IPL

  • associate partner

ಮುಂದೆ ಬಾರೋ...ಡ: RCB ಗೀತೆಗಿಂತ ಹೆಚ್ಚು ವೈರಲ್ ಆದ ರಾಹುಲ್ ಬೈಗುಳ..!

ಡೆಲ್ಲಿ ಬ್ಯಾಟಿಂಗ್ ವೇಳೆ ನಾಯಕ ಕೆಎಲ್ ರಾಹುಲ್ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದರು. ಇದೇ ವೇಳೆ ಹೇಳಿರುವುದನ್ನು ಕೇಳಿಸದಾಗ, ತುಸು ಗಡುಸು ಧ್ವನಿಯಲ್ಲೇ ಪಕ್ಕಾ ಲೋಕಲ್​ ಹುಡುಗನಂತೆ ರಾಹುಲ್ ಮುಂದೆ ಬಾರೋ ಅಂದಿದ್ದಾರೆ.

news18-kannada
Updated:September 21, 2020, 4:49 PM IST
ಮುಂದೆ ಬಾರೋ...ಡ: RCB ಗೀತೆಗಿಂತ ಹೆಚ್ಚು ವೈರಲ್ ಆದ ರಾಹುಲ್ ಬೈಗುಳ..!
KL Rahul
  • Share this:
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಐವರು ಕನ್ನಡಿಗರಿರುವುದು ಗೊತ್ತೇ ಇದೆ. ಕರ್ನಾಟಕದ ಆಟಗಾರರು ಇರುವುದರಿಂದಲೇ ಈ ಬಾರಿ ಕನ್ನಡಿಗರ ಬೆಂಬಲ ಕೂಡ ಪಂಜಾಬ್​ಗಿದೆ. ಅದರಲ್ಲೂ ಪಂಜಾಬ್ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸುತ್ತಿರುವುದು ಕನ್ನಡಾಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಇನ್ನು ತಂಡದಿಂದ ಕನ್ನಡ ಕೇಳಿ ಬಂದರೆ ಏನಾಗಬೇಡ? ಅದೇ ಖುಷಿ ಡಬಲ್ ಆಗದೇ ಇರುತ್ತಾ? ಆಗಲೇಬೇಕು. ಹೌದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ನಡೆದ ಐಪಿಎಲ್​ನ 2ನೇ ಪಂದ್ಯದಲ್ಲಿ ಮೈದಾನದಿಂದ ಕನ್ನಡದ ಕಲರವ ಕೇಳಿ ಬರುತ್ತಿತ್ತು. ರಾಹುಲ್, ಮಯಾಂಕ್, ಗೌತಮ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕನ್ನಡದಲ್ಲಿ ಸೂಚನೆ ನೀಡುತ್ತಿದ್ದರು.

ಮಯಾಂಕ್ ಹಾಗೂ ಗೌತಮ್ ಜುಗಲ್​ಬಂಧಿ ವೇಳೆ ಬರ್ಬೇಡ, ಬಾ ಬಾ... ಪದಗಳು ಸ್ಟಂಪ್​ ಮೈಕ್​ನಲ್ಲಿ ಕೇಳಿ ಬರುತ್ತಿದ್ದವು. ಆದರೆ ಅದಕ್ಕೂ ಮುನ್ನ ಫೀಲ್ಡಿಂಗ್ ವೇಳೆ ನಡೆದ ಸಂಭಾಷಣೆಯ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ. ಅಲ್ಲೂ ಕೂಡ ಕನ್ನಡವೇ ಕೇಳಿ ಬಂದಿದ್ದು, ಈ ಕನ್ನಡ ಪದಬಳಕೆಯಲ್ಲಿ ಡ ಬಂದಿರುವುದು ಪಡ್ಡೆಗಳ ಕಿವಿ ನೆಟ್ಟಗಾಗಿಸಿದೆ.

ಹೌದು, ಡೆಲ್ಲಿ ಬ್ಯಾಟಿಂಗ್ ವೇಳೆ ನಾಯಕ ಕೆಎಲ್ ರಾಹುಲ್ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದರು. ಇದೇ ವೇಳೆ ಹೇಳಿರುವುದನ್ನು ಕೇಳಿಸದಾಗ, ತುಸು ಗಡುಸು ಧ್ವನಿಯಲ್ಲೇ ಪಕ್ಕಾ ಲೋಕಲ್​ ಹುಡುಗನಂತೆ ರಾಹುಲ್ ಮುಂದೆ ಬಾರೋ..@#*ಡ ಅಂದಿದ್ದಾರೆ. ಇದು ಸ್ಟಂಪ್ ಮೈಕ್​ನಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.



ಇತ್ತ ಆರ್​ಸಿಬಿ ತಂಡದ ಗೀತೆಯಲ್ಲಿ ಹಿಂದಿ ಹೇರಿಕೆಯಿಂದ ಅಸಮಾಧಾನಗೊಂಡಿದ್ದ ಕೆಲ ಕನ್ನಡಾಭಿಮಾನಿಗಳು, ರಾಹುಲ್ ಅವರ ಕನ್ನಡ ಕೇಳಿ ಫುಲ್ ಖುಷ್ ಆಗಿದ್ದಾರೆ. ಅದರಲ್ಲಿ ಕನ್ನಡ ಚಿತ್ರನಿರ್ದೇಶಕ ಸಿಂಪಲ್ ಸುನಿ ಕೂಡ ಒಬ್ಬರು. ಮೊದಲಿಂದಲೂ ಆರ್​ಸಿಬಿ ಕನ್ನಡ ಪರ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ವ್ಯಕ್ತಪಡಿಸುತ್ತಾ ಬರುತ್ತಿರುವ ಸುನಿ, ಮುಂದೆ ಬಾರೋ ಲೌಡ್​ ಆಗಿ ಹೇಳ್ಬೇಕಿತ್ತು ಅನ್ನೋ ಮೂಲಕ ರಾಹುಲ್ ಅವರ ವಿಡಿಯೋ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಂದ ಕೇಳದ ಕನ್ನಡದ ಪಂಜಾಬ್​ನಿಂದಾದರೂ ಕೇಳಿ ಬರುತ್ತಿರುವುದರಿಂದ ಕನ್ನಡ ಕ್ರಿಕೆಟ್ ಪ್ರೇಮಿಗಳು ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.
Published by: zahir
First published: September 21, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading