Tulsi Vivah 2020: ಮದುವೆ ವಿಳಂಬವಾಗುತ್ತಿದ್ದರೆ ತಪ್ಪದೇ ತುಳಸಿ ಪೂಜೆ ಮಾಡಿ
ಮದುವೆ ವಿಳಂಬವಾಗುತ್ತಿರುವವರು ಈ ವಿವಾಹ ಕಾರ್ಯ ನಿರ್ವಹಿಸಿದರೆ, ಅವರಿಗೆ ಬೇಗ ಕಂಕಣ ಫಲ ಸಿಗಲಿದೆ ಎಂಬ ನಂಬಿಕೆ ಇದೆ

ಸಾಂದರ್ಭಿಕ ಚಿತ್ರ
- News18 Kannada
- Last Updated: November 24, 2020, 9:20 PM IST
ಕಾರ್ತಿಕ ಮಾಸದ ಶುಕ್ಲಪಕ್ಷದ ಏಕಾದಶಿಯಂದು ಭಗವಾನ್ ವಿಷ್ಣು, ತುಳಸಿಯನ್ನು ಮದುವೆಯಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಈ ತುಳಸಿ ವಿವಾಹಕ್ಕೆ ವಿಶೇಷ ಮಾನ್ಯತೆ ಇದೆ. ಈ ವಿವಾಹ ವಿಧಿಗಳನ್ನು ಆಚರಿಸಿದರೆ, ಒಳಿತಾಗಲಿದೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ತುಳಸಿ ಹಬ್ಬವನ್ನು ಆಚರಣೆ ಮಾಡಲಾಗುವುದು. ಬಲಿಪಾಡ್ಯಮಿಯಾದ 11 ದಿನಕ್ಕೆ ಈ ಹಬ್ಬವನ್ನು ಆಚರಿಸುವ ಪ್ರತೀತಿ ಇದೆ. ಈ ಬಾರಿ ಗುರುವಾರ ನ.26ರಂದು ಈ ತುಳಸಿ ವಿವಾಹ ಕಾರ್ಯ ಹಬ್ಬ ಬಂದಿದೆ. ಈ ಪೂಜಾ ವಿಧಿ ವಿಧಾನವನ್ನು ಆಚರಿಸಿದರೆ, ಶೀಘ್ರ ಮದುವೆ ಭಾಗ್ಯ ಕೂಡಲಿದೆ. ಅಲ್ಲದೇ ಈ ವಿವಾಹ ಕಾರ್ಯ ನೇರವೇರಿಸುವ ಮೂಲಕ ದಂಪತಿಗಳ ನಡುವಿನ ಬಿರುಕು ಕೂಡ ನಿವಾರಣೆ ಯಾಗುತ್ತದೆ ಎಂಬ ನಂಬಿಕೆ ಇದೆ.
ಆಚರಣೆ ಹೇಗೆ ಏಕಾದಶಿಯ ಈ ಶುಭ ತುಳಸಿ ಹಬ್ಬದಂದು ತುಳಸಿ ಕಟ್ಟೆಯನ್ನು ಮದುವಣಗಿತ್ತಿಯಂತೆ ಅಲಂಕರಿಸಬೇಕು. ತುಳಸಿ ಕಟ್ಟೆಗೆ ಚಪ್ಪರ ನಿರ್ಮಾಣ ಮಾಡಬೇಕು. ಮಂಗಳ ದ್ರವ್ಯಗಳಿಂದ ಪೂಜಿಸಬೇಕು. ಅರಿಶಿಣ -ಕುಂಕುಮಗಳಿಂದ ಕಟ್ಟೆಯನ್ನು ಅಲಂಕರಿಸಿ, ಹೂವುಗಳನ್ನು ಹಾಕಬೇಕು . ಕಟ್ಟೆ ಮುಂದೆ ರಂಗೋಲಿ ಬಿಡಿಸಬೇಕು. ತುಳಸಿ ಜೊತೆ ವಿಷ್ಣು ಸ್ವರೂಪವಾಗಿ ಬೆಟ್ಟದ ನೆಲ್ಲಿಕಾಯಿ ಗಿಡ ಇಟ್ಟು ವೈವಾಹಿಕ ವಿಧಿವಿಧಾನ ಪೂರೈಸಬೇಕು.
ಮಾಂಗಲ್ಯಧಾರಣೆ
ಮದುವೆ ವಿಳಂಬವಾಗುತ್ತಿರುವವರು ಈ ವಿವಾಹ ಕಾರ್ಯ ನಿರ್ವಹಿಸಿದರೆ, ಅವರಿಗೆ ಬೇಗ ಕಂಕಣ ಫಲ ಸಿಗಲಿದೆ ಎಂಬ ನಂಬಿಕೆ ಇದೆ, ಇದೇ ಕಾರಣಕ್ಕೆ ಮದುವೆಗಾಗಿ ಕಾದಿರುವವರು ಈ ದಿನ ಅರಿಶಿಣದ ದಾರವನ್ನು ಮಾಂಗಲ್ಯಧಾರಣೆ ಮಾಡಿದರೆ ಅವರ ಮನಸಿನ ಬಯಕೆ ನೆರವೇರಲಿದೆ
ನಾರಾಯಣ ಎದ್ದೇಳುವ ಸಮಯ
ಪುರಾಣಗಳ ಪ್ರಕಾರ ಶುದ್ಧ ಶಯನ ಏಕಾದಶಿಯಂದು ಮಲಗಿದ ಶ್ರೀಮನ್ನಾರಾಯಣ, ಕಾರ್ತಿಕ ಶುದ್ಧ ದ್ವಾದಶಿಯಂದು ಎಚ್ಚರವಾಗುತ್ತಾನೆ. ಹಾಲಿನ ಕಡಲಲ್ಲಿ ಮಲಗಿದ ನಾರಾಯಣ ಈ ದಿನ ಏಳುತ್ತಾನೆ ಇದೇ ಕಾರಣಕ್ಕೆ ಇದನ್ನು ಕ್ಷೀರಾಬ್ಧಿ ವ್ರತ ಎನ್ನಲಾಗುತ್ತದೆ.ಅವಲಕ್ಕಿ ಬೆಲ್ಲ, ನೈವೇದ್ಯ
ನಾರಾಯಣ ಕೃಷ್ಣ ಸ್ವರೂಪಿ. ಈ ದಿನದಂದು ಕೃಷ್ಣನಿಗೆ ಬಲು ಇಷ್ಟವಾದ ಅವಲಕ್ಕಿಯನ್ನು , ಬೆಲ್ಲವನ್ನು ನೈವೇದ್ಯ ಮಾಡಿದರೆ, ಆತ ಸಂತೃಪ್ತಿಗೊಳ್ಳುತ್ತಾನೆ
ಆಚರಣೆ ಹೇಗೆ