HOME » NEWS » Lifestyle » EPF PREVIOUS COMPANY PROVIDENT FUND WITHDRAW HOW TO UPDATE DATE OF EXIT ONLINE ON EPFO WEBSITE STG SCT

EPF ಖಾತೆದಾರರಿಗೆ ಗುಡ್ ನ್ಯೂಸ್; ಈಗ ಉದ್ಯೋಗಿಗಳೇ ಡೇಟ್‌ ಆಫ್‌ ಎಕ್ಸಿಟ್‌ ಅಪ್‌ಡೇಟ್‌ ಮಾಡಬಹುದು!

Provident Fund: ಈ ಹಿಂದೆ ಕಂಪನಿಯಿಂದ ನಿರ್ಗಮನದ ದಿನಾಂಕವನ್ನು ಅಪ್‌ಡೇಟ್‌ ಮಾಡುವ ಅವಕಾಶ ಕೇವಲ ಕಂಪನಿ ಬಳಿ ಮಾತ್ರವೇ ಇತ್ತು. ಆದರೆ ಇದೀಗ ಪಿಎಫ್ ಖಾತೆದಾರರೇ ತಮ್ಮ ನಿರ್ಗಮನದ ದಿನಾಂಕವನ್ನು ಅಪ್‌ಡೇಟ್‌ ಮಾಡಿಕೊಳ್ಳಬಹುದು.

news18-kannada
Updated:March 9, 2021, 11:22 AM IST
EPF ಖಾತೆದಾರರಿಗೆ ಗುಡ್ ನ್ಯೂಸ್; ಈಗ ಉದ್ಯೋಗಿಗಳೇ ಡೇಟ್‌ ಆಫ್‌ ಎಕ್ಸಿಟ್‌ ಅಪ್‌ಡೇಟ್‌ ಮಾಡಬಹುದು!
ಸಾಂದರ್ಭಿಕ ಚಿತ್ರ
  • Share this:
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇದೀಗ ಪಿಎಫ್ (EPF)‌ ಖಾತೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ಪಿಎಫ್ ಖಾತೆ ಹೊಂದಿರುವವರು ಈ ಹಿಂದೆ ತಮ್ಮ ಕೆಲಸವನ್ನು ಬೇರೆ ಕಂಪನಿಗೆ ಬದಲಾಯಿಸಿದಾಗ ಸಮಸ್ಯೆ ಅನುಭವಿಸುತ್ತಿದ್ದರು. ಹಳೆಯ ಕಂಪನಿಯವರು ನಿರ್ಗಮನದ ದಿನಾಂಕ (Date Of Exit) ಅನ್ನು ಅಪ್‌ಡೇಟ್ ಮಾಡದೇ ತಡ ಮಾಡುತ್ತಿದ್ದರು. ಇದೀಗ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.

ಈ ಹಿಂದೆ ನಿರ್ಗಮನದ ದಿನಾಂಕವನ್ನು ಅಪ್‌ಡೇಟ್‌ ಮಾಡುವ ಅವಕಾಶ ಕೇವಲ ಕಂಪನಿ ಬಳಿ ಮಾತ್ರವೇ ಇತ್ತು. ಆದರೆ ಇದೀಗ ಪಿಎಫ್ ಖಾತೆದಾರರೇ ತಮ್ಮ ನಿರ್ಗಮನದ ದಿನಾಂಕವನ್ನು ಅಪ್‌ಡೇಟ್‌ ಮಾಡಿಕೊಳ್ಳಬಹುದು. ಇದರಿಂದ ಪಿಎಫ್ ಖಾತೆದಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಕೊನೆಗೂ ಉದ್ಯೋಗಿಗಳ ಸಮಸ್ಯೆಯನ್ನು ಅರ್ಥ ಮಾಡಿಕೊಂಡ ನೌಕರರ ಭವಿಷ್ಯ ನಿಧಿ ಸಂಸ್ಥೆ ಇದಕ್ಕೆ ಸೂಕ್ತ ಪರಿಹಾರವನ್ನು ಒದಗಿಸಿದೆ.

ಉದ್ಯೋಗಿಗಳೇ ಅಪ್‌ಡೇಟ್ ಮಾಡಬಹುದು ಡೇಟ್ ಆಫ್ ಎಕ್ಸಿಟ್:
ಯಾವುದೇ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯ ವೇತನದ ಒಂದು ಭಾಗವನ್ನು ಪಿಎಫ್ ಎಂದು ಕಡಿತ ಮಾಡಲಾಗುತ್ತದೆ. ಈ ಹಣವನ್ನು ನೌಕರರ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಒಂದು ವೇಳೆ ಉದ್ಯೋಗಿ ತನ್ನ ಕಂಪನಿಯನ್ನು ಬದಲಿಸಿದರೆ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಕಾರ, ನಿರ್ಗಮನದ ದಿನಾಂಕವನ್ನು ಹಳೆಯ ಕಂಪನಿಯವರು ಅಪ್‌ಡೇಟ್ ಮಾಡದೇ ಇದ್ದರೆ ಪಿಎಫ್ ಹಣವನ್ನು ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಹಳೆಯ ಕಂಪನಿಯಿಂದ ಹೊಸ ಕಂಪನಿಗೆ ಪಿಎಫ್ ವರ್ಗಾವಣೆ ಮಾಡಿಕೊಳ್ಳಬೇಕೆಂದರೂ ನಿರ್ಗಮನದ ದಿನಾಂಕವನನ್ನು ಹಳೆಯ ಕಂಪನಿಯವರು ಅಪ್‌ಡೇಟ್‌ ಮಾಡಬೇಕಿತ್ತು.

ಇದನ್ನೂ ಓದಿ: ಪಿಎಫ್ ಬಳಕೆದಾರರ ಗಮನಕ್ಕೆ: ಏಪ್ರಿಲ್ 1ರಿಂದ ತೆರಿಗೆ ನಿಯಮಗಳು ಬದಲಾವಣೆ

ಆದರೆ ಹಳೆಯ ಕಂಪನಿಯವರು ನಿರ್ಗಮನದ ದಿನಾಂಕ ಅಪ್‌ಡೇಟ್‌ ಮಾಡಲು ತಡ ಮಾಡುತ್ತಿದ್ದರು. ಕೆಲವೊಮ್ಮೆ ಹಳೆಯ ಉದ್ಯೋಗಿಗಳಿಗೆ ಸಹಕಾರ ನೀಡದೇ ಹೀಗೆ ಮಾಡುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರ ಇದೀಗ ನಿರ್ಗಮನದ ದಿನಾಂಕವನ್ನು ಅಪ್‌ಡೇಟ್ ಮಾಡುವ ಅಧಿಕಾರವನ್ನು ಪಿಎಎಫ್ ಖಾತೆದಾರರಿಗೆ ನೀಡಿದೆ.'ಡೇಟ್ ಆಫ್ ಎಕ್ಸಿಟ್' ಅಪ್‌ಡೇಟ್ ಮಾಡುವುದು ಹೇಗೆ?:

ಪಿಎಫ್ ಖಾತೆದಾರರು ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ತಮ್ಮ 'ಡೇಟ್ ಆಫ್ ಎಕ್ಸಿಟ್' ಅನ್ನು ಅಪ್‌ಡೇಟ್‌ ಮಾಡಲು ಈ ಕೆಳಗಿನ ಕಾರ್ಯ ವಿಧಾನಗಳನ್ನು ಅನುಸರಿಸಬಹುದು.

  • ಇಪಿಎಫ್ಓ ಪೋರ್ಟಲ್‌ಗೆ (https://unifiedportal-mem.epfindia.gov.in/memberinterface/) ಲಾಗಿನ್ ಆಗಿ

  • ಇಲ್ಲಿ ನಿಮ್ಮ UAN ಮತ್ತು ಪಾಸ್‌ವರ್ಡ್‌ ಹಾಕಿ

  • ಲಾಗಿನ್ ಆದ ಮೇಲೆ 'ಮ್ಯಾನೇಜ್' ಆಯ್ಕೆಯ ಮೇಲೆ 'ಮಾರ್ಕ್ ಎಕ್ಸಿಟ್' ಕ್ಲಿಕ್ ಮಾಡಿ

  • ಇದೀಗ 'ಸೆಲೆಕ್ಟ್ ಅಪ್ಲಿಕೇಶನ್'‌ನಲ್ಲಿ ನಿಮ್ಮ ಪಿಎಫ್ ಅಕೌಂಟ್ ನಂಬರ್ ಆಯ್ಕೆ ಮಾಡಿ

  •  'ಡೇಟ್ ಆಫ್ ಎಕ್ಸಿಟ್' ಮತ್ತು 'ರಿಸನ್ ಆಫ್ ಎಕ್ಸಿಟ್' ಕ್ಲಿಕ್ ಮಾಡಿ

  • ನಂತರ ಓಟಿಪಿ ಮೇಲೆ ಕ್ಲಿಕ್ ಮಾಡಿ

  • ನಿಮ್ಮ ಆಧಾರ್‌ಗೆ ಲಿಂಕ್‌ ಮಾಡಲಾದ ಮೊಬೈಲ್‌ ನಂಬರ್‌ಗೆ ಬರುವ ಓಟಿಪಿಯನ್ನು ಹಾಕಿ

  • ನಂತರ 'ಚೆಕ್ ಬಾಕ್ಸ್' ಆಯ್ಕೆ ಮಾಡಿ

  • ಈಗ ಅಪ್‌ಡೇಟ್ ಮೇಲೆ ಕ್ಲಿಕ್ ಮಾಡಿ ಹಾಗೂ ಓಕೆ ಮೇಲೆ ಕ್ಲಿಕ್ ಮಾಡಿ


ಇಷ್ಟು ಮಾಡಿದ ಕೂಡಲೇ 'ಡೇಟ್ ಆಫ್ ಎಕ್ಸಿಟ್' ಅಪ್ಡೇಟ್ ಆಗುತ್ತದೆ. ಈ ಮೂಲಕ ನೀವು ಸುಲಭವಾಗಿ ನಿಮ್ಮ ಪಿಎಫ್ ಹಣವನ್ನು ತೆಗೆದುಕೊಳ್ಳಬಹುದು ಅಥವಾ ವರ್ಗಾವಣೆ ಮಾಡಿಕೊಳ್ಳಬಹುದು.
Published by: Sushma Chakre
First published: March 9, 2021, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories