HOME » NEWS » Ipl » IPL 2021 VIRENDERA SEHWAG PICKS HIS UNDER THE RADAR PLAYER OF THE TOURNAMENT ZP

IPL 2021ರಲ್ಲಿ ಕಡೆಗಣಿಸಲ್ಪಟ್ಟ ಆಟಗಾರನನ್ನು ಹೆಸರಿಸಿದ ವಿರೇಂದ್ರ ಸೆಹ್ವಾಗ್..!

ಬ್ಯಾಟಿಂಗ್​ನಲ್ಲಿ ಶಿಖರ್ ಧವನ್ ಭರ್ಜರಿ ಪ್ರದರ್ಶನ ನೀಡಿದರೆ, ಬೌಲಿಂಗ್​ನಲ್ಲಿ ಹರ್ಷಲ್ ಪಟೇಲ್ ಅಗ್ರಸ್ಥಾನದಲ್ಲಿದ್ದಾರೆ. ಇದಾಗ್ಯೂ ಇನ್ನೂ ಅನೇಕ ಅನ್​ಕ್ಯಾಪ್ಟ್ ಆಟಗಾರರು ಈ ಸಲ ಮಿಂಚಿದ್ದಾರೆ.

news18-kannada
Updated:May 6, 2021, 10:00 PM IST
IPL 2021ರಲ್ಲಿ ಕಡೆಗಣಿಸಲ್ಪಟ್ಟ ಆಟಗಾರನನ್ನು ಹೆಸರಿಸಿದ ವಿರೇಂದ್ರ ಸೆಹ್ವಾಗ್..!
Virender Sehwag
  • Share this:
ಒಂದೆಡೆ ಇಂಡಿಯನ್ ಪ್ರೀಮಿಯರ್ ಮುಂದೂಡಲ್ಪಟ್ಟಿದ್ದರೆ, ಮತ್ತೊಂದೆಡೆ ಈ ಬಾರಿ ಆಡಿದ ಆಟಗಾರರ ಪ್ರದರ್ಶನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಾರಿ ಟೂರ್ನಿಯಲ್ಲಿ 29 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಬ್ಯಾಟಿಂಗ್​ನಲ್ಲಿ ಶಿಖರ್ ಧವನ್ ಭರ್ಜರಿ ಪ್ರದರ್ಶನ ನೀಡಿದರೆ, ಬೌಲಿಂಗ್​ನಲ್ಲಿ ಹರ್ಷಲ್ ಪಟೇಲ್ ಅಗ್ರಸ್ಥಾನದಲ್ಲಿದ್ದಾರೆ. ಇದಾಗ್ಯೂ ಇನ್ನೂ ಅನೇಕ ಅನ್​ಕ್ಯಾಪ್ಟ್ ಆಟಗಾರರು ಈ ಸಲ ಮಿಂಚಿದ್ದಾರೆ. ಈ ಬಗ್ಗೆ ಮಾತನಾಡಿದ ವಿರೇಂದ್ರ ಸೆಹ್ವಾಗ್, ನನ್ನ ಪ್ರಕಾರ ಈ ಬಾರಿ ಅತ್ಯಂತ ಕಡೆಗಣಿಸಲ್ಪಟ್ಟ ಆಟಗಾರ ಎಂದರೆ ಅದು ಅವೇಶ್ ಖಾನ್.

ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಇಶಾಂತ್ ಶರ್ಮಾ ಅಲಭ್ಯರಾಗಿದ್ದರಿಂದ ಸ್ಥಾನ ಪಡೆದ ಅವೇಶ್ ಖಾನ್ ಉತ್ತಮ ಪ್ರದರ್ಶನ ನೀಡಿದರು. ಸಿಕ್ಕ ಅವಕಾಶವನ್ನು ಬಳಿಸಕೊಂಡ ಯುವ ವೇಗಿ 8 ಪಂದ್ಯಗಳಿಂದ 14 ವಿಕೆಟ್ ಉರುಳಿಸಿದ್ದರು. ಈ ಮೂಲಕ ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾಗ್ಯೂ ನಾವೆಲ್ಲರೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕಗಿಸೋ ರಬಾಡ, ಅಶ್ವಿನ್, ಅಕ್ಷರ್ ಪಟೇಲ್ ಹಾಗೂ ಅಮಿತ್ ಮಿಶ್ರಾ ಅವರ ಬಗ್ಗೆ ಮಾತನಾಡುತ್ತೇವೆ. ಆದರೆ ಅವೇಶ್ ಖಾನ್ ಪ್ರದರ್ಶನ ಬಗ್ಗೆ ಯಾರೊಬ್ಬರೂ ಮಾತನಾಡಲಿಲ್ಲ. ಇದೇ ಕಾರಣದಿಂದ ಅತ್ಯುತ್ತಮ ಪ್ರದರ್ಶನ ನೀಡಿದರೂ ಅವೇಶ್ ಪ್ರಸ್ತುತ ಟೂರ್ನಿಯಲ್ಲಿ ಅತ್ಯಂತ ಕಡೆಗಣಿಸಲ್ಪಟ್ಟ ಆಟಗಾರನಾಗಿ ಉಳಿದಿದ್ದಾರೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.
ಮಾತು ಮುಂದುವರೆಸಿದ ಸೆಹ್ವಾಗ್, ಈ ಬಾರಿ ಟೂರ್ನಿಯಲ್ಲಿ ಡೆಲ್ಲಿ ತಂಡದ ಪ್ರದರ್ಶನವನ್ನು ಒಮ್ಮೆ ನೋಡಿ. ಅವೇಶ್ ಖಾನ್ ಪ್ರತಿ ಪಂದ್ಯದಲ್ಲಿಯೂ 2-3 ವಿಕೆಟ್​ಗಳನ್ನು ಪಡೆದಿದ್ದಾರೆ. ಅಲ್ಲದೆ ಪರ್ಪಲ್ ಕ್ಯಾಪ್​ ರೇಸ್​ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡಿದರೂ, ಆತನನ್ನು ಯಾರೂ ಕೂಡ ಹೊಗಳುವ, ಇಲ್ಲ ಗುರುತಿಸುವ ಕೆಲಸ ಮಾಡಿಲ್ಲ ಎಂದು ವಿರೇಂದ್ರ ಸೆಹ್ವಾಗ್ ತಿಳಿಸಿದರು.
Published by: zahir
First published: May 6, 2021, 9:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories