಲೈ 16ರಂದು ತಮಗೆ ಅವರು ಫೋನ್ ಮಾಡಿ ಬಾಡಿಗೆಗೆ ರೂಮು ಸಿಕ್ಕಿದೆ ಎಂದು ಹೇಳಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಎರಡು ದಿನಗಳ ಬಳಿಕ ಇದೇ ರೂಮನ್ನು ಸುತ್ತುವರಿದು ಎನ್​ಕೌಂಟರ್ ಮಾಡಿದ್ದಾರೆ. ಭದ್ರತಾ ಪಡೆಗಳ ಕಾರ್ಯಾಚರಣೆ ನಡೆಯುವಾಗ ಈ ಮೂವರು ಯುವಕರು ರೂಮಿನ ಕಿಟಕಿಯಿಂದ ಯಾಕೆ ಜಿಗಿದರು ಇತ್ಯಾದಿ ಅನುಮಾನಗಳಿಗೆ ತನಿಖೆಯಿಂದ ಉತ್ತರ ಸಿಗುವ ವಿಶ್ವಾಸದಲ್ಲಿ ಸೇನೆ ಇದೆ.
Published by: Vijayasarthy SN
First published: September 19, 2020, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading