IPL

  • associate partner

Virat Kohli: ಅನುಷ್ಕಾಗೆ ಊಟ ಮಾಡಿದೆಯಾ ಎಂದು ಮೈದಾನದಿಂದಲೇ ಕೇಳಿದ ಕೊಹ್ಲಿ; ವಿಡಿಯೋ ವೈರಲ್

Anushka Sharma: ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆದ ಹಸಿರು ಬಣ್ಣದ ಉಡುಗೆ ತೊಟ್ಟು ಮೈದಾನಕ್ಕೆ ಇಳಿದಿದ್ದರು. ಈ ವೇಳೆ ಅನುಷ್ಕಾ ಶರ್ಮಾ ಕೂಡ ಪಂದ್ಯ ನೋಡೋಕೆ ಆಗಮಿಸಿದ್ದರು. ಮೈದಾನದಲ್ಲಿದ್ದಾಗ ಅನುಷ್ಕಾ ಬಳಿ ತಿರುಗಿ ಏನನ್ನಾದರೂ ತಿಂದೆಯಾ ಎಂದು ಕೈಸನ್ನೆ ಮಾಡಿ ಕೇಳಿದ್ದಾರೆ ಕೊಹ್ಲಿ.

news18-kannada
Updated:October 29, 2020, 1:39 PM IST
Virat Kohli: ಅನುಷ್ಕಾಗೆ ಊಟ ಮಾಡಿದೆಯಾ ಎಂದು ಮೈದಾನದಿಂದಲೇ ಕೇಳಿದ ಕೊಹ್ಲಿ; ವಿಡಿಯೋ ವೈರಲ್
ಅನುಷ್ಕಾ- ವಿರಾಟ್​ ಕೊಹ್ಲಿ
  • Share this:
ಕ್ರಿಕೆಟಿಗ ವಿರಾಟ್​ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿರಾಟ್​ ಕೊಹ್ಲಿ ಸದ್ಯ ಐಪಿಎಲ್​ ನಿಮಿತ್ತ ಯುಎಇನಲ್ಲಿದ್ದು, ಅನುಷ್ಕಾ ಕೂಡ ಅಲ್ಲಿಗೇ ತೆರಳಿದ್ದಾರೆ. ಅನುಷ್ಕಾ ಗರ್ಭಿಣಿ. ಈ ಕಾರಣಕ್ಕೆ ಕೊಂಚ ಹೆಚ್ಚೇ ಕಾಳಜಿ ತೋರುತ್ತಿದ್ದಾರೆ ವಿರಾಟ್​. ಈಗ ಇತ್ತೀಚೆಗೆ ನಡೆದ ಪಂದ್ಯವೊಂದರ ವಿಡಿಯೋ ಒಂದು ವೈರಲ್​ ಆಗಿದ್ದು, ಅನುಷ್ಕಾ ಮೇಲೆ ಇರುವ ಪ್ರೀತಿ ಹಾಗೂ ಕಾಳಜಿ ಎಷ್ಟು ಎಂಬುದನ್ನು ವಿರಾಟ್​ ವ್ಯಕ್ತಪಡಿಸಿದ್ದಾರೆ.

ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆದ ಹಸಿರು ಬಣ್ಣದ ಉಡುಗೆ ತೊಟ್ಟು ಮೈದಾನಕ್ಕೆ ಇಳಿದಿದ್ದರು. ಈ ವೇಳೆ ಅನುಷ್ಕಾ ಶರ್ಮಾ ಕೂಡ ಪಂದ್ಯ ನೋಡೋಕೆ ಆಗಮಿಸಿದ್ದರು. ಮೈದಾನದಲ್ಲಿದ್ದ ವೇಳೆಯೆ ಅನುಷ್ಕಾ ಬಳಿ ತಿರುಗಿ ಏನನ್ನಾದರೂ ತಿಂದೆಯಾ ಎಂದು ಕೈಸನ್ನೆ ಮಾಡಿ ಕೇಳಿದ್ದಾರೆ ಕೊಹ್ಲಿ.

ಇದನ್ನು ನೋಡಿದ ಅನುಷ್ಕಾ ಹೌದು ಎಂಬಂತೆ ಕೈ ಸನ್ನೆ ಮಾಡಿದ್ದಾರೆ. ಅಲ್ಲದೆ, ಗಂಡನ ಕೇರಿಂಗ್​ ನೋಡಿ ಸಂತಸಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಅಷ್ಟೇ ಅಲ್ಲ, ಅನುಷ್ಕಾ ಮೇಲೆ ಕೊಹ್ಲಿಗೆ ಇರುವ ಪ್ರೀತಿಯನ್ನು ನೋಡಿ ಅನೇಕರು ಬೆರಗಾಗಿದ್ದಾರೆ.







View this post on Instagram





Couple Goals 💕 Follow ❤️ 🔥@music__and__masthi 🔥 ❤️ #Followusformore . . . 📽️ For more videos of 💕 📽️ #TollyWood #BollyWood #VideoSongs #Musically #Dance #DanceVideos 📽️🎥❤️ @instatrendsoffl #deepthishannu#combination #love #shekarmaster #naveenkumarreddy1#viral#tiktok#telugulovesongs#telugulovefailurewhatsappstatus#telugulovers #telugulovesongs #telugudubssmash #viratkohli #virushka #anushkasharma #iccworldcup2019 DISCLAIMER ‌This photo, video or Audio is not owned by ourselves ‌The copyright credit goes to respective owners ‌This video is not used for illegal sharing or profit Making ‌This video is purely Fan made ‌If any problem Message us on Instagram and the video will be removed ‌No need to report or send strike ‌Credit/Removal:-@music__and__masthi


A post shared by MUSIC & MASTHI (@music__and__masthi) on













View this post on Instagram





❤️🌅 pic credit - @abdevilliers17 😃


A post shared by Virat Kohli (@virat.kohli) on






ಬುಧವಾರ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಮುಂಬೈ ಇಂಡಿಯನ್ಸ್​ ಗೆದ್ದು ಬೀಗಿದೆ. ಈ ಮೂಲಕ 16 ಅಂಕ ಪಡೆದು ಮುಂಬೈ ಇಂಡಿಯನ್ಸ್​ ಪ್ಲೇಆಫ್​ಗೆ ಅರ್ಹತೆ ಪಡೆದುಕೊಂಡಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸತತ ಎರಡನೇ ಸೋಲು ಕಂಡಿದೆ. ಆರ್​​ಸಿಬಿ ಸೋತ ಹೊರತಾಗಿಯೂ aಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ.
Published by: Rajesh Duggumane
First published: October 29, 2020, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading