IPL

  • associate partner

IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​

ಸಿಎಸ್​ಕೆ ಒಟ್ಟಾರೆ ಪ್ರದರ್ಶನವು ಕಳೆದ 10 ಸೀಸನ್​ನಲ್ಲೇ ಅತ್ಯಂತ ಕಳಪೆ ಎಂಬ ಟೀಕೆಗೆ ಗುರಿಯಾಗಿದೆ. ಹಾಗೆಯೇ 10 ಸೀಸನ್​ನಲ್ಲೂ ಪ್ಲೇ ಆಫ್ ಪ್ರವೇಶಿಸಿದ ತಂಡ ಎಂಬ ಹೆಗ್ಗಳಿಕೆ ಪಡೆದಿದ್ದ ಧೋನಿ ಪಡೆ ಈ ಬಾರಿ ಬಹುತೇಕ ಟೂರ್ನಿಯಿಂದ ಹೊರಬೀಳಲಿದೆ.

news18-kannada
Updated:October 21, 2020, 4:50 PM IST
IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
dhoni
  • Share this:
ಡ್ಯಾಡಿಸ್ ಆರ್ಮಿ ಹಣೆಪಟ್ಟಿಯೊಂದಿಗೆ ಯುಎಇಗೆ ಬಂದಿಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್​ ತಂಡ, ಎಲ್ಲರಿಗಿಂತ ಮುಂಚಿತವಾಗಿ ಟೂರ್ನಿಯಿಂದ ಹೊರ ನಡೆಯುವ ಸೂಚನೆ ನೀಡಿದೆ. ಆಡಿರುವ 10 ಪಂದ್ಯಗಳಲ್ಲಿ 7 ರಲ್ಲಿ ಸೋತಿರುವ ಧೋನಿ ಪಡೆ ಪ್ಲೇ ಆಫ್ ಪ್ರವೇಶಿಸುವುದು ಕಷ್ಟಸಾಧ್ಯ. ಇದರ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ 7 ವಿಕೆಟ್​ಗಳ ಹೀನಾಯ ಸೋಲಿನ ಬಳಿಕ ಮಾತನಾಡಿರುವ ಸಿಎಸ್​ಕೆ ಕೋಚ್ ಸ್ಟೀಫನ್ ಪ್ಲೇಮಿಂಗ್ ತಂಡದ ಹಿರಿಯ ಆಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನೀವು ಮೂರು ವರ್ಷ ಸೀಸನ್ ನೋಡಿದ್ರೆ, ನಾವು ಮೊದಲ ವರ್ಷ ಗೆದ್ದಿದ್ದೇವೆ. ಕಳೆದ ವರ್ಷ ಕೊನೆಯ ಎಸೆತದಲ್ಲಿ ಚಾಂಪಿಯನ್ ಪಟ್ಟ ಕಳೆದುಕೊಂಡೆವು. ಇದಾಗ್ಯೂ ವಯಸ್ಸಾದ ಆಟಗಾರರೊಂದಿಗೆ ಮೂರನೇ ವರ್ಷವು ಉತ್ತಮ ಪ್ರದರ್ಶನ ನೀಡುವುದು ಕಷ್ಟಕರವೆಂದು ನಾನು ಭಾವಿಸಿದ್ದೇವೆ ”ಎಂದು ಫ್ಲೆಮಿಂಗ್ ಹೇಳಿದ್ದಾರೆ.

ಈ ತಂಡವು ಸತ್ವನ್ನು ಕಳೆದುಕೊಂಡಿರಬಹುದು. ಅದರ ಫಲಿತಾಂಶವು ಅಂಕಪಟ್ಟಿಯಲ್ಲಿ ಕಾಣಿಸುತ್ತಿರುವುದು ನ್ಯಾಯೋಚಿತವಾಗಿದೆ. ಇಂತಹ ಫಲಿತಾಂಶಗಳು ಮೂಡಿ ಬಂದಾಗ ತಂಡದ ಸ್ವರೂಪ ಬದಲಿಸುವುದು, ಲವಲವಿಕೆ ಮತ್ತು ಸಕಾರಾತ್ಮಕವಾಗಿಸುವುದು ತುಂಬಾ ಕಷ್ಟ ಎಂದು ಸಿಎಸ್​ಕೆ ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಡ್ರೆಸ್ಸಿಂಗ್ ಕೋಣೆಯಲ್ಲಿನ ಮನೋಸ್ಥೈರ್ಯ ಕೂಡ ಸಾರ್ವಕಾಲಿಕ ಕಡಿಮೆಯಾಗಿದೆ. ಮೂರು ಬಾರಿ ಚಾಂಪಿಯನ್‌ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇಆಫ್‌ ಅವಕಾಶವನ್ನು ಕಳೆದುಕೊಳ್ಳುವ ಹಾದಿಯಲ್ಲಿದೆ ಎಂದು ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಸುಳಿವು ನೀಡಿದ್ದಾರೆ.

ಹಿರಿಯ ಆಟಗಾರರನ್ನು ಒಳಗೊಂಡ ತಂಡವು ಸಮಸ್ಯೆಗಳನ್ನು ಎದುರಿಸಲಿದೆ ಎಂಬುದು ತಂಡದ ಆಡಳಿತ ಮಂಡಳಿಗೂ ತಿಳಿದಿತ್ತು. ಆದರೆ ಎರಡೂ ಸಂದರ್ಭಗಳಲ್ಲಿ ಫೈನಲ್‌ಗೆ ಪ್ರವೇಶಿಸಿದರು. ಯುಎಇಯ ಪರಿಸ್ಥಿತಿಗಳು ಸಿಎಸ್​ಕೆಗೆ ಸಹಾಯ ಮಾಡಲಿಲ್ಲ. ಕಳಪೆ ಫೀಲ್ಡಿಂಗ್ ಮತ್ತು ವಿಕೆಟ್​ಗಳ ನಡುವಣ ಓಟಗಳು ಮುಳುವಾಯಿತು ಎಂದು ಫ್ಲೆಮಿಂಗ್ ಹೇಳಿದರು.

ಈ ಮೂಲಕ ಸಿಎಸ್​ಕೆ ತಂಡದಲ್ಲಿ ಹೆಚ್ಚಿನ ಹಿರಿಯ ಆಟಗಾರರಿಗೆ ಅವಕಾಶ ನೀಡುತ್ತಿರುವ ಬಗ್ಗೆ ಪರೋಕ್ಷವಾಗಿ ಸ್ಟೀಫನ್ ಫ್ಲೆಮಿಂಗ್ ಕಿಡಿಕಾರಿದ್ದಾರೆ. ಇನ್ನು ಮುಂದಿನ ವರ್ಷ ತಂಡದ ಕೋಚ್ ಸ್ಥಾನದಲ್ಲಿ ನ್ಯೂಜಿಲೆಂಡ್ ಮಾಜಿ ನಾಯಕ ಕಾಣಿಸಿಕೊಳ್ಳುವುದು ಕೂಡ ಡೌಟ್ ಎನ್ನಲಾಗುತ್ತಿದೆ. ಹೀಗಾಗಿ ಈ ಟೂರ್ನಿ ಫ್ಲೆಮಿಂಗ್ ಪಾಲಿಗೆ ಮಹತ್ವದಾಗಿತ್ತು.

ಆದರೆ ಸಿಎಸ್​ಕೆ ಒಟ್ಟಾರೆ ಪ್ರದರ್ಶನವು ಕಳೆದ 10 ಸೀಸನ್​ನಲ್ಲೇ ಅತ್ಯಂತ ಕಳಪೆ ಎಂಬ ಟೀಕೆಗೆ ಗುರಿಯಾಗಿದೆ. ಹಾಗೆಯೇ 10 ಸೀಸನ್​ನಲ್ಲೂ ಪ್ಲೇ ಆಫ್ ಪ್ರವೇಶಿಸಿದ ತಂಡ ಎಂಬ ಹೆಗ್ಗಳಿಕೆ ಪಡೆದಿದ್ದ ಧೋನಿ ಪಡೆ ಈ ಬಾರಿ ಬಹುತೇಕ ಟೂರ್ನಿಯಿಂದ ಹೊರಬೀಳಲಿದೆ.POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by: zahir
First published: October 21, 2020, 4:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading