HOME » NEWS » National-international » ACTOR SURIYAS STATEMENT ON NEET IS CONTEMPT OF COURT SAYS JUDGE MAK

NEET-JEE ಪರೀಕ್ಷೆಗಳನ್ನು ಮನು ನೀತಿಗೆ ಹೋಲಿಸಿ ಕೋರ್ಟ್‌‌ಗಳನ್ನೂ ಟೀಕಿಸಿದ ನಟ ಸೂರ್ಯ; ನ್ಯಾಯಾಂಗ ನಿಂದನೆ ಕೇಸ್‌ ಸಾಧ್ಯತೆ?

ದೇಶದ ನ್ಯಾಯಾಲಯಗಳಲ್ಲಿಯೇ ಸೋಂಕಿನ ಭಯದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿರುವಾಗ. ಅದೇ ನ್ಯಾಯಾಲಯವು ನಿರ್ಭಯವಾಗಿ ಮತ್ತು ಖಡ್ಡಾಯವಾಗಿ ಪರೀಕ್ಷೆಯನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಆದೇಶಿಸಿರುವುದು ಸರಿಯಲ್ಲ ಎಂದು ತಮಿಳು ಚಿತ್ರನಟ ಸೂರ್ಯ ಅಭಿಪ್ರಾಯಪಟ್ಟಿದ್ದರು.

MAshok Kumar | news18-kannada
Updated:September 14, 2020, 5:10 PM IST
NEET-JEE ಪರೀಕ್ಷೆಗಳನ್ನು ಮನು ನೀತಿಗೆ ಹೋಲಿಸಿ ಕೋರ್ಟ್‌‌ಗಳನ್ನೂ ಟೀಕಿಸಿದ ನಟ ಸೂರ್ಯ; ನ್ಯಾಯಾಂಗ ನಿಂದನೆ ಕೇಸ್‌ ಸಾಧ್ಯತೆ?
ತಮಿಳು ಚಿತ್ರನಟ ಸೂರ್ಯ.
  • Share this:
ಚೆನ್ನೈ (ಸೆಪ್ಟೆಂಬರ್ 14); ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಕೋರ್ಸ್‌‌ಗಳಿಗೆ ಪ್ರವೇಶಾತಿ ಪಡೆಯಲು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಾದ ಜೆಇಇ ಮತ್ತು ನೀಟ್‌ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ದೇಶದ ಬಹುತೇಕ ರಾಜ್ಯಗಳು ಜೆಇಇ-ನೀಟ್‌ ಪರೀಕ್ಷೆಗಳನ್ನು ಒಪ್ಪಿಕೊಂಡಿದ್ದರೂ ಸಹ ತಮಿಳುನಾಡು ಮಾತ್ರ ಈವರೆಗೆ ಒಪ್ಪಿಕೊಂಡಿಲ್ಲ. ಅಲ್ಲದೆ ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ಅನಿತಾ ಎಂಬ ಹೆಣ್ಣು ಮಗಳು ಎರಡು ವರ್ಷದ ಹಿಂದೆ ಆತ್ಮಹತ್ಯೆಗೆ ಶರಣಾದ ನಂತರ ಈ ಇದರ ವಿರುದ್ಧದ ಹೋರಾಟ ತಮಿಳುನಾಡಿನಲ್ಲಿ ಉತ್ಟ್ರಾಯ ತಲುಪಿತ್ತು. ಹಲವಾರು ಸಂಘಟನೆ ಬೀದಿಗಳಿದು ಹೋರಾಟ ನಡೆಸಿದ್ದವು. ಈ ವರ್ಷವೂ ಐದು ಜನ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಹೆದರಿ ತಮಿಳುನಾಡಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರ ಬೆನ್ನಿಗೆ ಚಿತ್ರ ನಟ ಸೂರ್ಯ ಮಾಡಿರುವ ಆ ಒಂದು ಟ್ವೀಟ್‌ ಇದೀಗ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುವ ಎಲ್ಲಾ ಸಾಧ್ಯತೆಗಳನ್ನು ಎದುರುಗೊಂಡಿದೆ.

ಈ ಸಂಬಂಧ ದೊಡ್ಡ ಪತ್ರವನ್ನು ಬರೆಯುವ ಮೂಲಕ ನೀಟ್‌-ಜೆಇಇ ಪರೀಕ್ಷೆಗಳನ್ನು ಖಂಡಿಸಿದ್ದ ಚಿತ್ರನಟ ಸೂರ್ಯ, "ಜೆಇಇ-ನೀಟ್ ‘ಮನುನೀತಿ’ ಪರೀಕ್ಷೆಗಳಿದ್ದಂತೆ. ಇವು ವಿದ್ಯಾರ್ಥಿಗಳ ಜೀವ ಹಿಂಡುತ್ತಿದೆ. ಇದೀಗ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿಯ ಪೋಷಕರ ನೋವು ನನ್ನ ಹೃದಯವನ್ನು ಹಿಂಡುತ್ತಿದೆ" ಎಂದು ವಿಷಾಧಿಸಿದ್ದರು. ಅಲ್ಲದೆ, ಆ ಪತ್ರವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು.
ಸೂರ್ಯ ಬರೆದಿದ್ದ ಪತ್ರದಲ್ಲಿ, "ಸರ್ಕಾರದ ಮೇಲೆ ಭಾರೀ ಪ್ರಮಾಣದಲ್ಲಿ ಒತ್ತಡ ಹಾಕಿ, ನೀಟ್ ವಿರುದ್ಧ ಏಕೀಕೃತ ಧ್ವನಿಯೆತ್ತಬೇಕು ಎಂದು ಕರೆ ನೀಡಿದ್ದರು. ಜೀವಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ಸಮಯದಲ್ಲಿಯೂ ಸಹ ಪರೀಕ್ಷೆಯನ್ನು ಬರೆಯುವ ಮೂಲಕ ವಿದ್ಯಾರ್ಥಿಗಳು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಒತ್ತಾಯಿಸಲ್ಪಡುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಶಿಕ್ಷಣ ನೀತಿಗಳನ್ನು ರೂಪಿಸುವವರಿಗೆ ಬಡವರು ಮತ್ತು ದೀನ ದಲಿತರ ಬಗೆಗಿನ ವಾಸ್ತವಾಂಶಗಳ ಬಗ್ಗೆ ಅರಿವಿಲ್ಲ" ಎಂದು ದೂಷಿಸಿದ್ದರು.

ನ್ಯಾಯಾಲಯಗಳ ನಡೆಯನ್ನೂ ಟೀಕಿಸಿದ್ದ ಸೂರ್ಯ, "ದೇಶದ ನ್ಯಾಯಾಲಯಗಳಲ್ಲಿಯೇ ಸೋಂಕಿನ ಭಯದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿರುವಾಗ. ಅದೇ ನ್ಯಾಯಾಲಯವು ನಿರ್ಭಯವಾಗಿ ಮತ್ತು ಖಡ್ಡಾಯವಾಗಿ ಪರೀಕ್ಷೆಯನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಆದೇಶಿಸಿರುವುದು ಸರಿಯಲ್ಲ" ಎಂದು ಅಭಿಪ್ರಾಯಪಟ್ಟಿದ್ದರು.ಮಾಧ್ಯಮಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, "ಈ ಆತ್ಮಹತ್ಯೆಗಳ ಸುದ್ದಿ ಮಾಧ್ಯಮಗಳಲ್ಲಿ ನಿರ್ದಿಷ್ಟ ದಿನದ ಚರ್ಚೆಗಳಿಗೆ ಸೀಮಿತವಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವವರು ಬರೆದಿರುವ ಟಿಪ್ಪಣಿಗಳಲ್ಲಿಯೂ ಸಹ ಕಾಗುಣಿತ ತಪ್ಪುಗಳನ್ನು ಹುಡುಕುವ ‘ಚಾಣಕ್ಯರು’ ಟಿವಿಯಲ್ಲಿ ಬಿಸಿ-ಬಿಸಿ ಚರ್ಚೆಗಳಲ್ಲಿ ತೊಡಗುತ್ತಿದ್ದಾರೆ" ಎಂದು ವಿಷಾಧಿಸಿದ್ದರು.

ಅಲ್ಲದೆ, "ಇಂತಹ ಪರೀಕ್ಷೆಗಳು ‘ಮನುನೀತಿ’ಯ ಪರೀಕ್ಷೆಗಳಾಗಿದ್ದು, ಇದು ವಿದ್ಯಾರ್ಥಿಗಳ ಅವಕಾಶಗಳನ್ನು ಮಾತ್ರವಲ್ಲದೇ, ಅವರ ಜೀವನವನ್ನೂ ಕಸಿದುಕೊಳ್ಳುತ್ತದೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಇದು ಜೀವಾವಧಿ ಶಿಕ್ಷೆಯಾಗಿದೆ. ಮಹಾಭಾರತದ ಕಥೆಯೊಂದನ್ನು ಉಲ್ಲೇಖಿಸಿ, ’ಅಂದು ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳಿದ್ದರು.

ಇಂದಿನ ಆಧುನಿಕ ದ್ರೋಣಾಚಾರ್ಯರು, 6ನೇ ತರಗತಿಯ ಮಗುವನ್ನು ಪರೀಕ್ಷೆ ಬರೆದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಒತ್ತಾಯಿಸುತ್ತಿದ್ದಾರೆ. ಇದನ್ನು ಸಾಬೀತುಪಡಿಸಿ ಮುಂದೆ ಹಾದುಹೋಗುವವರಿಗೆ ನೀಟ್ ಎಂಬ ಶಸ್ತ್ರಾಸ್ತಗಳು ಎದುರಾಗುತ್ತವೆ " ಎಂದು ಪತ್ರದ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ನೀಟ್ ಪರೀಕ್ಷೆಗೆ ಹಾಜರಾಗಬೇಕಿದ್ದ 5 ಜನ ವಿದ್ಯಾರ್ಥಿಗಳು ಕಳೆದೊಂದು ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೊರೊನಾ ಮಧ್ಯೆ ಜೆಇಇ ಮತ್ತು ನೀಟ್ ಪ್ರವೇಶ ಪರೀಕ್ಷೆಗಳನ್ನು ಮುಂದೂಡುವಂತೆ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದರೂ ಸಹ ಕೇಂದ್ರ ಪರೀಕ್ಷೆ ನಡೆಸುತ್ತಿರುವುದರಿಂದ ಒತ್ತಡಕ್ಕೊಳಗಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

suriya-tresnding
ಟ್ವಿಟರ್‌ ಟ್ರೆಂಡಿಂಗ್.
ಇದರ ನಂತರ ತಮಿಳುನಾಡಿನಲ್ಲಿ ಅಕ್ರೋಷ ಭುಗಿಲೆದ್ದು, ಹಲವರು ನೀಟ್ ವಿರುದ್ಧ ಧನಿಯೆತ್ತಿ, ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ನಿನ್ನೆ #Govt_Killed_NEET_Students ಎಂದು ಟ್ರೆಂಡಿಂಗ್ ಆಗಿತ್ತು.

ಇದನ್ನೂ ಓದಿ : ಜಿಎಸ್‌ಟಿ ಪರಿಹಾರ ನೀಡಲ್ಲ, ಸಾಲ ನೀಡುತ್ತೇವೆ; ಕೇಂದ್ರದಿಂದ ಸಾಲ ಪಡೆಯಲು ಒಪ್ಪಿದ 13 ರಾಜ್ಯಗಳು

ಈ ಮಧ್ಯೆ, ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ಅವರು ಮುಖ್ಯ ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ್ ಸಾಹಿಗೆ ಪತ್ರ ಬರೆದು ನಟ ಸೂರ್ಯ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ.
Youtube Video

ಇದನ್ನು ವಿರೋಧಿಸಿ ಟ್ವಿಟರ್‌ನಲ್ಲಿ #TNStandWithSuriya ಎಂದು ಟ್ರೆಂಡಿಂಗ್ ಆಗುತ್ತಿದ್ದು, ಈ ವರದಿ ಬರೆಯುವ ವೇಳೆಗೆ ಈ ಹ್ಯಾಶ್‌ಟ್ಯಾಗ್ ಬಳಸಿ ಸುಮಾರು 65 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ.
Published by: MAshok Kumar
First published: September 14, 2020, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories