news18-kannada Updated:April 27, 2021, 7:16 AM IST
ಈ ದಿನದ 12 ರಾಶಿಗಳ ಭವಿಷ್ಯ
ಮೇಷ ರಾಶಿ: ಉದ್ಯೋಗ ವಿಚಾರವಾಗಿ ಬದಲಾವಣೆ ಆಗಿದೆ. ಇದು ಶುಭ ಮತ್ತು ಲಾಭಾತರಲಿದೆ. ನಿಮಗೆ ಇಷ್ಟವಾದ ಕೆಲಸ ಅಥವಾ ವರ್ಗಾವಣೆ ಆಗಲಿದೆ. ಇಂದು ವಿಷ್ಣು ಸಹಸ್ರಾಮ ಜಪಿಸಿದರೆ ಮತ್ತಷ್ಟು ಒಳಿತಾಗಲಿದೆ
ವೃಷಭ ರಾಶಿ: ಖರೀದಿಯಲ್ಲಿ ಮೋಸಹೋಗುವ ಸಾಧ್ಯತೆ. ಯಾವುದೋ ಸಮಸ್ಯೆಗೆ ನೀವಾಗಿ ನೀವು ಸಿಲುಕುವ ಸಾಧ್ಯತೆ ಇದೆ. ಇದರ ನಿವಾರಣೆಗೆ ನರಸಿಂಹ ದೇವರ ಪ್ರಾರ್ಥನೆ ಮಾಡಿ
ಮಿಥುನ ರಾಶಿ: ಕೆಲವು ವಿದ್ಯಾರ್ಥಿಗಳಿಗೆ ಅತಿ ವಿಶ್ವಾಸದಿಂದ ಮುಗುರಿಸುವ ಸಾಧ್ಯತೆ ಇದೆ. ಈ ಹಿನ್ನಲೆ ಜಾಗರುಕತೆ ಅತಿ ಅವಶ್ಯ. ಇದರ ನಿವಾರಣೆ ಜೇನು ತುಪ್ಪವನ್ನು ಸರಸ್ವತಿ ಮತ್ತು ಹಯಗ್ರಿವರಿಗೆ ಅರ್ಪಿಸಿ ಅದನ್ನು ಪ್ರಸಾದ ರೂಪದಲ್ಲಿ ಸೇವಿಸಿ.
ಕಟಕ ರಾಶಿ: ಸ್ತ್ರಿಯರಿಗೆ ಇಂದು ಸಮಸ್ಯೆ ಹೆಚ್ಚಾಗಿ ಕಾಡಲಿದೆ. ಅನಾರೋಗ್ಯ ಸೇರಿದಂತೆ ಯಾವುದಾದರೂ ವಿಷಯದಲ್ಲಿ ಸಮಸ್ಯೆ ಉಂಟಾಗಲಿದೆ, ಇದಕ್ಕಾಗಿ ದೇವಿಗೆ ಬಿಳಿ ಹೂವು ಅರ್ಪಿಸಿ, ಪ್ರಾರ್ಥಿಸಿ.
ಸಿಂಹ ರಾಶಿ: ಮನೆ ಕಟ್ಟುವ ಕೆಲಸ ಕಾರ್ಯದಲ್ಲಿ ವಿಳಂಬ ಆಗಿದ್ದರೆ ಅದು ಪೂರ್ಣಗೊಳ್ಳುವ ಕಾಲ ಇಂದು. ಅರ್ಧಬಂಧ ಕಟ್ಟಿದ ಮನೆ ಪೂರ್ಣ ಮಾಡಲು ಒಳ್ಳಯ ದಿನ ಇಂದು. ಕಾಲಭೈರವನ ಪ್ರಾರ್ಥನೆ ಮಾಡಿದರೆ ನಿಮ್ಮ ಇಷ್ಟಾರ್ಥ ಸಿದ್ದಿಸಲಿದೆ
ಕನ್ಯಾ ರಾಶಿ: ವಿವಾಹ ವಿಚಾರವಾಗಿ ಶುಭಸುದ್ದಿಗಳನ್ನು ಕೇಳುತ್ತೀರಾ. ಮದುವೆಗಾಗಿ ಪ್ರಯತ್ನಿಸುತ್ತಿದ್ದರೆ ಅದು ಫಲ ನೀಡಲಿದೆ. ಬೇಗ ಮದುವೆಯಾಗುವ ಕಾಲ ಬರುತ್ತದೆ. ಪಾರ್ವತಿ ದೇವಿಯ ಪ್ರಾರ್ಥನೆ, ದುರ್ಗಾ ದೇವಿ ಪ್ರಾರ್ಥಿಸಿ
ತುಲಾ ರಾಶಿ: ಹಣಕಾಸಿನಲ್ಲಿ ಮೋಸ ತೊಂದರೆಯಾಗಲಿದೆ. ಲೇವಾದೇವಿ ವ್ಯಾವಹಾರದಲ್ಲಿ, ಸಾಲ ನೀಡುವ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯ. ಇಂದು ಕೊಟ್ಟ ಹಣ ಹಿಂದಿರುಗಿ ಬರದ ಸ್ಥಿತಿ ನಿರ್ಮಾಣವಾಗುತ್ತದೆ. ಇದರ ನಿವಾರಣೆಗೆ ಕೆಂಪು ಬಣ್ಣದ ವಸ್ತು, ಹೂವನ್ನು ಲಕ್ಷ್ಮೀ ನರಸಿಂಹ ದೇವರಿಗೆ ಕಟ್ಟು ಪ್ರಾರ್ಥಿಸಿ
ವೃಶ್ಚಿಕ ರಾಶಿ: ಮನರಂಜನೆ ಕ್ಷೇತ್ರದವರಿಗೆ ಲಾಭಾ. ತೊಂದರೆ ಅಥವಾ ನಷ್ಟಕ್ಕೆ ಒಳಗಾದವರು ಇಂದು ಚೇತರಿಕೆ ಕಾಣಲಿದ್ದಾರೆ. ಲಕ್ಷ್ಮೀ ಕಟಾಕ್ಷ ಪಡೆಯಲು ಮಹಾಲಕ್ಷ್ಮೀ ಸಾನಿಧ್ಯದಲ್ಲಿ ಬಿಳಿ ಬಣ್ಣವ ವಸ್ತು , ಹೂವನ್ನು ಅರ್ಪಿಸಿ
ಧನು ರಾಶಿ: ಆರ್ಥಿಕ ಪ್ರಗತಿಯಾಗಿ ಲಾಭಾ ಹೆಚ್ಚಾಲಿದೆ. ವ್ಯಾವಹಾರದಲ್ಲಿ ಅಧಿಕ ಲಾಭಾ ನಿರೀಕ್ಷೆ. ಆದರೆ, ಕೆಲಸಗಾರರು, ಪಾಲುದಾರರೊಂದಿಗೆ ವೈಮನಸು ಉಂಟಾಗು ಸಂಭವ ಹೆಚ್ಚಿರವ ಹಿನ್ನಲೆ ಎಚ್ಚರದಿಂದ ಇರಿ
ಮಕರ ರಾಶಿ: ವಾಹನ ಸಂಚಾರದ ಬಗ್ಗೆ ಜಾಗರುಕತೆವಹಿಸುವುದು ಮುಖ್ಯ. ವಾಹನವನ್ನು ಖರೀದಿ ಮಾಡುವಾಗ ಕೂಡ ಎಚ್ಚರ. ಇಂದು ಪ್ರಯಾಣ ಆರಂಭಿಸುವ ಮುನ್ನ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಸಿಂಧೂರವನ್ನು ದೇವರಿಗೆ ಅರ್ಪಿಸಿ ಅದನ್ನುವಾಹಕ್ಕೆ ಇಡಿ. ಇದರಿಂದ ಅಪಘಾತ ತಪ್ಪಲಿದೆ
ಕುಂಭ ರಾಶಿ: ಭೂ ವ್ಯವಹಾರಗಳಲ್ಲಿ ಮೋಸ ವಾಗುತ್ತದೆ. ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದರೆ ಜಾಗರುಕತೆ ವಹಿಸಿ. ಇಂದು ಆಗುವ ಮೋಸ ಮುಂದೆ ದೊಡ್ಡ ತೊಂದರೆಯಾಗಲಿದೆ. ಇದರ ನಿವಾರಣೆಗೆ ಬಿಳಿ ಎಕ್ಕೆ ಗಿಡಕ್ಕೆ 11 ಸುತ್ತಿ ಪ್ರಾರ್ಥಿಸಿ
ಮೀನಾ ರಾಶಿ: ದೃಷ್ಟಿ ದೋಷ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ ನಿಮ್ಮ ಮೇಲೆ ಮಾಡಿರುವ ತಂತ್ರ ಪ್ರಯೋಗದಿಂದ ಸಮಸ್ಯೆ ಉಂಟಾಗಲಿದೆ
Published by:
Seema R
First published:
April 27, 2021, 7:16 AM IST