ಶೂ ದುರ್ನಾತವನ್ನು ದೂರ ಮಾಡಲು ಇಲ್ಲಿದೆ ಸುಲಭ ಉಪಾಯ..!
ಶೂಗಳ ವಾಸನೆಯನ್ನು ತೊಡೆದುಹಾಕಲು ಅಡಿಗೆ ಸೋಡಾ ಕೂಡ ತುಂಬಾ ಪ್ರಯೋಜನಕಾರಿ. ನೀವು ಅದನ್ನು ಶೂಗಳ ಮೇಲೆ ಸಿಂಪಡಿಸಬಹುದು. ಇದಕ್ಕಾಗಿ, ರಾತ್ರಿಯಲ್ಲಿ ಶೂಗಳ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ. ಬೆಳಿಗ್ಗೆ ಅದನ್ನು ಸ್ವಚ್ಛಗೊಳಿಸಿ. ಇದರಿಂದ ಕೂಡ ಶೂ ನಿಂದ ಉಂಟಾಗುವ ದುರ್ವಾಸನೆ ದೂರವಾಗುತ್ತದೆ.
news18-kannada Updated:November 24, 2020, 8:52 PM IST

ಶೂ
- News18 Kannada
- Last Updated: November 24, 2020, 8:52 PM IST
ಪ್ರತಿನಿತ್ಯ ಶೂ ಧರಿಸುವವರ ದೊಡ್ಡ ಸಮಸ್ಯೆ ಎಂದರೆ ಪಾದಗಳ ದುರ್ವಾಸನೆ. ಅದರಲ್ಲೂ ಈ ಸಮಸ್ಯೆ ಬೇಸಿಗೆಯಲ್ಲಿ ಹೇಳತೀರದು. ಅನೇಕ ಬಾರಿ ಇದು ಇತರ ಮುಂದೆ ಮುಜುಗರವನ್ನು ಉಂಟುಮಾಡುತ್ತದೆ. ಮನೆಯಲ್ಲಿ ಬೂಟುಗಳು ಮತ್ತು ಸಾಕ್ಸ್ಗಳನ್ನು ತೆಗೆದಾಗಲೂ ಇಂತಹ ಕೆಟ್ಟ ವಾಸನೆ ಮನೆಯಲ್ಲಿ ಹರಡುತ್ತದೆ. ಪಾದಗಳಿಂದ ಬರುವ ಇಂತಹ ದುರ್ನಾತವನ್ನು ತೊಡೆದುಹಾಕಲು ಕೆಲವು ಸುಲಭ ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ನಿಮ್ಮ ಪಾದಗಳು ದುರ್ನಾತ ಬೀರುತ್ತಿದ್ದರೆ ಪ್ರತಿನಿತ್ಯ ನೀವು ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಸೇರಿಸಿ ಪಾದಗಳನ್ನು ಸ್ವಲ್ಪ ಸಮಯದವರೆಗೆ ನೆನೆಸಿಡಿ. ಹೀಗೆ ಮಾಡುವುದರಿಂದ ದುರ್ವಾಸನೆ ದೂರವಾಗುತ್ತದೆ. ಅನೇಕರು ಒಂದೇ ಜೋಡಿ ಸ್ಟಾಕಿಂಗ್ಸ್ ಅನ್ನು ತುಂಬಾ ದಿನಗಳವರೆಗೆ ಧರಿಸುತ್ತಾರೆ. ಇದರಿಂದ ಬೆವರಿನ ದುರ್ವಾಸನೆಯು ಅವುಗಳಲ್ಲಿ ನೆಲೆಗೊಳ್ಳುತ್ತದೆ. ಇದಲ್ಲದೆ ಬ್ಯಾಕ್ಟೀರಿಯಾ ಕೂಡ ಬೆಳೆಯುತ್ತದೆ. ಹೀಗಾಗಿ ಪ್ರತಿದಿನ ನಿಮ್ಮ ಸಾಕ್ಸ್ ಬದಲಿಸುವತ್ತ ಗಮನ ಕೊಡಿ. ಇದರಿಂದ ಕೂಡ ದುರ್ನಾತ ಬೀರುತ್ತಿರಬಹುದು.
ಮಳೆಗಾಲದಲ್ಲಿ ಬೂಟುಗಳು ಮತ್ತು ಸಾಕ್ಸ್ಗಳು ನೆನೆಯುತ್ತವೆ ಅಥವಾ ಒಣಗದ ಸಾಕ್ಸ್ಗಳನ್ನು ಬಳಸಬೇಕಾದ ಪರಿಸ್ಥಿತಿ ಬರಬಹುದು. ಇದರಿಂದ ಕೂಡ ದುರ್ವಾಸನೆ ಉಂಟಾಗುತ್ತದೆ. ಆದ್ದರಿಂದ ಹೇರ್ ಡ್ರೈಯರ್ ಅಥವಾ ಹೀಟರ್ ಸಹಾಯದಿಂದ ನಿಮ್ಮ ಬೂಟುಗಳನ್ನು ಒಣಗಿಸಿದ ಬಳಿಕ ಧರಿಸಿ. ಇದರಿಂದ ದುರ್ವಾಸನೆ ಬೀರುವುದಿಲ್ಲ.
ಬೂಟುಗಳಿಂದ ಬೀರುವ ಕೆಟ್ಟ ವಾಸನೆಯನ್ನು ದೂರ ಮಾಡಲು ಲ್ಯಾವೆಂಡರ್ ಎಣ್ಣೆಯನ್ನು ಸಹ ಬಳಸಬಹುದು. ಈ ಎಣ್ಣೆಯ ಕೆಲವು ಹನಿಗಳನ್ನು ಶೂಗಳ ಒಳಗೆ ಇರಿಸಿ. ಇದು ಶೂಗಳ ವಾಸನೆಯನ್ನು ತೆಗೆದುಹಾಕುತ್ತದೆ. ಅಲ್ಲದೆ, ನೈಲಾನ್ ಮತ್ತು ಹತ್ತಿ ಸಾಕ್ಸ್ ಅನ್ನು ಮಾತ್ರ ಬಳಸಿ. ಅವರು ಬೆವರುವಿಕೆಯನ್ನು ಹೀರಿಕೊಳ್ಳುತ್ತಾರೆ.
ಚಹಾ ನೀರಿನಲ್ಲೂ ಕಾಲನ್ನು ನೆನೆಸಿಡುವುದರಿಂದ ಕೂಡ ದುರ್ವಾಸನೆಯನ್ನು ದೂರ ಮಾಡಬಹುದು. ಇದಕ್ಕಾಗಿ, ಎರಡು ಸಣ್ಣ ಟೀ ಬ್ಯಾಗ್ (ಅಥವಾ ಎರಡು ಟೀ ಸ್ಪೂನ್ ಚಹಾ ಪುಡಿ) ಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಸುಮಾರು 15 ನಿಮಿಷಗಳ ಕಾಲ ಕುದಿಸಿ. ಅದು ತಣ್ಣಗಾದ ನಂತರ, ಈ ನೀರನ್ನು ಟಬ್ನಲ್ಲಿ ಸುರಿದು ನೀರು ಬೆರೆಸಿ ನಿಮ್ಮ ಪಾದಗಳನ್ನು ಸ್ವಲ್ಪ ಸಮಯ ನೆನೆಸಿಡಿ.
ಶೂಗಳ ವಾಸನೆಯನ್ನು ತೊಡೆದುಹಾಕಲು ಅಡಿಗೆ ಸೋಡಾ ಕೂಡ ತುಂಬಾ ಪ್ರಯೋಜನಕಾರಿ. ನೀವು ಅದನ್ನು ಶೂಗಳ ಮೇಲೆ ಸಿಂಪಡಿಸಬಹುದು. ಇದಕ್ಕಾಗಿ, ರಾತ್ರಿಯಲ್ಲಿ ಶೂಗಳ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ. ಬೆಳಿಗ್ಗೆ ಅದನ್ನು ಸ್ವಚ್ಛಗೊಳಿಸಿ. ಇದರಿಂದ ಕೂಡ ಶೂ ನಿಂದ ಉಂಟಾಗುವ ದುರ್ವಾಸನೆ ದೂರವಾಗುತ್ತದೆ.
ಸಾಮಾನ್ಯವಾಗಿ ನಿಮ್ಮ ಪಾದಗಳು ದುರ್ನಾತ ಬೀರುತ್ತಿದ್ದರೆ ಪ್ರತಿನಿತ್ಯ ನೀವು ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಸೇರಿಸಿ ಪಾದಗಳನ್ನು ಸ್ವಲ್ಪ ಸಮಯದವರೆಗೆ ನೆನೆಸಿಡಿ. ಹೀಗೆ ಮಾಡುವುದರಿಂದ ದುರ್ವಾಸನೆ ದೂರವಾಗುತ್ತದೆ.