IPL

  • associate partner

IPL 2020 Live Score, SRH vs RCB: ಹೈದರಾಬಾದ್ ಗೆಲುವಿಗೆ ಬೇಕು 12 ಎಸೆತಗಳಲ್ಲಿ 22 ರನ್

Dream11 IPL 2020 in Kannada: ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​ 14 ಬಾರಿ ಮುಖಾಮುಖಿ ಆಗಿದೆ. ಆರ್​ಸಿಬಿ 6 ಹಾಗೂ ಸನ್​ರೈಸರ್ಸ್​ 7 ಪಂದ್ಯವನ್ನು ಗೆದ್ದರೆ, ಒಂದು ಪಂದ್ಯ ರದ್ದಾಗಿದೆ. ಹೀಗಾಗಿ, ಬಲಾಬಲದಲ್ಲಿ ಇಬ್ಬರೂ ಬಹುತೇಕ ಸಮವಾಗಿದ್ದಾರೆ.

news18-kannada
Updated:September 21, 2020, 11:17 PM IST
IPL 2020 Live Score, SRH vs RCB: ಹೈದರಾಬಾದ್ ಗೆಲುವಿಗೆ ಬೇಕು 12 ಎಸೆತಗಳಲ್ಲಿ 22 ರನ್
RCB
  • Share this:
ದುಬೈ (ಸೆ. 21): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 3ನೇ ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಉತ್ತಮ ಮೊತ್ತ ಕಲೆಹಾಕಿದೆ. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಅವರ ಉತ್ತಮ ಜೊತೆಯಾಟ ಮತ್ತು ಅಂತಿಮ ಹಂತದಲ್ಲಿ ಎಬಿ ಡಿವಿಲಿಯರ್ಸ್​ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ ಹೈದರಾಬಾದ್​​ಗೆ ಗೆಲ್ಲಲು 164 ರನ್​ಗಳ ಕಠಿಣ ಟಾರ್ಗೆಟ್ ನೀಡಿದೆ.

ಸದ್ಯ ಈ ಟಾರ್ಗೆಟ್ ಬೆನ್ನಟ್ಟಿರುವ ಹೈದರಾಬಾದ್ ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್(6) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್​ಗೆ ಜಾನಿ ಬೈರ್​ಸ್ಟೋ ಜೊತೆಯಾದ ಮನೀಶ್ ಪಾಂಡೆ ಅತ್ಯುತ್ತಮ ಆಟ ಪ್ರದರ್ಶಿಸಿದರು.

ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಆರ್​ಸಿಬಿ ಬೌಲರ್​ಗಳನ್ನು ಕಾಡಿದರು. ಆದರೆ, ಉತ್ತಮವಾಗೇ ಆಡುತ್ತಿದ್ದ ಮನೀಶ್ ಪಾಂಡೆ 34 ರನ್ ಗಳಿಸಿರುವಾಗ ಚಹಾಲ್ ಬೌಲಿಂಗ್​ನಲ್ಲಿ ಔಟ್ ಆದರು. ಈ ಮೂಲಕ ಬೈರ್​ಸ್ಟೋ-ಪಾಂಡೆ 67 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.

ಆದರೆ, ತನ್ನ ಅದ್ಭುತ ಆಟ ಮುಂದುವರೆಸಿದ ಬೈರ್​ಸ್ಟೋ ತಂಡದ ರನ್ ಗತಿಯನ್ನು ಕಡಿಮೆ ಆಗದಂತೆ ನೋಡಿಕೊಂಡರು. ಅದರಂತೆ ಅರ್ಧಶತಕವನ್ನೂ ಪೂರೈಸಿದರು. ಆದರೆ, ಈ ಸಂದರ್ಭ ನಡೆದಿದ್ದು ಚಹಾಲ್ ಸ್ಪಿನ್ ಮೋಡಿ.

ತನ್ನ ಗೂಗ್ಲಿ ಬೌಲಿಂಗ್​ನಿಂದ ಬೈರ್​ಸ್ಟೋ ಅವರನ್ನು ಬೌಲ್ಡ್​ ಮಾಡಿದರೆ ಬಂದ ಬೆನ್ನಲ್ಲೆ ವಿಜಯ್ ಶಂಕರ್ ಕೂಡ ಚಹಾಲ್ ಸ್ಪಿನ್ ಬಲೆಗೆ ಸಿಲುಕು ಪೆವಿಲಯನ್ ಸೇರಿಕೊಂಡರು. ಬೈರ್​ಸ್ಟೋ 43 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಿಡಿಸಿ 61 ರನ್ ಗಳಿಸಿದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಆರ್​​ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಓಪನರ್​ಗಳು 6 ಓವರ್​ನಲ್ಲಿ 53 ರನ್ ಕಲೆಹಾಕಿದರು.

ನಂತರವೂ ತನ್ನ ಆರ್ಭಟ ಮುಂದುವರೆಸಿದ ಪಡಿಕ್ಕಲ್ 36 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ ಐಪಿಎಲ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. ಆದರೆ, ಅರ್ಧಶತಕದ ಬೆನ್ನಲ್ಲೆ 56 ರನ್​ಗೆ ಔಟ್ ಆದರು. ಇದರ ಬೆನ್ನಲ್ಲೆ 27 ಎಸೆತಗಳಲ್ಲಿ 29 ರನ್ ಗಳಿಸಿದ್ದ ಫಿಂಚ್ ಕೂಡ ನಿರ್ಗಮಿಸಿ ಶಾಕ್ ನೀಡಿದರು. ನಾಯಕ ವಿರಾಟ್ ಕೊಹ್ಲಿ ತುಂಬಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 14 ರನ್​ಗೆ ಔಟ್ ಆದರು.IPL 2020 Live Score, SRH vs RCB:

ಬಳಿಕ ಎಬಿ ಡಿವಿಲಿಯರ್ಸ್​ ಹಾಗೂ ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಎಬಿಡಿ ಕೇವಲ 30 ಎಸೆತಗಳಲ್ಲಿ 4 ಬೌಂಡಿರಿ,  ಸಿಕ್ಸರ್ ಸಿಡಿಸಿ 51 ರನ್ ಚಚ್ಚಿ ಕೊನೆಯ ಓವರ್​​ನಲ್ಲಿ ಔಟ್ ಆದರು. ಅಂತಿಮವಾಗಿ ಆರ್​ಸಿಬಿ ನಿಗದಿತ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು.

ಹೈದರಾಬಾದ್ ಪರ ನಟರಾಜನ್, ಅಭಿಷೇಕ್ ಶರ್ಮಾ ಹಾಗೂ ವಿಜಯ್ ಶಂಕರ್ ತಲಾ 1 ವಿಕೆಟ್ ಕಿತ್ತರು.

ಆರ್‌ಸಿಬಿ : ಆ್ಯರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್‍ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಜೋಶ್ ಫಿಲಿಪ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ನವದೀಪ್ ಸೈನಿ, ಯಜುವೇಂದ್ರ ಚಹಲ್, ಡೇಲ್ ಸ್ಟೈನ್.





ಎಸ್‍ಆರ್​​ಎಚ್: ದೇವಿಡ್ ವಾರ್ನರ್ (ನಾಯಕ), ಜಾನಿ ಬೈರ್​ಸ್ಟೋ, ಮನೀಶ್ ಪಾಂಡೆ, ವಿಜಯ್ ಶಂಕರ್, ಮಿಚೆಲ್ ಸ್ಟಾರ್ಕ್​, ಪ್ರಿಯಂ ಗರ್ಗ್​, ಅಭಿಷೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಟಿ ನಟರಾಜನ್.





ಈವರೆಗೆ ಐಪಿಎಲ್​ನಲ್ಲಿ ಆರ್​ಸಿಬಿ ಹಾಗೂ ಸನ್​ರೈಸರ್ಸ್​ 14 ಬಾರಿ ಮುಖಾಮುಖಿ ಆಗಿದೆ. ಆರ್​ಸಿಬಿ 6 ಹಾಗೂ ಸನ್​ರೈಸರ್ಸ್​ 7 ಪಂದ್ಯವನ್ನು ಗೆದ್ದರೆ, ಒಂದು ಪಂದ್ಯ ರದ್ದಾಗಿದೆ. ಹೀಗಾಗಿ, ಬಲಾಬಲದಲ್ಲಿ ಇಬ್ಬರೂ ಬಹುತೇಕ ಸಮವಾಗಿದ್ದಾರೆ.
Published by: Vinay Bhat
First published: September 21, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading