HOME » NEWS » Lifestyle » WHAT WOMEN LIKES TO TALK ABOUT IN TWITTER STG SESR

Twitter: ಟ್ವಿಟ್ಟರ್‌ನಲ್ಲಿ ಭಾರತೀಯ ಮಹಿಳೆಯರು ಚರ್ಚಿಸಲು ಇಷ್ಟಪಡುವ ವಿಚಾರಗಳು ಯಾವುವು ಗೊತ್ತಾ..?

ಭಾರತೀಯ ಮಹಿಳೆಯರು ಸಹ ಈ ಸೋಷಿಯಲ್‌ ಮೀಡಿಯಾ ತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಈ ಹಿನ್ನೆಲೆ, ನಮ್ಮ ದೇಶದ ಮಹಿಳೆಯರು ಟ್ವಿಟ್ಟರ್‌ನಲ್ಲಿ ಹೆಚ್ಚು ಚರ್ಚಿಸುವ ವಿಚಾರಗಳು ಯಾವುದು ಎಂಬ ಬಗ್ಗೆ ಇತ್ತೀಚೆಗೆ ಸಮೀಕ್ಷೆಯೊಂದು ವರದಿ ಮಾಡಿದೆ. 

news18-kannada
Updated:March 8, 2021, 6:19 PM IST
Twitter: ಟ್ವಿಟ್ಟರ್‌ನಲ್ಲಿ ಭಾರತೀಯ ಮಹಿಳೆಯರು ಚರ್ಚಿಸಲು ಇಷ್ಟಪಡುವ ವಿಚಾರಗಳು ಯಾವುವು ಗೊತ್ತಾ..?
ಟ್ವಿಟ್ಟರ್
  • Share this:
ಜನಪ್ರಿಯ ಸಾಮಾಜಿಕ ಜಾಲತಾಣಗಳ ಪೈಕಿ ಟ್ವಿಟ್ಟರ್‌ ಸಹ ಒಂದು. ಇದು ಮೈಕ್ರೋ ಬ್ಲಾಗಿಂಗ್ ತಾಣವಾಗಿದ್ದರೂ, ಪುರುಷರು - ಮಹಿಳೆಯರನ್ನದೆ ಕೋಟ್ಯಂತರ ಜನರನ್ನು ಸೆಳೆದಿದೆ. ಈ ಪೈಕಿ ಅನೇಕ ಭಾರತೀಯ ಮಹಿಳೆಯರು ಸಹ ಈ ಸೋಷಿಯಲ್‌ ಮೀಡಿಯಾ ತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಈ ಹಿನ್ನೆಲೆ, ನಮ್ಮ ದೇಶದ ಮಹಿಳೆಯರು ಟ್ವಿಟ್ಟರ್‌ನಲ್ಲಿ ಹೆಚ್ಚು ಚರ್ಚಿಸುವ ವಿಚಾರಗಳು ಯಾವುದು ಎಂಬ ಬಗ್ಗೆ ಇತ್ತೀಚೆಗೆ ಸಮೀಕ್ಷೆಯೊಂದು ವರದಿ ಮಾಡಿದೆ. ಭಾರತೀಯ ಮಹಿಳೆಯರು ತಮ್ಮ ಉತ್ಸಾಹ ಮತ್ತು ಸವಾಲುಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಜತೆಗೆ, ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಪ್ರಸ್ತುತ ವ್ಯವಹಾರಗಳು ಮತ್ತು ಸಾಮಾಜಿಕ ಬದಲಾವಣೆಯ ಬಗ್ಗೆ ಚರ್ಚಿಸುತ್ತಾರೆ ಎಂದು ಇತ್ತೀಚಿನ ಸ್ವತಂತ್ರ ಸಂಶೋಧನೆಯೊಂದು ವರದಿ ಮಾಡಿದೆ.

ಟ್ವಿಟ್ಟರ್‌ನಲ್ಲಿ 700 ಮಹಿಳೆಯರ ಪರಿಮಾಣಾತ್ಮಕ ಸಮೀಕ್ಷೆಯನ್ನು ನಡೆಸಲಾಗಿದ್ದು, ಮಹಿಳಾ ಟ್ವಿಟ್ಟರ್ ಖಾತೆಗಳ ಪೈಕಿ ಜನವರಿ 2019 ಮತ್ತು ಫೆಬ್ರವರಿ 2021 ರ ನಡುವೆ 10 ಭಾರತೀಯ ನಗರಗಳಲ್ಲಿ ಮಹಿಳೆಯರು ಕಳುಹಿಸಿದ 522,992 ಟ್ವೀಟ್‌ಗಳ ಗುಣಾತ್ಮಕ ಪರಿಮಾಣ ಮತ್ತು ವಿಶ್ಲೇಷಣೆ ಮಾಡಲಾಗಿದೆ.

ವೈವಿಧ್ಯಮಯ ಶ್ರೇಣಿಯ ಸಂಭಾಷಣೆಗಳೊಂದಿಗೆ ಭಾರತೀಯ ಮಹಿಳೆಯರು ಟ್ವಿಟ್ಟರ್‌ನಲ್ಲಿ ತಮಗಾಗಿ ಒಂದು ವಿಶಿಷ್ಟ ಸ್ಪೇಸ್‌ ಅನ್ನು ಕಂಡುಕೊಂಡಿರುವುದು ಅಧ್ಯಯನದಲ್ಲಿ ಬಯಲಾಗಿದೆ. ಈ ಸಮೀಕ್ಷೆಯ ಪೈಕಿ ಶೇ. 39 ರಷ್ಟು ಮಹಿಳೆಯರು ಟ್ವಿಟ್ಟರ್‌ ತಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸುತ್ತದೆ ಎಂದು ಭಾವಿಸುತ್ತಾರೆ. ಮೈಕ್ರೋ ಬ್ಲಾಗಿಂಗ್‌ ಸೈಟ್‌ನಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ವಿಷಯಗಳಲ್ಲಿ, ತಮ್ಮ ಉತ್ಸಾಹದ ವಿಚಾರಗಳು ಮತ್ತು ಆಸಕ್ತಿಗಳು ಹೆಚ್ಚು ಚರ್ಚೆಗೊಳಗಾದ ಟಾಪಿಕ್‌ಗಳಾಗಿ ಹೊರಹೊಮ್ಮಿವೆ.

24.9% ಮಹಿಳೆಯರು ಸೈಟ್‌ನಲ್ಲಿ ತಮ್ಮ ಆಸಕ್ತಿಗಳು / ಹವ್ಯಾಸಗಳ ಬಗ್ಗೆ ಮಾತನಾಡುತ್ತಾರೆ ಎಂದು ಸಮೀಕ್ಷೆ ಹೇಳುತ್ತದೆ. ಈ ವರ್ಗದಲ್ಲಿ, ಶೇಕಡಾ 41 ರಷ್ಟು ಮಹಿಳೆಯರು ಟ್ವಿಟ್ಟರ್‌ನಲ್ಲಿ ಹೊಸ ಆಸಕ್ತಿಯನ್ನು ಕಂಡುಕೊಂಡಿದ್ದಾರೆ. ಅನೇಕ ಮಹಿಳೆಯರು ಫ್ಯಾಷನ್ (30%), ಪುಸ್ತಕಗಳು (28%), ಸೌಂದರ್ಯ (25%), ಚಲನಚಿತ್ರ ಮತ್ತು ಟಿವಿ (21%), ಸಂಗೀತ (18%), ಆಹಾರ (18%), ತಂತ್ರಜ್ಞಾನ (17%), ಕಲೆ (17%) ಮತ್ತು ಕ್ರೀಡೆ (14%) - ಹೀಗೆ ನಾನಾ ವಿಧದ ಕಂಟೆಂಟ್‌ಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಾರೆ.

ಅಲ್ಲದೆ, ಪ್ರಸಕ್ತ ವ್ಯವಹಾರಗಳು (20.8%), ಸಂಭ್ರಮಾಚರಣೆಯ ಕ್ಷಣಗಳು (14.5%), ಸಮುದಾಯಗಳು (11.7%) ಮತ್ತು ಸಾಮಾಜಿಕ ಬದಲಾವಣೆ (8.7%) ಕೂಡ ಟ್ವಿಟ್ಟರ್‌ನಲ್ಲಿ ಮಹಿಳೆಯರಲ್ಲಿ ಪ್ರಮುಖ ಐದು ಸಂಭಾಷಣೆಯ ವಿಷಯಗಳಲ್ಲಿ ಕಾಣಿಸಿಕೊಂಡಿವೆ. #SheforShe ಮತ್ತು #TimesUp ನಂತಹ ಆನ್‌ಲೈನ್ ಚಳುವಳಿಗಳ ಮೂಲಕ ಭಾರತೀಯ ಮಹಿಳೆಯರು ಅಧಿಕಾರ ಮತ್ತು ಸಮಾಜದಲ್ಲಿ ಬದಲಾವಣೆಯನ್ನು ತರಲು ಟ್ವೀಟ್ ಮಾಡಿದ್ದಾರೆ ಎಂದು ವರದಿ ಹೇಳಿದೆ. ಬೆಂಗಳೂರು, ಗುವಾಹಟಿ ಮತ್ತು ದೆಹಲಿ ನಿರ್ಣಾಯಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಮುನ್ನಡೆ ಸಾಧಿಸುತ್ತವೆ.

ಟ್ವಿಟ್ಟರ್‌ನಲ್ಲಿರುವ ಮಹಿಳೆಯರು ತಮ್ಮ ಸಮುದಾಯವನ್ನು ಬೆಂಬಲಿಸುವ ವಿಷಯದಲ್ಲಿ ಹಿಂಜರಿಯಲ್ಲ. ವರ್ಷಗಳಲ್ಲಿ, ಅವರು #MeToo ಚಳವಳಿಯಂತಹ ಹಲವಾರು ಸಾಮಾಜಿಕ ಚಳುವಳಿಗಳಿಗೆ ಕಾರಣವಾಗಲು ಮತ್ತು ಭಾಗವಹಿಸಲು ಟ್ವೀಟ್‌ಗಳ ಶಕ್ತಿಯನ್ನು ಬಳಸಿಕೊಂಡಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ.

ಭಾರತದಲ್ಲಿ 6.9% ಮಹಿಳೆಯರು ಸವಾಲುಗಳ ಬಗ್ಗೆ ಟ್ವೀಟ್ ಮಾಡುತ್ತಾರೆ. ಈ ಹಂಚಿಕೆಯ ಅನುಭವಗಳು ಸಾಪೇಕ್ಷವಾಗಿದ್ದು, ಸಾರ್ವಜನಿಕವಾಗಿ ಶೇರ್‌ ಮಾಡುವುದು ಅನ್ಯೋನ್ಯತೆಯನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ.ಇದನ್ನು ಓದಿ: ಅಮ್ಮನಂತೆ ಇವಳೂ ಗಟ್ಟಿಗಿತ್ತಿಯಾಗುತ್ತಿದ್ದಾಳೆ: ವಮಿಕಾ ಬಗ್ಗೆ ಕೊಹ್ಲಿ ಮಾತು

ನಗರಗಳು ಬದಲಾದಂತೆ ವಿಚಾರಗಳೂ ಬದಲಾಗಿವೆ. ಬೆಂಗಳೂರು ಮಹಿಳೆಯರು ಸಮುದಾಯಗಳ ಸುತ್ತ ಗಲಾಟೆ, ಸಾಮಾಜಿಕ ಬದಲಾವಣೆ ಮತ್ತು ಶೇರ್‌ ಮಾಡಿರುವ ಚಾಲೆಂಜ್‌ಗಳ ಬಗ್ಗೆ ಟ್ವೀಟ್‌ಗಳು ಪ್ರಾಬಲ್ಯ ಸಾಧಿಸಿದೆ. ಇನ್ನು, ಚೆನ್ನೈ ಮಹಿಳೆಯರು ಸಂಭ್ರಮಾಚರಣೆಯ ಕ್ಷಣಗಳು, ಸೃಜನಾತ್ಮಕ ಪ್ರದರ್ಶನ ಮತ್ತು ದೈನಂದಿನ ಚರ್ಚೆ ಬಗ್ಗೆ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ. ಇನ್ನೊಂದೆಡೆ, ಗುವಾಹಟಿ ಇಷ್ಟದ ವಿಷಯಗಳು ಮತ್ತು ಆಸಕ್ತಿಗಳು ಹಾಗೂ ಪ್ರಸಕ್ತ ವ್ಯವಹಾರಗಳ ಸುತ್ತ ಸಂಭಾಷಣೆಗಳನ್ನು ನಡೆಸಿದೆ.

''ಟ್ವಿಟ್ಟರ್‌ನಲ್ಲಿ ಮಹಿಳೆಯರ ಬಗ್ಗೆ ನಮ್ಮ ತಿಳುವಳಿಕೆಯನ್ನು ಬೆಳೆಸಲು ನಾವು ಈ ಸಂಶೋಧನೆ ನಡೆಸಿದ್ದೇವೆ. ಇದರ ಒಳನೋಟಗಳನ್ನು ಗಮನಿಸಿದರೆ ಟ್ವಿಟ್ಟರ್‌ ಪ್ರತಿಯೊಬ್ಬ ಮಹಿಳೆಗೆ ಎಂಬುದು ನಮಗೆ ತೋರಿಸುತ್ತದೆ. ಅವರ ಸಮುದಾಯಗಳು ಮತ್ತು ಸಂಭಾಷಣೆಗಳು ಸೇವೆಯ ಅನನ್ಯತೆ ಮತ್ತು ವೈವಿಧ್ಯತೆಯನ್ನು ಎತ್ತಿ ತೋರಿಸುತ್ತವೆ. ” ಎಂದು ಟ್ವಿಟ್ಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಆಧುನಿಕ ಡೇಟಿಂಗ್ (#ModernDating), ಮಾನಸಿಕ ಆರೋಗ್ಯದ ಕುರಿತು ಟ್ವೀಟ್‌ಗಳನ್ನು ಈ ಅವಧಿಯಲ್ಲಿ ಮಹಿಳೆಯರು ಹಂಚಿಕೊಂಡಿದ್ದಾರೆ. ಮಧುರೈ ಮತ್ತು ಮುಂಬೈನಲ್ಲಿ ಟ್ವಿಟ್ಟರ್‌ನಲ್ಲಿ ವೈಯಕ್ತಿಕವಾಗಿ ಮಾತನಾಡುವ ಟ್ರೆಂಡ್‌ ಹೆಚ್ಚಿದೆ. #SareeTwitter ನಿಂದ #LockdownRecipes ಎಂಬ ಹ್ಯಾಶ್‌ಟ್ಯಾಗ್‌ಗಳ ಬಗ್ಗೆ ಟ್ವೀಟ್ ಮಾಡಲು ಮಹಿಳೆಯರು ಇಷ್ಟಪಡುತ್ತಾರೆ ಮತ್ತು ಅವರ ದೈನಂದಿನ ಅನುಭವಗಳನ್ನು ಹಂಚಿಕೊಳ್ಳುತ್ತಾರೆ; ಈ ನಿಟ್ಟಿನಲ್ಲಿ ಚೆನ್ನೈ ಮತ್ತು ಮುಂಬೈ ಸಂಭಾಷಣೆಗಳನ್ನು ಮುನ್ನಡೆಸುತ್ತವೆ.
Published by: Seema R
First published: March 8, 2021, 5:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories