IPL

  • associate partner

IPL 2020: ಈ ಸಲ ಕಪ್ ಅವರದ್ದೇ ಎಂದು ಭವಿಷ್ಯ ನುಡಿದ ಪ್ರಗ್ಯಾನ್ ಓಜಾ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಡೆಕ್ಕನ್ ಚಾರ್ಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಒಟ್ಟು 92 ಪಂದ್ಯಗಳನ್ನಾಡಿರುವ ಓಜಾ 89 ವಿಕೆಟ್ ಕಬಳಿಸಿದ್ದಾರೆ.

news18-kannada
Updated:October 21, 2020, 7:07 PM IST
IPL 2020: ಈ ಸಲ ಕಪ್ ಅವರದ್ದೇ ಎಂದು ಭವಿಷ್ಯ ನುಡಿದ ಪ್ರಗ್ಯಾನ್ ಓಜಾ
pragyan ojha
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲ ಹಂತದ ನಿರ್ಣಾಯಕ ಘಟ್ಟದಲ್ಲಿದೆ. ಇನ್ನು ಮೂರು ಪಂದ್ಯಗಳು ಮುಗಿದರೆ ಪ್ಲೇ ಆಫ್ ಆಡುವ ತಂಡಗಳಾವುವು ಎಂಬುದುರ ಸ್ಪಷ್ಟ ಚಿತ್ರಣ ದೊರೆಯಲಿದೆ. ಈಗಾಗಲೇ ಆಡಿರುವ 10 ಪಂದ್ಯಗಳಲ್ಲಿ 7 ವಿಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆಯೇ ಬಲಿಷ್ಠ ಮುಂಬೈ ಇಂಡಿಯನ್ಸ್ 9 ಪಂದ್ಯಗಳಲ್ಲಿ 6 ರಲ್ಲಿ ಜಯಗಳಿಸಿ 2ನೇ ಸ್ಥಾನ ಅಲಂಕರಿಸಿಕೊಂಡಿದೆ. ಅದರೊಂದಿಗೆ 9 ಮ್ಯಾಚ್​ನಲ್ಲಿ 3 ರಲ್ಲಿ ಸೋತು 6 ರಲ್ಲಿ ಗೆದ್ದಿರುವ ರಾಯಲ್ ಚಾಲೆಂಜರ್ಸ್​ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ಕೆಕೆಆರ್ ಇದ್ದರೆ, 5ನೇ ಸ್ಥಾನಕ್ಕೆ ಕಿಂಗ್ಸ್​ ಇಲೆವೆನ್ ಪಂಜಾಬ್ ಲಗ್ಗೆಯಿಟ್ಟಿದೆ. ಇದರೊಂದಿಗೆ ಈ ಬಾರಿ ಪ್ಲೇ ಆಫ್ ಆಡಲಿರುವ ತಂಡಗಳಾವುವು ಬಿಸಿ ಚರ್ಚೆ ಶುರುವಾಗಿದೆ.

ಟೀಮ್ ಇಂಡಿಯಾ ಮಾಜಿ ಆಟಗಾರ ಅಜಿತ್ ಅಗರ್ಕರ್ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪ್ಲೇ ಆಫ್ ಪ್ರವೇಶಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಹಾಗೆಯೇ 4ನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಪೈಪೋಟಿ ನಡೆಯಲಿದೆ ಎಂದಿದ್ದಾರೆ.

ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪ್ಲೇ ಆಫ್​ನಲ್ಲಿ ಸೆಣಸಲಿವೆ ಎಂದಿದ್ದಾರೆ. ಈ ಇಬ್ಬರು ಕ್ರಿಕೆಟಿಗರ ಹೇಳಿಕೆ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಓಜಾ, ನನ್ನ ಪ್ರಕಾರ ಈ ಬಾರಿ ಕಪ್ ಗೆಲ್ಲುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಭವಿಷ್ಯ ನುಡಿದಿದ್ದಾರೆ. ಆರ್​ಸಿಬಿ ಆಡುತ್ತಿರುವ ರೀತಿ ನೋಡಿದ್ರೆ, ಅವರು ತಮ್ಮ ಕನಸಿನ ಸನಿಹದಲ್ಲಿದ್ದಾರೆ ಎಂದೆನಿಸುತ್ತದೆ. ಪ್ರಸ್ತುತ ಪ್ರದರ್ಶನ ನೋಡಿದ್ರೆ ಆರ್​ಸಿಬಿ ಕಪ್ ಗೆಲ್ಲುವುದು ಕನಸಾಗಿ ಉಳಿಯುವುದಿಲ್ಲ. ಏಕೆಂದರೆ ಎಬಿ ಡಿವಿಲಿಯರ್ಸ್ , ವಿರಾಟ್ ಕೊಹ್ಲಿ, ಕ್ರಿಸ್ ಮೋರಿಸ್ ಅವರಂತಹ ಆಟಗಾರರು ಒಂದು ಬಾರಿ ಲಯ ಕಂಡುಕೊಂಡರೆ ವಿಭಿನ್ನ ಆಟಗಾರರಾಗುತ್ತಾರೆ. ಅದು ಈಗ ಆಗಿದೆ ಎಂದು ಪ್ರಗ್ಯಾನ್ ಓಜಾ ತಿಳಿಸಿದ್ದಾರೆ.

ಆರ್​ಸಿಬಿ ತಂಡವು ಈ ಬಾರಿ ಸಂಯೋಜಿತವಾಗಿದ್ದು, ಮೈಕ್ ಹಸ್ಸನ್ ಅವರ ನೇತೃತ್ವದ ಸಪೋರ್ಟ್ ಸ್ಟಾಫ್‌ಗಳು ಅದ್ಭುತವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇದರ ಫಲಿತಾಂಶವೇ ಅಂಗಳದಲ್ಲಿ ಕಂಡು ಬರುತ್ತಿರುವ ಫಲಿತಾಂಶ ಎಂದು ಓಜಾ ಹೇಳಿದ್ದಾರೆ.

ಈ ವರ್ಷ ಐಪಿಎಲ್​ ಚಾಂಪಿಯನ್ ಪಟ್ಟವನ್ನು ಆರ್​ಸಿಬಿ ಅಲಂಕರಿಸಲಿದೆ ಎಂಬುದು ನನ್ನ ನಂಬಿಕೆ. ಪ್ರಸ್ತುತ ಆಡುತ್ತಿರುವ ವಿಧಾನ ಕೂಡ ಅದು ಕನಸಾಗಿರುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ಐಪಿಎಲ್ ಪರ್ಪಲ್ ಕ್ಯಾಪ್ ವಿನ್ನರ್ ಪ್ರಗ್ಯಾನ್ ಓಜಾ ತಿಳಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಡೆಕ್ಕನ್ ಚಾರ್ಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಒಟ್ಟು 92 ಪಂದ್ಯಗಳನ್ನಾಡಿರುವ ಓಜಾ 89 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಏಕೈಕ ಭಾರತೀಯ ಸ್ಪಿನ್ನರ್ ಎಂಬ ದಾಖಲೆ ಓಜಾ ಹೆಸರಿನಲ್ಲಿದೆ. 2010 ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ಓಜಾ ಸಹ ಪರ್ಪಲ್ 16 ಪಂದ್ಯಗಳನ್ನು ಆಡಿದ್ದು 21 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
Published by: zahir
First published: October 21, 2020, 7:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading