IPL

  • associate partner

KKR vs DC, KXIP vs SRH: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಕೆಕೆಆರ್​ಗೆ ಡೆಲ್ಲಿ ಸವಾಲು: ಪಂಜಾಬ್-ಎಸ್​ಆರ್​ಹೆಚ್ ಮುಖಾಮುಖಿ

ಅಯ್ಯರ್ ಪಡೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದೆ. ಆಡಿದ 10 ಪಂದ್ಯಗಳ ಪೈಕಿ ಏಳರಲ್ಲಿ ಜಯ ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಮಾರ್ಗನ್​ ತಂಡ 10ರಲ್ಲಿ 5 ಪಂದ್ಯ ಜಯಿಸಿದ್ದು, 5ರಲ್ಲಿ ಸೋಲು ಕಂಡಿದೆ.

news18-kannada
Updated:October 24, 2020, 2:00 PM IST
KKR vs DC, KXIP vs SRH: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಕೆಕೆಆರ್​ಗೆ ಡೆಲ್ಲಿ ಸವಾಲು: ಪಂಜಾಬ್-ಎಸ್​ಆರ್​ಹೆಚ್ ಮುಖಾಮುಖಿ
KKR vs DC, KXIP vs SRH
  • Share this:
ಅಬುಧಾಬಿ/ದುಬೈ (ಅ. 24): ಐಪಿಎಲ್​ನಲ್ಲಿಂದು ಎರಡು ಪಂದ್ಯಗಳು ನಡೆಯಲಿವೆ. ದುಬೈನಲ್ಲಿ ಮುಖಾಮುಖಿ ಆಗಲಿರುವ ಮೊದಲ ಪಂದ್ಯದಲ್ಲಿ ಇಯಾನ್ ಮಾರ್ಗನ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಶ್ರೇಯಸ್ ಅಯ್ಯರ್ ಅವರ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಕಾದಾಡಲಿವೆ. ಎರಡನೇ ಪಂದ್ಯ ಅಬುಧಾಬಿಯಲ್ಲಿ ಜರುಗಲಿದ್ದು ಕೆ. ಎಲ್ ರಾಹುಲ್ ನಾಯಕತ್ವದ ಕಿಂಗ್ಸ್​ ಇಲೆವೆನ್ ಪಂಜಾಬ್ ಹಾಗೂ ಡೇವಿಡ್ ವಾರ್ನರ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಸೆಣೆಸಾಟ ನಡೆಸಲಿವೆ.

ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದ್ದು, ಡೆಲ್ಲಿ ತಂಡ ಗೆದ್ದರೆ ಪ್ಲೇ ಆಫ್ ಹಾದಿ ಖಚಿತವಾಗಲಿದೆ. ಇತ್ತ ಪ್ಲೇ ಆಫ್ ಕನಸಿನಲ್ಲಿರುವ ಕೆಕೆಆರ್​ ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಅಯ್ಯರ್ ಪಡೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದೆ. ಆಡಿದ 10 ಪಂದ್ಯಗಳ ಪೈಕಿ ಏಳರಲ್ಲಿ ಜಯ ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಮಾರ್ಗನ್​ ತಂಡ 10ರಲ್ಲಿ 5 ಪಂದ್ಯ ಜಯಿಸಿದ್ದು, 5ರಲ್ಲಿ ಸೋಲು ಕಂಡಿದೆ.

ಡೆಲ್ಲಿ ತಂಡದ ಬಹುತೇಕ ಎಲ್ಲ ಆಟಗಾರರು ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಸಂಘಟಿತ ಹೋರಾಟದ ಮೂಲಕ ಪ್ರಸಕ್ತ ವರ್ಷ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಅನುಭವಿ ಬ್ಯಾಟ್ಸ್​ಮನ್ ಶಿಖರ್ ಧವನ್​ ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಕಳೆದ ಸಿಎಸ್​ಕೆ ಹಾಗೂ ಪಂಜಾಬ್ ವಿರುದ್ಧ ಶತಕ ಸಿಡಿಸಿ ಆರ್ಭಟಿಸಿದ್ದರು.

ಪೃಥ್ವಿ ಷಾ ಅಸ್ಥಿರ ಬ್ಯಾಟಿಂಗ್ ನಿರ್ವಹಣೆ ನಾಯಕನ ಚಿಂತೆಗೆ ಕಾರಣವಾಗಿದೆ. ಬ್ಯಾಟಿಂಗ್ ಹಾಗು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮರ್ಥವಾಗಿದ್ದರೂ ತಂಡಕ್ಕೆ ಕಳಪೆ ಫೀಲ್ಡಿಂಗ್ ಹಿನ್ನಡೆಯಾಗಿದೆ. ರಿಷಭ್ ಪಂತ್ ಕಮ್​ಬ್ಯಾಕ್ ಮಾಡಬೇಕಾದ ಒತ್ತಡದಲ್ಲಿದ್ದಾರೆ.

ಕೆಕೆಆರ್ ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹೀನಾಯ ಸೋಲು ಕಂಡಿತ್ತು. ಬೆಂಗಳೂರು ಬೌಲಿಂಗ್ ದಾಳಿಗೆ ಕೆಕೆಆರ್ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಸೇರಿದ್ದರು. ಆದರೆ ಇಂದಿನ ಪಂದ್ಯ ಕೆಕೆಆರ್​ಗೆ ಮಹತ್ವದ್ದಾಗಿದ್ದು ಬ್ಯಾಟ್ಸ್​ಮನ್​ಗಳ​ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ವೇಗಿ ಲೂಕಿ ಫರ್ಗ್ಯುಸನ್​ ಕೆಕೆಆರ್​ಗೆ ಹೊಸ ಭರವಸೆ ಮೂಡಿಸಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಕಮಲೇಶ್‌ ನಾಗರಕೋಟಿ, ವರುಣ್‌ ಚಕ್ರವರ್ತಿ, ಪ್ರಸೀದ್ ಕೃಷ್ಣ ಇಂದಿನ ಪಂದ್ಯದಲ್ಲಿ ಮಿಂಚುವ ಅವಶ್ಯಕತೆ ಇದೆ.

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 25 ಬಾರಿ ಮುಖಾಮುಖಿಯಾಗಿದ್ದು, 13ರಲ್ಲಿ ಕೆಕೆಆರ್​ ಗೆಲುವು ಸಾಧಿಸಿದ್ರೆ, 12 ಪಂದ್ಯದಲ್ಲಿ ಡೆಲ್ಲಿ ಜಯದ ನಗೆ ಬೀರಿದೆ.ಇನ್ನೂ ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಪ್ಲೇ ಆಫ್​​ಗೆ ಲಗ್ಗೆಯಿಡಲು ಹರಸಾಹಸ ಪಡುತ್ತಿರುವ ಪಂಜಾಬ್ ಹಾಗೂ ಸನ್​ರೈಸರ್ಸ್​ ತಂಡಗಳು ಸೆಣೆಸಾಟ ನಡೆಸಲಿವೆ.

ಉಭಯ ತಂಡಗಳು ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ತಲಾ 4 ಗೆಲುವು ಮತ್ತು 6 ಸೋಲು ಕಂಡಿವೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಅವಕಾಶ ವೃದ್ಧಿಸಲಿದ್ದರೆ, ಸೋತ ತಂಡಕ್ಕೆ ಹೊರಬೀಳುವ ಅಪಾಯ ಹೆಚ್ಚಲಿದೆ.

ಪಂಜಾಬ್ ತಂಡ ಕ್ರಿಸ್ ಗೇಲ್ ಬಂದಮೇಲೆ ಆಡಿದ ಮೂರು ಪಂದ್ಯವನ್ನು ಗೆದ್ದುಬೀಗಿದೆ. ಹೀಗೆ ತಂಡಕ್ಕೆ ಬ್ಯಾಟಿಂಗ್ ಬಲಬಂದಂತಾಗಿದೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್​ಮನ್​ ಗ್ಲೆನ್ ಮ್ಯಾಕ್ಸ್​ವೆಲ್ ಯಾವೊಂದು ಪಂದ್ಯದಲ್ಲಿ ಆಡುತ್ತಿಲ್ಲ. ಅವಕಾಶ ಕೊಟ್ಟಷ್ಟು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಇವರ ಬದಲು ಸೂಕ್ತ ಆಟಗಾರನ ಆಯ್ಕೆ ಮಾಡಲೇಬೇಕಾಗಿದೆ.

ಹೈದರಾಬಾದ್ ಪರ ಕಳೆದ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ಅದ್ಭುತ ಪ್ರದರ್ಶನ ತೋರಿದ್ದರು. ವಿಜಯ್ ಶಂಕರ್ ಕೂಡ ಬ್ಯಾಟ್ ಬೀಸಿದ್ದರು. ಆದರೆ, ಇತರೆ ಬ್ಯಾಟ್ಸ್​ಮನ್​ಗಳು ಯಾರು ಅಬ್ಬರಿಸಲಿಲ್ಲ. ಹೀಗಾಗಿ ಸಂಘಟಿತ ಪ್ರದರ್ಶನ ನೀಡುವ ಅಗತ್ಯವಿದೆ.
Published by: Vinay Bhat
First published: October 24, 2020, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading