ಬಾಯಲ್ಲಿ ನೀರೂರಿಸುವ ಗರಿ ಗರಿಯಾದ ಪರೋಟ ಮಾಡುವುದು ತುಂಬಾ ಸುಲಭ..!

ಕೇರಳ ಪರೋಟ ಎಂದರೆ ಹೆಚ್ಚಿನವರ ಹಾಟ್​ ಫೇವರೇಟ್​ ಆಗಿ ಹೋಗಿದೆ. ಇನ್ನು ಚೆನ್ನೈ ಪರೋಟ( ಕಾಯಿನ್ ಪರೋಟ) ಮತ್ತು ಸಿಲೋನ್ ಪರೋಟ(ಶ್ರೀಲಂಕಾ ಪರೋಟ)ಗಳನ್ನು ಬೆಂಗಳೂರಿನಂತಹ ನಗರಗಳ ರೆಸ್ಟೋರೆಂಟ್​ಗಳಲ್ಲಿ ಸಿಗುತ್ತದೆ.

news18-kannada
Updated:June 30, 2020, 3:05 PM IST
ಬಾಯಲ್ಲಿ ನೀರೂರಿಸುವ ಗರಿ ಗರಿಯಾದ ಪರೋಟ ಮಾಡುವುದು ತುಂಬಾ ಸುಲಭ..!
paratha
  • Share this:
ದಿನವೂ ಮನೆಯಲ್ಲಿ ಒಂದೇ ರೀತಿಯ ಆಹಾರ ಸೇವಿಸಿ ಬೇಸರವಾದಾಗ ರೆಸ್ಟೋರೆಂಟ್​ಗಳತ್ತ ಮುಖ ಮಾಡುವವರೇ ಹೆಚ್ಚು. ಅಲ್ಲಿ ಪರೋಟಾ ಸೇರಿದಂತೆ ಇತರೆ ಆಹಾರಗಳಿಗೆ ಅರ್ಡರ್ ಮಾಡಿದರೆ ಒಂದೈಪತ್ತು ನಿಮಿಷವಂತೂ ಕಾಯಬೇಕು. ಆದರೂ ಚುರುಗುಟ್ಟುತ್ತಿರುವ ಹಸಿವನ್ನು ಸಹಿಸಿ ಕಾಯುತ್ತಾರೆ. ಏಕೆಂದರೆ ಮನೆಯಲ್ಲಿ ಪರೋಟವನ್ನು ಮಾಡುವುದು ಎಂದರೆ ಸಾಹಸವೇ ಸರಿ ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ.

ಪರೋಟ ಎಂಬುದು ಉತ್ತರ ಭಾರತೀಯರ ಆಹಾರ ಎನ್ನಲಾಗುತ್ತಿದ್ದರೂ, ದಕ್ಷಿಣದಲ್ಲಿ ತನ್ನದೇಯಾದ ವಿಭಿನ್ನ ರುಚಿಯ ಮೂಲಕ ನಾಲಿಗೆ ಚಪ್ಪರಿಸುವಂತೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಕೇರಳ ಪರೋಟಾ ಎಂದರೆ ಹೆಚ್ಚಿನವರ ಹಾಟ್​ ಫೇವರೇಟ್​ ಆಗಿ ಹೋಗಿದೆ. ಇನ್ನು ಚೆನ್ನೈ ಪರೋಟ( ಕಾಯಿನ್ ಪರೋಟ) ಮತ್ತು ಸಿಲೋನ್ ಪರೋಟ(ಶ್ರೀಲಂಕಾ ಪರೋಟ)ಗಳನ್ನು ಬೆಂಗಳೂರಿನಂತಹ ನಗರಗಳ ರೆಸ್ಟೋರೆಂಟ್​ಗಳಲ್ಲಿ ಸಿಗುತ್ತದೆ.

ಆಹಾರ ಪ್ರಿಯರ ಮನಗೆದ್ದಿರುವ ಪರೋಟಗಳನ್ನು ಮನೆಯಲ್ಲೇ ಸುಲಭ ವಿಧಾನಗಳ ಮೂಲಕ ತಯಾರಿಸಿಕೊಳ್ಳಬಹುದು. ಇಂತಹ ಗರಿ ಗರಿಯಾದ ಲಚ್ಚ ಪರೋಟ ಮಾಡುವ ಸುಲಭ ವಿಧಾನಗಳನ್ನು ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು:
2 ಕಪ್ ಮೈದಾ ಹಿಟ್ಟು (ನಿಮಗೆ ಬೇಕಾದಷ್ಟು)
1/2 ಕಪ್ ತುಪ್ಪ

ಪರೋಟ ಮಾಡುವ ವಿಧಾನ:ಮೊದಲಿಗೆ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ಮತ್ತು ಉಪ್ಪು ತೆಗೆದುಕೊಳ್ಳಿ. ಈ ಹಿಟ್ಟಿಗೆ ಸ್ಪಲ್ಪ ಸ್ವಲ್ಪ ನೀರು ಸೇರಿಸುತ್ತಾ ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿ. ಬಳಿಕ ಪಾತ್ರೆಯನ್ನು ಮುಚ್ಚಿ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಹಾಗೆಯೇ ಇಟ್ಟುಬಿಡಿ.

ಆ ಬಳಿಕ ಸಾಮಾನ್ಯವಾಗಿ ಚಪಾತಿ ತಯಾರಿಸಲು ಮಾಡುವಂತೆ ಸಣ್ಣ ಸಣ್ಣ ಮೈದಾ ಚೆಂಡುಗಳನ್ನಾಗಿ ಮಾಡಿ. ಇದೇ ವೇಳೆ ಕೈಗೆ ಎಣ್ಣೆ ಮುಟ್ಟಿಸಿಕೊಳ್ಳುವುದು ಉತ್ತಮ. ನಂತರ ಈ ಉಂಡೆಗಳನ್ನು ತೆಳುವಾಗಿ ಲಟ್ಟಿಸಿಕೊಳ್ಳಬೇಕು. ಅನಂತರ ಅದನ್ನು ಎರಡು ಭಾಗಗಳನ್ನಾಗಿ ಮಾಡಿ ವೃತ್ತಾಕಾರದಲ್ಲಿ ಸುತ್ತಿಡಿ.

ಹತ್ತು ನಿಮಿಷಗಳ ಬಳಿಕ ಮತ್ತೆ ಲಟ್ಟಣಿಗೆ ಅಥವಾ ಕೈಯಿಂದ ಲಟ್ಟಿಸಿ ಕಾದಿರುವ ಅಂಚಿನ ಮೇಲೆ ಹಾಕಬೇಕು. ಇಲ್ಲಿ ನೀವು ಪ್ರತಿ ಹಂತದಲ್ಲೂ ತುಪ್ಪ ಹೆಚ್ಚಾಗಿ ಬಳಸುವುದರಿಂದ ಪರೋಟ ಹೆಚ್ಚು ಮೃದುವಾಗಿರುತ್ತದೆ. ಹಾಗೆಯೇ ಅಂಚಿನ ಮೇಲೆ ಹಾಕುವ ಮುನ್ನ ಅದು ತುಂಬಾ ಬಿಸಿಯಾಗಿರಲಿ.

ಇನ್ನು ಪರೋಟ ತಯಾರಿಯಾದ ಬಳಿಕ ಒಂದೈದು ಪರೋಟಗಳನ್ನು ಜೊತೆಯಾಗಿಟ್ಟು ಎರಡು ಬದಿಗಳಿಂದ ತಟ್ಟಿರಿ. ಇದರಿಂದ ಪರೋಟ ಗರಿ ಗರಿಯಾಗಿ ತಿನ್ನಲು ರುಚಿಕರವಾಗಿರುತ್ತದೆ.
First published: June 30, 2020, 3:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading