HOME » NEWS » Lifestyle » VITAMIN D FIVE SIGNS THAT YOU HAVE A VITAMIN D DEFICIENCY STG HG

Vitamin D: ವಿಟಮಿನ್ ಡಿ ಕೊರತೆಯೇ? ಹಾಗಿದ್ದರೆ ಈ ಸಮಸ್ಯೆ ನಿಮ್ಮನ್ನು ಬಾಧಿಸಬಹುದು!

ವಿಟಮಿನ್ ಡಿ ನಮ್ಮ ದೇಹದಲ್ಲಿ ಹಾರ್ಮೋನ್‌ನಂತೆ ಕೆಲಸ ಮಾಡುತ್ತದೆ. ದೇಹದ ಪ್ರತಿ ಕಣವೂ ವಿಟಮಿನ್ ಡಿ ಅನ್ನು ಹೀರಿಕೊಳ್ಳುವುದರಿಂದ ಸೂರ್ಯನ ಕಿರಣ ಮೈಮೇಲೆ ಬಿದ್ದಾಗ ಕೊಲೆಸ್ಟ್ರಾಲ್‌ನಿಂದ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಮನೆಯೊಳಗೆ ಇರುವುದರಿಂದ ಕೂಡ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.

news18-kannada
Updated:June 24, 2021, 11:27 AM IST
Vitamin D: ವಿಟಮಿನ್ ಡಿ ಕೊರತೆಯೇ? ಹಾಗಿದ್ದರೆ ಈ ಸಮಸ್ಯೆ ನಿಮ್ಮನ್ನು ಬಾಧಿಸಬಹುದು!
Vitamin D
  • Share this:

ನಿಮ್ಮ ದೇಹಕ್ಕೆ ಅತ್ಯಗತ್ಯವಾಗಿರುವ ವಿಟಮಿನ್‌ಗಳಲ್ಲಿ ವಿಟಮಿನ್ ಡಿ ಹೆಚ್ಚು ಮುಖ್ಯವಾದುದು. ನೀವು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದೀರಿ ಎಂಬುದನ್ನು ಈ ಐದು ಅಂಶಗಳಿಂದ ಪತ್ತೆಹಚ್ಚಲು ಸಾಧ್ಯ. ಬನ್ನಿ ಅದು ಹೇಗೆ ಎಂಬುದನ್ನು ನೋಡೋಣ. ಮಳೆಗಾಲದಲ್ಲಿ ಈ ವಿಟಮಿನ್ ಡಿ ಕುರಿತು ಹೆಚ್ಚಿನ ಸುದ್ದಿಗಳನ್ನು ಕಾಣುತ್ತೀರಿ. ಏಕೆಂದರೆ ಹೆಚ್ಚಿನ ದೇಶಗಳಲ್ಲಿ ಸೂರ್ಯನು ಕಳ್ಳಾಟವನ್ನು ಆಡುತ್ತಿರುತ್ತಾನೆ. ಸೂರ್ಯನ ಬಿಸಿಲಿನಲ್ಲಿಯೇ ಈ ಅಂಶ ಹೆಚ್ಚಾಗಿರುವುದರಿಂದ ನಿಮಗೆ ಮಳೆಗಾಲದಲ್ಲಿ ಬಿಸಿಲಿನ ಪ್ರಭಾವ ದೇಹಕ್ಕೆ ಉಂಟಾಗುವುದಿಲ್ಲ.


ವಿಟಮಿನ್ ಡಿ ಕೊರತೆಯಿಂದ ದೇಹವು ಹಲವಾರು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಸ್ವಯಂ ನಿರೋಧಕ ಕಾಯಿಲೆಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಅಂತೆಯೇ ಕ್ಯಾನ್ಸರ್‌ನಂತಹ ಮಾರಾಣಾಂತಿಕ ಕಾಯಿಲೆಗಳಿಗೆ ಕೂಡ ಔಷಧಿಯು ವಿಟಮಿನ್ ಡಿ ಯಲ್ಲಿದೆ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ. ಯಾರು ಸೂರ್ಯನ ಬೆಳಕಿಗೆ ಮೈಯೊಡ್ಡುವುದಿಲ್ಲವೋ ಅವರಲ್ಲಿ ಏನಾದರೊಂದು ಕಾಯಿಲೆಗಳು ಕಂಡುಬರುತ್ತಿರುತ್ತಿದೆ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ನಿಲ್ಲಬೇಕಾಗುತ್ತದೆ.



ವಿಟಮಿನ್ ಡಿ ನಮ್ಮ ದೇಹದಲ್ಲಿ ಹಾರ್ಮೋನ್‌ನಂತೆ ಕೆಲಸ ಮಾಡುತ್ತದೆ. ದೇಹದ ಪ್ರತಿ ಕಣವೂ ವಿಟಮಿನ್ ಡಿ ಅನ್ನು ಹೀರಿಕೊಳ್ಳುವುದರಿಂದ ಸೂರ್ಯನ ಕಿರಣ ಮೈಮೇಲೆ ಬಿದ್ದಾಗ ಕೊಲೆಸ್ಟ್ರಾಲ್‌ನಿಂದ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಮನೆಯೊಳಗೆ ಇರುವುದರಿಂದ ಕೂಡ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.


ನೀವು ಸೂರ್ಯನ ಬಿಸಿಲಿಗೆ ಮೈಯೊಡ್ಡಲು ಯಾವ ಸಮಯ ಸೂಕ್ತ ಎಂದು ಕೇಳಿದರೆ ಯಾವಾಗ ಬೇಕಾದರೂ ಸೂರ್ಯನ ಬಿಸಿಲಿಗೆ ಮೈಯೊಡ್ಡಬಹುದು ಎಂದು ವೈದ್ಯರು ಹೇಳುತ್ತಾರೆ. ನಿಮ್ಮಲ್ಲಿ ವಿಟಮಿನ್ ಡಿ ಕೊರತೆ ಇದೆಯೇ ಎಂಬುದನ್ನು ಈ ಅಂಶಗಳಿಂದ ತಿಳಿದುಕೊಳ್ಳಬಹುದು.


ನಿಧಾನ ಚೇತರಿಸುವಿಕೆ


ಯುವಕರು ಜಿಮ್‌ಗೆ ಹೋದಾಗ ಈ ಅಂಶವು ಗಮನಕ್ಕೆ ಬರುತ್ತದೆ. ವ್ಯಾಯಾಮ ಮಾಡುವಾಗ ದೇಹವು ಸ್ನಾಯುಗಳ ಬಳಲಿಕೆಗೆ ಕಾರಣವಾಗುತ್ತದೆ. ಆದರೆ ಸ್ನಾಯುಗಳ ನೋವು ಬೇಗನೇ ಕಡಿಮೆಯಾಗುದಿಲ್ಲ ಎಂದಾದಲ್ಲಿ ನೀವು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದೀರಿ ಎಂದಾಗಿದೆ.


ದುರ್ಬಲ ಸ್ನಾಯುಗಳು ಮತ್ತು ನೋವು

ನಮ್ಮ ಕೆಲಸದ ಒತ್ತಡದಿಂದಾಗಿ ನಾವು ಬಹಳಷ್ಟು ಸಮಯ ಕುಳಿತುಕೊಂಡಿರುತ್ತೇವೆ. ಚಲನೆ ಇರುವುದಿಲ್ಲ. ವಿಟಮಿನ್ ಡಿ ಕೊರತೆ ಕೂಡ ನಮ್ಮನ್ನು ಕಾಡುತ್ತಿರುತ್ತದೆ. ಇದರಿಂದ ಸ್ನಾಯುಗಳಲ್ಲಿ ನೋವು ಹಿಮ್ಮಡಿಗಳಲ್ಲಿ ಊತ ಕಂಡುಬರುತ್ತದೆ.


ಗಾಯಗಳು ನಿಧಾನವಾಗಿ ಒಣಗುವುದು


ವಿಟಮಿನ್ ಡಿ ಕೊರತೆ ಇದ್ದಾಗ ಗಾಯಗಳು ನಿಧಾನವಾಗಿ ಒಣಗುತ್ತವೆ ಮತ್ತು ಚೇತರಿಕೆಯು ತುಂಬಾ ಕಡಿಮೆ ಇರುತ್ತದೆ.


ಕೂದಲು ಉದುರುವುದು


ನಿಮ್ಮ ಕೂದಲು ಸಾಕಷ್ಟು ಉದುರುತ್ತಿದೆ ಎಂದಾದಲ್ಲಿ ನೀವು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದೀರಿ ಎಂದಾಗಿದೆ. ಸೇರಮ್ ಕೊರತೆಯನ್ನುಂಟು ಮಾಡುವ ವಿಟಮಿನ್ ಡಿ ಹೆಚ್ಚಿನ ಕೂದಲ ನಷ್ಟಕ್ಕೆ ಕಾರಣವಾಗಿದೆ.


ಉಸಿರಾಟ ಸಮಸ್ಯೆ


ಉಸಿರಾಟ ಸಮಸ್ಯೆಗೂ ವಿಟಮಿನ್ ಡಿ ಕೊರತೆ ಕಾರಣವಾಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳಲೇಬೇಕು. ಮಳೆಗಾಲದಲ್ಲಿ, ಪರಾಗ, ಶಿಲೀಂಧ್ರ ಮತ್ತು ಇತರ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಇರುವುದರಿಂದ, ನೀವು ಅಲರ್ಜಿಯಿಂದ ಬಳಲುತ್ತಿರುವ ಸಾಧ್ಯತೆಗಳಿವೆ ಎಂದು ಇಂಟನ್ಯಾಷನಲ್ ಆರ್ಕೈವ್ಸ್ ಆಫ್ ಅಲರ್ಜಿ ಮತ್ತು ಇಮ್ಯುನೊಲಾಜಿಯಲ್ಲಿ ಪ್ರಕಟವಾದ ಅಧ್ಯಯನವು ತಿಳಿಸಿದೆ.


First published: June 24, 2021, 11:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories