IPL

  • associate partner

ಎರಡು ಮೇಡಿನ್​, ಮೂರು ವಿಕೆಟ್​; ಟ್ರೋಲ್​ ಮಾಡುವವರಿಗೆ ಉತ್ತರ ಕೊಟ್ಟ ಸಿರಾಜ್​ ಬೆಳೆದು ಬಂದಿದ್ದು ಕೊಳಗೇರಿಯಲ್ಲಿ!

ಎರಡನೇ ಓವರ್​ಗೆ ಬೌಲಿಂಗ್​ಗೆ ಇಳಿದ ಸಿರಾಜ್​ ಯಾವುದೇ ರನ್​ ನೀಡದೆ ಎರಡು ವಿಕೆಟ್​ ಕಿತ್ತಿದ್ದರು. ನಾಲ್ಕನೇ ಓವರ್​ನಲ್ಲಿ ಮತ್ತೆ ಬೌಲಿಂಗ್​ಗೆ ಇಳಿದ ಅವರು ಮೇಡಿನ್​ ಓವರ್​ ಮಾಡಿ ಮತ್ತೊಂದು ವಿಕೆಟ್​ ಕಬಳಿಸಿದರು. ಆ ಮೂಲಕ ಹೊಸ ದಾಖಲೆ ಬರೆದರು.

news18-kannada
Updated:October 22, 2020, 9:13 AM IST
ಎರಡು ಮೇಡಿನ್​, ಮೂರು ವಿಕೆಟ್​; ಟ್ರೋಲ್​ ಮಾಡುವವರಿಗೆ ಉತ್ತರ ಕೊಟ್ಟ ಸಿರಾಜ್​ ಬೆಳೆದು ಬಂದಿದ್ದು ಕೊಳಗೇರಿಯಲ್ಲಿ!
Mohammed Siraj
  • Share this:
ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಆರ್​ಸಿಬಿ ಬೌಲರ್​ ಮೊಹಮ್ಮದ್ ಸಿರಾಜ್​ ದಾಖಲೆ ಬರೆದು ಬಿಟ್ಟಿದ್ದಾರೆ. ಪವರ್​ ಪ್ಲೇನಲ್ಲಿ ಎರಡು ಮೇಡಿನ್ ಅವರ್​ ಮಾಡಿ ಮೂರು ವಿಕೆಟ್​ ಕಿತ್ತಿದ್ದಾರೆ. ಈ ಮೂಲಕ ಇಷ್ಟು ದಿನ ಹಿಗ್ಗಾ-ಮುಗ್ಗಾ ಟ್ರೋಲ್​ ಮಾಡುತ್ತಿದ್ದ ಟ್ರೋಲ್​ ಪೇಜ್​ಗಳು ಇಂದು ಅವರನ್ನು ಹೊಗಳಲು ಆರಂಭಿಸಿವೆ. ಸಿರಾಜ್​ ಈ ಹಂತಕ್ಕೆ ಬಂದು ನಿಲ್ಲಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹೈದರಾಬಾದ್​ನ ಕೊಳಗೇರಿಯಿಂದ ಬಂದ ಅವರು ಈಗ ಹೊಸ ದಾಖಲೆ ಬರೆದಿದ್ದಾರೆ.

ಆರ್​ಸಿಬಿಗೆ ದೊಡ್ಡ ಮೊತ್ತದ ಟಾರ್ಗೆಟ್​ ನೀಡಬಹುದು ಎನ್ನುವ ಕನಸು ಹೊತ್ತು ಕೆಕೆಆರ್​ ತಂಡ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು. ಮೊಹಮದ್​ ಸಿರಾಜ್​ ಮೊದಲ ಓವರ್​ಗೆ ಇಳಿದಾಗ ಸರಿಯಾಗಿ ರನ್​ ಹೊಳೆ ಹರಿಸಬಹುದು ಅಂದುಕೊಂಡಿದ್ದರು ಕೆಕೆಆರ್​ ಬ್ಯಾಟ್ಸ್​​ಮನ್​ಗಳು. ಆದರೆ, ಈ ಖುಷಿ ಕೆಲವೇ ನಿಮಿಷಗಳಲ್ಲಿ ಮಾಯವಾಗಿತ್ತು. ಕೆಕೆಆರ್​ ಬ್ಯಾಟ್ಸ್​ಮನ್​ಗಳಿಗೆ ಸಿರಾಜ್​ ಅಕ್ಷರಶಃ ದುಸ್ವಪ್ನವಾಗಿ ಕಾಡಿ ಬಿಟ್ಟಿದ್ದರು.

ಎರಡನೇ ಓವರ್​ಗೆ ಬೌಲಿಂಗ್​ಗೆ ಇಳಿದ ಸಿರಾಜ್​ ಯಾವುದೇ ರನ್​ ನೀಡದೆ ಎರಡು ವಿಕೆಟ್​ ಕಿತ್ತಿದ್ದರು. ನಾಲ್ಕನೇ ಓವರ್​ನಲ್ಲಿ ಮತ್ತೆ ಬೌಲಿಂಗ್​ಗೆ ಇಳಿದ ಅವರು ಮೇಡಿನ್​ ಓವರ್​ ಮಾಡಿ ಮತ್ತೊಂದು ವಿಕೆಟ್​ ಕಬಳಿಸಿದರು. ಆ ಮೂಲಕ ಹೊಸ ದಾಖಲೆ ಬರೆದರು.



ಸಿರಾಜ್​ ತುಂಬಾನೇ ಕಷ್ಟದ ದಿನವನ್ನು ನೋಡಿ ಬಂದವರು. ಅವರ ತಾಯಿ ಅನಕ್ಷರಸ್ಥೆ. ತಂದೆ ಆಟೋ ಚಾಲಕ. ಬಡತನ ಎಂಬುದು ಸಿರಾಜ್​ ಹುಟ್ಟಿದಾಗಿನಿಂದಲೂ ಅವರಿಗೆ ಅಂಟಿಕೊಂಡೇ ಇತ್ತು. ನಂತರ ಅವರ ಬದುಕು ಬದಲಾಗಿದ್ದು, ಆರ್​​ಸಿಬಿ ಸಿರಾಜ್​ ಅವರನ್ನು ತಂಡಕ್ಕೆ ಸೇರಿಸಿಕೊಂಡ ಮೇಲೆಯೇ. ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್​ ಆಡಿದ ಮೇಲೆ ಸಿರಾಜ್​ ಭಾರತ ತಂಡ ಪ್ರತಿನಿಧಿಸಿದ್ದರು.  ಆರ್​ಸಿಬಿ ಸೇರಿದ ನಂತರವೇ ಸಿರಾಜ್​ ಹೈದರಾಬಾದ್​ನಲ್ಲಿ ಹೊಸ ಮನೆ ಖರೀದಿಸಿದ್ದು.





ಒಂದು ಕೊಳಗೇರಿಯಿಂದ ಬಂದು ಸಿರಾಜ್​ ಇಂದು ಈ ರೀತಿಯ ದಾಖಲೆ ಬರೆದಿದ್ದಾರೆ. ಅವರನ್ನು ನೋಡಿ ಟ್ರೋಲ್​ ಮಾಡುತ್ತಿದ್ದವರು ಹೊಗಳುತ್ತಿದ್ದಾರೆ. ಅವರ ಬೌಲಿಂಗ್​ ಹಿಗೆಯೇ ಮುಂದುವರಿಯಲಿ ಅನ್ನೋದು ಎಲ್ಲರ ಆಶಯ.
Published by: Rajesh Duggumane
First published: October 22, 2020, 9:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading