ಮಿಟಮಿನ್​ ಮಾತ್ರೆ ಸೇವಿಸುತ್ತೀರಾ? ಹಾಗಿದ್ದರೆ ಈ ವಿಚಾರ ತಿಳಿದಿರಲಿ

ಮಾಂಸ, ಡೈರಿ ಉತ್ಪನ್ನಗಳು, ತರಕಾರಿಗಳಲ್ಲಿ ವಿಟಮಿನ್ ಎ ಅಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಈ ಆಹಾರಗಳನ್ನು ದಿನ ನಿತ್ಯ ಸೇವಿಸುವುದರಿಂದ ಕೂಡ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಿಕೊಳ್ಳಬಹುದು. ಆದರೆ ಇದರ ಅರಿವಿನ ಕೊರತೆ ಮತ್ತು ಇತ್ತೀಚಿನ ಜೀವನ ಶೈಲಿಯಲ್ಲಿ ವಿಟಮಿನ್ ಮಾತ್ರೆಗಳ ಮೊರೆ ಹೋಗುವವರೇ ಹೆಚ್ಚು.

news18-kannada
Updated:September 13, 2020, 7:44 PM IST
ಮಿಟಮಿನ್​ ಮಾತ್ರೆ ಸೇವಿಸುತ್ತೀರಾ? ಹಾಗಿದ್ದರೆ ಈ ವಿಚಾರ ತಿಳಿದಿರಲಿ
ಮಿಟಮಿನ್​ ಮಾತ್ರೆ
  • Share this:
ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾದರೆ ಅನಾರೋಗ್ಯದ ಸಮಸ್ಯೆಗಳು ಕಂಡು ಬರುತ್ತದೆ. ಒಬ್ಬ ವ್ಯಕ್ತಿಯ ದೇಹದಲ್ಲಿ ವಿಟಮಿನ್ ಅಂಶದಲ್ಲಿ ಏರುಪೇರಾಗುವುದು ಸಾಮಾನ್ಯ. ಹೀಗಾಗಿ ಪೋಷಕಾಂಶದ ಕೊರತೆ ಕಂಡು ಬಂದರೆ ವೈದ್ಯರೇ ವಿಟಮಿನ್​ ಮಾತ್ರೆಗಳನ್ನು ನಿಯಮಿತ ಅವಧಿವರೆಗೆ ತೆಗೆದುಕೊಳ್ಳಲು ಸೂಚಿಸುತ್ತಾರೆ. ಆದರೆ ಕೆಲವರು ಯಾವುದೇ ಸಲಹೆಗಳಿದ್ದೆ ವಿಟಮಿನ್​ ಮಾತ್ರೆಗಳನ್ನು ಸೇವಿಸುತ್ತಾರೆ. ಇದು ಅತ್ಯಂತ ಅಪಾಯಕಾರಿ ಎಂದು ಇತ್ತೀಚಿನ ಸಂಶೋಧನೆಯೊಂದು ಕಂಡು ಕೊಂಡಿದೆ. ದೇಹದಲ್ಲಿ ವಿಟಮಿನ್ ಎ ಪ್ರಮಾಣವು ಹೆಚ್ಚಾದರೆ ಮೂಳೆಗಳು ಸವೆತಕ್ಕೊಳಗಾಗುತ್ತದೆ. ಇದರಿಂದ ಎಲುಬುಗಳು ದುರ್ಬಲಗೊಂಡು ಮುರಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನ ತಂಡ ತಿಳಿಸಿದೆ.

ಮಾಂಸ, ಡೈರಿ ಉತ್ಪನ್ನಗಳು, ತರಕಾರಿಗಳಲ್ಲಿ ವಿಟಮಿನ್ ಎ ಅಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಈ ಆಹಾರಗಳನ್ನು ದಿನ ನಿತ್ಯ ಸೇವಿಸುವುದರಿಂದ ಕೂಡ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಿಕೊಳ್ಳಬಹುದು. ಆದರೆ ಇದರ ಅರಿವಿನ ಕೊರತೆ ಮತ್ತು ಇತ್ತೀಚಿನ ಜೀವನ ಶೈಲಿಯಲ್ಲಿ ವಿಟಮಿನ್ ಮಾತ್ರೆಗಳ ಮೊರೆ ಹೋಗುವವರೇ ಹೆಚ್ಚು.

ಈ ಕುರಿತು ಇಲಿಗಳ ಮೇಲೆ  ಅಧ್ಯಯನ ನಡೆಸಲಾಗಿದೆ. ಇಲ್ಲಿ ಇಲಿಗಳಿಗೆ ವಿಟಮಿನ್ ಎ ಡೋಸ್​ಗಳನ್ನು ನೀಡಲಾಗಿತ್ತು. ಈ ವೇಳೆ ಕೇವಲ ಎಂಟು ದಿನಗಳಲ್ಲೇ  ಇಲಿಗಳ ಮೂಳೆಗಳು ದುರ್ಬಲವಾಗಿರುವುದು ಕಂಡು ಬಂದಿದೆ. ಹೀಗಾಗಿ ಇದೇ ಪ್ರಮಾಣದ ವಿಟಮಿನ್​ ಎ ಮಾತ್ರೆಗಳನ್ನು ಸೇವಿಸುವ ಮನುಷ್ಯರ ಎಲುಬುಗಳ ಮೇಲೆ ಕೂಡ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಶಿಫಾರಸ್ಸು ಮಾಡಿದೆ.

ದೇಹದಲ್ಲಿ ವಿಟಮಿನ್ ಅಂಶಗಳ ಕೊರತೆಯಿಂದ ವಿಟಮಿನ್ ಎ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇದರ ಅತಿಯಾದ ಸೇವನೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತದೆ. ಅಲ್ಲದೆ ಇದರಿಂದ ಅನಾರೋಗ್ಯದ ಅಪಾಯ ಕೂಡ ಹೆಚ್ಚುತ್ತದೆ ಎಂದು ಈ ಅಧ್ಯಯನದಿಂದ ತಿಳಿದು ಬಂದಿದೆ. ವಿಟಮಿನ್ ಎ ಕೊರತೆಯನ್ನು ಸಾಮಾನ್ಯವಾಗಿ ನಾವು ಸೇವಿಸುವ ಸಮತೋಲಿತ ಆಹಾರದಿಂದ ನೀಗಿಸಿಕೊಳ್ಳಬಹುದು. ಇದಕ್ಕಾಗಿ ಪೌಷ್ಟಿಕಾಂಶವಿರುವ ಆಹಾರಗಳನ್ನು ಸೇವಿಸಬೇಕಾಗುತ್ತದೆ ಎಂದು ಎಂದು ಪ್ರೊಫೆಸರ್ ಉಲ್ಫ್ ಲೆರ್ನರ್ ತಿಳಿಸಿದ್ದಾರೆ.

Video: ಸ್ವಯಂ ಚಾಲಿತ ಕಾರು ತಯಾರಿಸಿದ ಚೀನಾ; ಹೇಗಿದೆ ಗೊತ್ತಾ?
Published by: Harshith AS
First published: September 13, 2020, 7:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading