HOME » NEWS » Lifestyle » COUPLES HAVING SEX MORE IN JANUARY MONTH RH

ಜನವರಿ ತಿಂಗಳಲ್ಲಿ ದಂಪತಿಗಳು ಸಂಭೋಗ ನಡೆಸುವುದು ಹೆಚ್ಚು; ಇದಕ್ಕೆ ವಿಚಿತ್ರ ಕಾರಣ ಗೊತ್ತಾ?

ಹೊಸ ವರ್ಷದಲ್ಲಿ ಎಲ್ಲರೂ ಒಂದೊಂದು ರೆಸಲ್ಯೂಷನ್​ ಹಾಕಿಕೊಳ್ಳುತ್ತಾರೆ. ಅದೇ ರೀತಿ ಈ ವರ್ಷ ಮಗು ಪಡೆಯಬೇಕೆನ್ನುವ ರೆಸಲ್ಯೂಷನ್​ ಹಾಕಿಕೊಂಡು ಜನವರಲ್ಲಿ ಸೆಕ್ಸ್​ ನಡೆಸುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

news18-kannada
Updated:November 24, 2020, 8:51 PM IST
ಜನವರಿ ತಿಂಗಳಲ್ಲಿ ದಂಪತಿಗಳು ಸಂಭೋಗ ನಡೆಸುವುದು ಹೆಚ್ಚು; ಇದಕ್ಕೆ ವಿಚಿತ್ರ ಕಾರಣ ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಪ್ರಾಣಿಗಳಿಗೆ ಲೈಂಗಿಕ ಸಂಪರ್ಕ ನಡೆಸಲು ಕೆಲ ತಿಂಗಳು ನಿಗದಿ ಆಗಿರುತ್ತವೆ. ಅವುಗಳು ಆಯಾ ತಿಂಗಳು ಹೊರತುಪಡಿಸಿ ಅವು ಬೇರೆ ಅವಧಿಯಲ್ಲಿ ಸೆಕ್ಸ್ ಮಾಡುವುದಿಲ್ಲ. ಆದರೆ, ಮನುಷ್ಯ ಪ್ರಾಣಿ ಮಾತ್ರ ವಿಚಿತ್ರ. ವರ್ಷದ ಎಲ್ಲ ತಿಂಗಳೂ ಮನುಷ್ಯರು ಲೈಂಗಿಕ ಕ್ರಿಯೆ ನಡೆಸುತ್ತಾರೆ. ಆದರೆ, ಯಾವ ತಿಂಗಳಲ್ಲಿ ಗಂಡು-ಹೆಣ್ಣು ಹೆಚ್ಚು ಸೇರುತ್ತಾರೆ? ಎಂದು ಪ್ರಶ್ನಿಸಿದರೆ ಇದಕ್ಕೆ ಉತ್ತರಿಸುವುದು ಕೊಂಚ ಕಷ್ಟ. ಇದಕ್ಕೆ ಇಂಗ್ಲೆಂಡ್ ಉತ್ತರ ಕಂಡುಕೊಂಡಿದೆ! ಜನವರಿ ತಿಂಗಳಲ್ಲಿ ಸೆಕ್ಸ್ ಮಾಡುವವರ ಸಂಖ್ಯೆ ಹೆಚ್ಚಂತೆ! ಹೀಗೊಂದು ಅಚ್ಚರಿಯ ವರದಿಯನ್ನು ಬಿಚ್ಚಿಟ್ಟಿದೆ ಇಂಗ್ಲೆಂಡ್.

ಇಂಗ್ಲೆಂಡ್​ನ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದೆ. 2,139 ದಂಪತಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ ಬಹುತೇಕರು ಜನವರಿ ತಿಂಗಳಲ್ಲಿ ಹೆಚ್ಚು ಸೆಕ್ಸ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.    ಅಲ್ಲದೆ, ಮಗುವನ್ನು ಪಡೆಯುವವರು ಕೂಡ ಹೊಸ  ವರ್ಷದ ಆರಂಭದಲ್ಲಿ ಸೆಕ್ಸ್ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ಹೊಸ ವರ್ಷದಲ್ಲಿ ಎಲ್ಲರೂ ಒಂದೊಂದು ರೆಸಲ್ಯೂಷನ್​ ಹಾಕಿಕೊಳ್ಳುತ್ತಾರೆ. ಅದೇ ರೀತಿ ಈ ವರ್ಷ ಮಗು ಪಡೆಯಬೇಕೆನ್ನುವ ರೆಸಲ್ಯೂಷನ್​ ಹಾಕಿಕೊಂಡು ಜನವರಲ್ಲಿ ಸೆಕ್ಸ್​ ನಡೆಸುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
Published by: HR Ramesh
First published: November 24, 2020, 8:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading