Video: CSK ಮಾವ vs RCB ಅಳಿಯ: ಇದು ಓಲ್ಡ್ ಮಾಂಕ್ ಕಿಕ್..!

ಈ ವರ್ಷದ ಐಪಿಎಲ್ ಸೀಸನ್ ನಲ್ಲಿ ಇದೇ ಮೊದಲ ಬಾರಿಗೆ ಈ ಎರಡು ತಂಡಗಳು ನಾಳೆ ಮುಖಾಮುಖಿ ಆಗುತ್ತಿವೆ. ಎರಡೂ ತಂಡಗಳಿಗೂ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

news18-kannada
Updated:October 9, 2020, 6:57 PM IST
Video: CSK ಮಾವ vs RCB ಅಳಿಯ: ಇದು ಓಲ್ಡ್ ಮಾಂಕ್ ಕಿಕ್..!
Old monk movie
  • Share this:
ಐಪಿಎಲ್ ಶುರುವಾಗಿ ಎರಡು ವಾರಗಳು ಕಳೆಯಿತು. ಈಗಾಗಲೇ ಸಾಕಷ್ಟು ಪಂದ್ಯಗಳು ಸಹ ಮುಗಿದಿವೆ. ಅದರಲ್ಲಿ ಕೆಲವೊಂದು ಉಸಿರು ಬಿಗಿ ಹಿಡಿದು ನೋಡುವಂತಹ ಥ್ರಿಲ್ ಕೊಟ್ಟಿವೆ. ಆದರೆ ಐಪಿಎಲ್​ಗೆ  ನಿಜವಾದ ರಂಗು ಅಂದ್ರೆ? ಆರ್​ಸಿಬಿ ವರ್ಸಸ್ ಚೆನೈ ಮ್ಯಾಚ್. ಹೌದು, ವರ್ಲ್ಡ್ ಕಪ್​ನಲ್ಲಿ ಇಂಡಿಯಾ-ಪಾಕ್ ಮ್ಯಾಚ್ ಇದ್ದಾಗ ಅದೇನ್ ಕ್ರೇಜ್ ಇರುತ್ತೋ? ಅದಕ್ಕಿಂತ ದುಪ್ಪಟ್ಟು ಕ್ರೇಜ್ ಆರ್​ಸಿಬಿ ಹಾಗೂ ಚೆನೈ ನಡುವೆ ಪಂದ್ಯ ನಡೆಯುವಾಗ ಇರುತ್ತದೆ. ಎರಡೂ ತಂಡಗಳ ಅಭಿಮಾನಿಗಳು ನಮ್ ತಂಡ ಕಪ್ ಗೆಲ್ದೇ ಇದ್ರೂ ಪರವಾಗಿಲ್ಲ ಈ ಮ್ಯಾಚ್ ಗೆದ್ರೆ ಸಾಕು ಅಂದ್ಕೊಂಡ್ರೆ ಅದು ಅತಿಶಯ ಅಲ್ಲ. ಆ ಮಟ್ಟಿಗೆ ಈ ಎರಡು ತಂಡಗಳ ನಡುವೆ ಕಿಚ್ಚಿದೆ ರೊಚ್ಚಿದೆ. ಅಭಿಮಾನಿಗಳಲ್ಲಿ ಅಭಿಮಾನದ ಪರಾಕಾಷ್ಠೆ ಇದೆ.

ಸದ್ಯ ಈ ವರ್ಷದ ಐಪಿಎಲ್ ಸೀಸನ್ ನಲ್ಲಿ ಇದೇ ಮೊದಲ ಬಾರಿಗೆ ಈ ಎರಡು ತಂಡಗಳು ನಾಳೆ ಮುಖಾಮುಖಿ ಆಗುತ್ತಿವೆ. ಎರಡೂ ತಂಡಗಳಿಗೂ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಅಭಿಮಾನಿಗಳು ಸಹ ಸೆಲೆಬ್ರೇಟ್ ಮಾಡೋಕೆ ಸಜ್ಜಾಗಿದ್ದಾರೆ. ತಮ್ಮ ಲಾಯಲಿಟಿ ಯಾವ ತಂಡದ ಮೇಲೆ ಅನ್ನೋದನ್ನ‌ ಪ್ರೂವ್ ಮಾಡೋಕೆ ಕಾದು ಕುಳಿತಿದ್ದಾರೆ.

ಅದರಂತೆ 'ಓಲ್ಡ್ ಮಾಂಕ್' ಚಿತ್ರತಂಡ ಒಂದು ಟೀಸರ್ ಮೂಲಕ ತಮ್ಮ ಅಭಿಮಾನ ಎಂತದ್ದು ಅನ್ನೋದನ್ನ ಬಿಂಬಿಸುತ್ತಿದೆ.‌ ಎಸ್...ಅಭಿಮಾನ ಅಂತ ಬಂದ್ರೆ? ಆರ್​ಸಿಬಿ ಅಭಿಮಾನಿಗಳು ಯಾವ ಮಟ್ಟಕ್ಕೆ ಲಾಯಲ್ ಆಗಿರುತ್ತಾರೆ ಅನ್ನೋದನ್ನ ಫನ್ನಿಯಾಗಿ ಈ ವೀಡಿಯೋ ನಲ್ಲಿ ಪೋಟ್ರೆ ಮಾಡಲಾಗಿದೆ. ಅಂದಹಾಗೆ ಓಲ್ಡ್ ಮಾಂಕ್ ಚಿತ್ರದಲ್ಲಿ ಶ್ಯಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದು, ಶ್ರೀನಿ ನಟಿಸೋದರ ಜೊತೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.


ಇದನ್ನೂ ಓದಿ: IPL Records: ಇವರೇ ಚೊಚ್ಚಲ ಐಪಿಎಲ್​ನ ಹೀರೋಗಳು..!
Published by: zahir
First published: October 9, 2020, 6:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading