IPL

  • associate partner

Devdutt Padikkal: ನಿನ್ನೆ ಪಂಜಾಬ್​ನಲ್ಲಿ ಮಿಂಚಿದ ಕನ್ನಡಿಗ ಮಯಾಂಕ್; ಇಂದು ಮತ್ತೋರ್ವ ಸದ್ದು ಮಾಡಲು ರೆಡಿ

ದೇಶಿ ಕ್ರಿಕೆಟ್​ನಲ್ಲಿ ಆಡಿದ ದೇವದತ್​ಗೆ ಅಂತಾರಾಷ್ಟ್ರೀಯ ಬೌಲರ್​ಗಳನ್ನು ಎದುರಿಸಿದ ಅನುಭವ ಇಲ್ಲ. ಹೀಗಾಗಿ, ಐಪಿಎಲ್​ನಲ್ಲಿ ಈ ಪರಿಸ್ಥಿತಿಯನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆಯೂ ಕಾಡುತ್ತಿದೆ.

news18-kannada
Updated:September 21, 2020, 11:25 AM IST
Devdutt Padikkal: ನಿನ್ನೆ ಪಂಜಾಬ್​ನಲ್ಲಿ ಮಿಂಚಿದ ಕನ್ನಡಿಗ ಮಯಾಂಕ್; ಇಂದು ಮತ್ತೋರ್ವ ಸದ್ದು ಮಾಡಲು ರೆಡಿ
ದೇಶಿ ಕ್ರಿಕೆಟ್​ನಲ್ಲಿ ಆಡಿದ ದೇವದತ್​ಗೆ ಅಂತಾರಾಷ್ಟ್ರೀಯ ಬೌಲರ್​ಗಳನ್ನು ಎದುರಿಸಿದ ಅನುಭವ ಇಲ್ಲ. ಹೀಗಾಗಿ, ಐಪಿಎಲ್​ನಲ್ಲಿ ಈ ಪರಿಸ್ಥಿತಿಯನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆಯೂ ಕಾಡುತ್ತಿದೆ.
  • Share this:
ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಕಿಂಗ್ಸ್​ ಇಲವೆನ್​ ಪಂಜಾಬ್​ ಸೋಲೊಪ್ಪಿಕೊಂಡಿತ್ತು. ಆದರೆ, ಇದು ಹೀನಾಯ ಸೋಲಾಗಿರಲಿಲ್ಲ. ಕೊನೆಯವರೆಗೂ ಹೋರಾಡಿ ಪಂಜಾಬ್​ ಸೋತಿತ್ತು. ಪಂಜಾಬ್​ನಲ್ಲಿ ಎಲ್ಲರ ಗಮನ ಸೆಳೆದಿದ್ದು ಕನ್ನಡಿಗ ಮಯಾಂಕ್​ ಅಗರ್​ವಾಲ್​. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದಡೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಮಯಾಂಕ್ ಅಗರ್​ವಾಲ್ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದರಲ್ಲೂ 18ನೇ ಓವರ್​ನಲ್ಲಿ ಎರಡು ಭರ್ಜರಿ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಏಕಾಂಗಿ ಹೋರಾಟ ನಡೆಸಿದ ಮಯಾಂಕ್​ 60 ಎಸೆತಗಳಲ್ಲಿ 89 ರನ್​ ಬಾರಿಸಿ ಗೆಲ್ಲಲು 1 ರನ್ ಇರುವಾಗ ಹೊರ ನಡೆದರು. ಮಯಾಂಕ್​ ಬ್ಯಾಟಿಂಗ್​ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂದು ನಡೆಯುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ ರೈಸರ್ಸ್​ ಹೈದರಾಬಾದ್ ನಡುವಣ ಪಂದ್ಯದಲ್ಲಿ ಮತ್ತೋರ್ವ ಕನ್ನಡಿಗ ಮಿಂಚಲು ರೆಡಿ ಆಗಿದ್ದಾರೆ. ಅವರು ಬೇರಾರು ಅಲ್ಲ, ದೇವದತ್​ ಪಡಿಕಲ್. ಅಷ್ಟಕ್ಕೂ ಈ ದೇವದತ್ ಯಾರು ಅನ್ನೋ ಪ್ರಶ್ನೆಗೆ ಅದಕ್ಕೆ ಇಲ್ಲಿದೆ ಉತ್ತರ.

ದೇವದತ್​ ಪಡಿಕಲ್​ ಆರ್​ಸಿಬಿಯಲ್ಲಿರುವ ಏಕೈಕ ಕನ್ನಡಿಗ. ಈ ಮೊದಲು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ರನ್​ ಹೊಳೆಯನ್ನೇ ಹರಿಸಿದ್ದ ಅವರು, ಈಗ ಐಪಿಎಲ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇಂದು ಆರ್​ಸಿಬಿ 11 ಪಟ್ಟಿಯಲ್ಲಿ ಅವರು ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಆರ್​ಸಿಬಿ ಕೀಪರ್​ ಆಯ್ಕೆ ಗೊಂದಲ್ಲಿದೆ. ಒಂದೊಮ್ಮೆ ಎಬಿ ಡಿವಿಲಿರ್ಯಸ್​ ಕೀಪಿಂಗ್​ ಮಾಡಲು ಒಪ್ಪಿದರೆ ಆಗ ದೇವದತ್​ಗೆ ತಂಡದಲ್ಲಿ ಸ್ಥಾನ ಸಿಗಲಿದೆ. ಒಂದೊಮ್ಮೆ ಎಬಿಡಿ ಕೀಪಿಂಗ್ ಮಾಡಲು ಹಿಂಜರಿದರೆ ಆಗ, ಪಾರ್ಥಿವ್​ ಪಟೇಲರ್​ನ್ನು ಹಾಕಿಕೊಳ್ಳೋದು ಅನಿವಾರ್ಯ ಆಗಲಿದೆ.

ದೇವದತ್ 2019ರಲ್ಲಿ ರಾಯಲ್​ ಚಾಲೆಂಜರ್ಸ್​ ತಂಡ ಸೇರಿಕೊಂಡಿದ್ದರು. ಆದರೆ, ಈ ವರೆಗೆ ಒಂದೇ ಒಂದು ಪಂದ್ಯ ಆಡಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಅವರು ಈಗ ರಣಜಿ ಟ್ರೋಫಿ ಹಾಗೂ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಅವರಿಗೆ ಆಡೋಕೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.

ದೇಶಿ ಕ್ರಿಕೆಟ್​ನಲ್ಲಿ ಆಡಿದ ದೇವದತ್​ಗೆ ಅಂತಾರಾಷ್ಟ್ರೀಯ ಬೌಲರ್​ಗಳನ್ನು ಎದುರಿಸಿದ ಅನುಭವ ಇಲ್ಲ. ಹೀಗಾಗಿ, ಐಪಿಎಲ್​ನಲ್ಲಿ ಈ ಪರಿಸ್ಥಿತಿಯನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಒಂದೊಮ್ಮೆ ಅವರು ಇಂದು ಉತ್ತಮವಾಗಿ ಬಾಲ್​ ಎದುರಿಸದರೆ, ಆರ್​ಸಿಬಿ ತಂಡಕ್ಕೆ ದೊಡ್ಡ ಆಸರೆ ಸಿಗಲಿದೆ.
Published by: Rajesh Duggumane
First published: September 21, 2020, 11:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading