IPL

  • associate partner

video viral: ಅಣು ಅಣುವಲ್ಲೂ… ಕಣ ಕಣದಲ್ಲೂ ಆರ್​​ಸಿಬಿ; ವೈರಲ್ ಆಗುತ್ತಿದೆ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳ ಆ್ಯಂಥಮ್!

RCB Fan Made Song: ಕೊಹ್ಲಿ ನಾಯಕತ್ವದ ಆರ್​ಸಿಬಿ ತಂಡ ಇಂದು ಹೈದರಾಬಾದ್​​ ತಂಡವನ್ನು ಎದುರಿಸುತ್ತಿದೆ. ಹಾಗಾಗಿ ಹೈದ ಸ್ಟೂಡಿಯೋ ಆರ್​ಸಿಬಿ ಮೇಲಿನ ಅಭಿಮಾನಕ್ಕೆ ಸಾಂಗ್​ ರಚಿಸಿ ತನ್ನ ಯ್ಯೂಟೂಬ್​ ಖಾತೆಯಲ್ಲಿ ಬಿಡುಗಡೆ ಮಾಡಿದೆ.

news18-kannada
Updated:September 21, 2020, 6:54 PM IST
video viral: ಅಣು ಅಣುವಲ್ಲೂ… ಕಣ ಕಣದಲ್ಲೂ ಆರ್​​ಸಿಬಿ; ವೈರಲ್ ಆಗುತ್ತಿದೆ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳ ಆ್ಯಂಥಮ್!
ಆರ್​ಸಿಬಿ ಗೀತೆ
  • Share this:
ಕನ್ನಡಿಗರ ನೆಚ್ಚಿನ ತಂಡವಾದ ಆರ್​ಸಿಬಿ ಇಂದು ಅರಬ್​ ನೆಲದಲ್ಲಿ  ಈ ವರ್ಷದ ಮೊದಲ ಐಪಿಎಲ್​ ಪಂದ್ಯವನ್ನು ಎದುರಿಸುತ್ತಿದೆ. ಕ್ರಿಕೆಟ್​ ಪ್ರಿಯರಂತು ನೆಚ್ಚಿನ ಕೊಹ್ಲಿಯ ತಂಡವನ್ನು ನೋಡಲು ಕಾದು ಕುಳಿತಿದ್ದಾರೆ. ಮತ್ತೊಂದೆಡೆ ಆರ್​ಸಿಬಿ ತಂಡದ ಮೇಲಿನ ಪ್ರೀತಿಯನ್ನು ಸಾಮಾಜಿಕ ಜಾಲತಾಣ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಅದರಂತೆ ಅಭಿಮಾನಿಗಳು ಆರ್​ಸಿಬಿ ಮತ್ತು ತಂಡದ ಕುರಿತಾಗಿ ಹೊಸ ಗೀತೆಯೊಂದು ಸಿದ್ಧಪಡಿಸಿ ಬಿಡುಗಡೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ಗೀತೆ ಭಾರೀ ವೈರಲ್​ ಆಗುತ್ತಿದೆ.

ಕೊಹ್ಲಿ ನಾಯಕತ್ವದ ಆರ್​ಸಿಬಿ ತಂಡ ಇಂದು ಹೈದರಾಬಾದ್​​ ತಂಡವನ್ನು ಎದುರಿಸುತ್ತಿದೆ. ಹಾಗಾಗಿ ಹೈದ ಸ್ಟೂಡಿಯೋ ಆರ್​ಸಿಬಿ ಮೇಲಿನ ಅಭಿಮಾನಕ್ಕೆ ಸಾಂಗ್​ ರಚಿಸಿ ಸೆ.18 ರಂದು ತನ್ನ ಯ್ಯೂಟೂಬ್​ ಖಾತೆಯಲ್ಲಿ ಬಿಡುಗಡೆ ಮಾಡಿದೆ.

ಅನಿರುದ್ಧ್​​ ಶಾಸ್ತ್ರಿ ಗೀತೆ ರಚಿಸುವ ಮೂಲಕ ಸಂಗೀತ ಸಂಯೋಜಿಸಿದ್ದಾರೆ. ಮಾಧುರಿ ಪರಶುರಾಮ್​​ ನಿರ್ದೇಶನದ ಜೊತೆ ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಮೈತ್ರಿ ಅಯ್ಯರ್​, ಮಧ್ವೇಶ್​ ಭಾರದ್ವಾಜ್​​, ಅನಿರುದ್ಧ್​​ ಶಾಸ್ತ್ರಿ ಹಾಡಿದ್ದಾರೆ.ಹಾಡಿನಲ್ಲಿ ಸಿನಿಮಾ ತಾರೆಯರನ್ನು ಸೇರಿಸಿಕೊಂಡು ಚಿತ್ರೀಕರಸಿಲಾಗಿದೆ. ನಟ ವಿಜಯ ರಾಘವೇಂದ್ರ, ಪ್ರಣಿತಾ ಸುಭಾಶ್​​, ಅದಿತಿ ಪ್ರಭುದೇವಾ, ಶ್ರೀನಿವಾಸ್​, ವಿಕ್ಕಿ ವರುಣ್​, ಸಂಜನಾ ಆನಂದ್​, ಅಮೃತಾ ಅಯ್ಯಂಗಾರ್​​​, ಸಪ್ತಮಿ ಗೌಡ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಆರ್​ಸಿಬಿ ಪ್ರಿಯರ ಸ್ಮಾರ್ಟ್​ಫೋನಿನಿಂದ ಹಿಡಿದು ಸಾಮಾಜಿಕ ಜಾಲತಾಣ ಎಲ್ಲೆಂದರಲ್ಲಿ ಈ ಹಾಡು ವೈರಲ್​ ಆಗುತ್ತಿದೆ.
Published by: Harshith AS
First published: September 21, 2020, 5:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading