IPL

  • associate partner

Yuvraj Singh: ಆತ ಪಂಜಾಬ್ ಪಾಲಿನ ಗೇಮ್ ಚೇಂಜರ್..!

IPL 2020: ಅಕ್ಟೋಬರ್ 24 ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.

news18-kannada
Updated:October 21, 2020, 5:27 PM IST
Yuvraj Singh: ಆತ ಪಂಜಾಬ್ ಪಾಲಿನ ಗೇಮ್ ಚೇಂಜರ್..!
Yuvraj Singh
  • Share this:
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಐದು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್​ರನ್ನು ಬೇಗನೆ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಕಿಂಗ್ಸ್​ ಪಾಲಿಗೆ ನಿನ್ನೆಯ ಪಂದ್ಯದಲ್ಲಿಆಪತ್ಭಾಂಧವರಾಗಿದ್ದು ನಿಕೋಲಸ್ ಪೂರನ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್.

ಆರಂಭದಿಂದಲೂ ಬಿರುಸಿನ ಆಟ ಪ್ರದರ್ಶಿಸಿದ ಪೂರನ್ 28 ಎಸೆತಗಳಲ್ಲಿ 53 ರನ್ ಸಿಡಿಸಿದರು. ಈ ಸ್ಪೋಟಕ ಇನಿಂಗ್ಸ್​ನಲ್ಲಿ ಮೂಡಿಬಂದಿದ್ದು ಮೂರು ಸಿಕ್ಸರ್ ಹಾಗೂ 6 ಭರ್ಜರಿ ಬೌಂಡರಿಗಳು. ಮತ್ತೊಂದೆಡೆ ಎಚ್ಚರಿಕೆಯ ಆಟವಾಡಿದ ಗ್ಲೆನ್ ಮ್ಯಾಕ್ಸ್​ವೆಲ್ 24 ಎಸೆತಗಳಲ್ಲಿ 32 ಬಾರಿಸಿ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಅರ್ಧಶತಕ ಬಾರಿಸಿ ಉಪಯುಕ್ತ ಕಾಣಿಕೆ ನೀಡಿದ ನಿಕೋಲಸ್ ಪೂರನ್ ಪಂಜಾಬ್ ಪಾಲಿನ ಗೇಮ್ ಚೇಂಜರ್ ಎಂದು ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಬಣ್ಣಿಸಿದ್ದಾರೆ.

ಪೂರನ್ ಅವರ ಬ್ಯಾಟಿಂಗ್ ಅನ್ನು ಶ್ಲಾಘಿಸಿದ ಯುವಿ, ಪಂದ್ಯದಿಂದ ಪಂದ್ಯಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದು ಸಿಕ್ಸರ್ ಸಿಂಗ್ ಹೇಳಿದ್ದಾರೆ.

ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸತತವಾಗಿ ಸೋಲಿಸಿ ಇದೀಗ ಪ್ಲೇ ಆಫ್​ಗೇರುವ ಕನಸನ್ನು ಜೀವಂತವಿರಿಸಿಕೊಂಡಿದೆ. ಅಕ್ಟೋಬರ್ 24 ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.
POINTS TABLE:

SCHEDULE TIME TABLE:

ORANGE CAP: PURPLE CAP:

RESULT DATA:

MOST SIXES:

ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by: zahir
First published: October 21, 2020, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading