ತಾಮ್ರದ ಕಡಗ, ಉಂಗುರ ಧರಿಸುವುದರಿಂದ ಪ್ರಯೋಜನವಿದೆಯಾ?

ತಾಮ್ರದ ಬಳೆ ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತದೆ. ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಅನೇಕ ರೀತಿಯ ಚಿಕಿತ್ಸಾ ಗುಣಗಳಿದ್ದು, ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು, ತಾಮ್ರದ ಉಂಗುರು, ಬಳೆ ಇತರ ಲೋಹಗಳಿಂದ ತಾಮ್ರ ಭಿನ್ನವಾಗಿದೆ.

news18-kannada
Updated:September 13, 2020, 7:24 AM IST
ತಾಮ್ರದ ಕಡಗ, ಉಂಗುರ ಧರಿಸುವುದರಿಂದ ಪ್ರಯೋಜನವಿದೆಯಾ?
copper ring
  • Share this:
ವಿದೇಶವನ್ನು ಗಮನಿಸಿದರೆ ಭಾರತದಲ್ಲಿ ತಾಮ್ರದ ಬಳಕೆ ಹೆಚ್ಚಿದೆ. ಅನೇಕರು ಅಡುಗೆಗೆ ತಾಮ್ರದ ಪಾತ್ರೆ ಯನ್ನು ಬಳಸುತ್ತಾರೆ . ಅದರಿಂದ ಸಾಕಷ್ಟು ಪ್ರಯೋಜನಗಳಿಗೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂಬ ಕಾರಣಕ್ಕೆ ಬಳಸುತ್ತಾರೆ.


ಇನ್ನು ಕೆಲವರು ತಾಮ್ರದ ಪಾತ್ರದಲ್ಲಿ ನೀರು ಸೇವಿಸುತ್ತಾರೆ. ಬೆಳಗ್ಗಿನ ಜಾವ ತಾಮ್ರದ ಪಾತ್ರದಲ್ಲಿ ನೀರು ಸೇವಿಸಿದರೆ ಉತ್ತಮ ಎಂಬುದನ್ನು ಅರಿತುಕೊಂಡವರು ಅದರ ಬಳಕೆ ಮಾಡುತ್ತಿದ್ದಾರೆ. ಹೀಗೆ ತಾಮ್ರದ ಬಳಕೆಯಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತದೆ.


ಇದಿಷ್ಟೇ ಅಲ್ಲದೆ ತಾಮ್ರದ ಬಳೆ, ಉಂಗುರ , ಖಡ್ಗವನ್ನು ಕೆಲವರು ಬಳಸುತ್ತಾರೆ. ಆದರೆ ಇದನ್ನು ಧರಿಸುವುದರಿಂದ ದೇಹ ಅಥವಾ ಅರೋಗ್ಯಕ್ಕೆ ಪ್ರಯೋಜನವಿದೇಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.


ಅನೇಕರು ತಾಮ್ರದ ಖಡ್ಗ, ಉಂಗುರವನ್ನು ಧರಿಸುತ್ತಿದ್ದಾರೆ. ಕೆಲವರು ಶೋಕಿಗಾಗಿ ಧರಿಸಿದರೆ. ಇನ್ನು ಕೆಲವರು ತಾಮ್ರದಿಂದ ಸಿಗುವ ಪ್ರಯೋಜನದ ಬಗ್ಗೆ ತಿಳಿದು ಧರಿಸುತ್ತಿದ್ದಾರೆ.


ಬಳೆ, ಕೈಕಡಗ ಅಥವಾ ಉಂಗುರವನ್ನು ಧರಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನ ಸಿಗಲಿದೆ. ತಾಮ್ರದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತವೆ.


ತಾಮ್ರದ ಬಳೆ ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತದೆ. ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಅನೇಕ ರೀತಿಯ ಚಿಕಿತ್ಸಾ ಗುಣಗಳಿದ್ದು, ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು, ತಾಮ್ರದ ಉಂಗುರು, ಬಳೆ ಇತರ ಲೋಹಗಳಿಂದ ತಾಮ್ರ ಭಿನ್ನವಾಗಿದೆ.


ಕೈಯಲ್ಲಿ ತಾಮ್ರದ ಬಳೆ ಅಥವಾ ಕಡುಗ ಧರಿಸುವುದರಿಂದ ದೇಹ ಬಲಗೊಳ್ಳುತ್ತದೆ. ರಕ್ತವನ್ನು ಶುದ್ಧೀಕರಿಸುವುದಲ್ಲದೇ, ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ರಕ್ತ ಪರಿಚಲನೆ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ. ಇದು ದೇಹದ ವಿಷಕಾರಿ ಅಂಶಗಳಿಂದ ರಕ್ಷಿಸುತ್ತದೆ. ಹೃದಯಘಾತ ಮತ್ತು ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಯುತ್ತದೆ.
ಇನ್ನು ತಾಮ್ರದಿಂದ ಅಡ್ಡ ಪರಿಣಾಮಗಳು ಇವೆ. ಕೆಲವೊಮ್ಮೆ ತಾಮ್ರ ವಿಷವನ್ನುಂಟು ಮಾಡಬಲ್ಲದ್ದು. ವಾಕರಿಕೆ, ವಾಂತಿ, ಅಜೀರ್ಣ , ಅಸ್ವಸ್ಥತೆ. ಬಣ್ಣ ಹಳದಿ ಬಣ್ಣಕ್ಕೆ ತಿರುಗುವುದು, ಖಿನ್ನತೆ, ಸ್ನಾಯು ದೌರ್ಬಲ್ಯ ಸಾಧ್ಯತೆ ಹೆಚ್ಚಿರುತ್ತದೆ.


ಕೆಲಮೊಮ್ಮೆ ಇದು ಚರ್ಮದ ಕಿರಿ ಕಿರಿಯನ್ನುಂಟು ಮಾಡಬಲ್ಲುದು. ಚರ್ಮದ ಕಿರಿಕಿರಿಯ ಜತೆಗೆ ಚರ್ಮದ ಲ್ಲಿ ತುರಿಕೆ, ಕೆಂಪಗಾಗುವುದು, ಉಂಟಾಗಬಹುದು.
Published by: Harshith AS
First published: September 13, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading