IPL

  • associate partner

IPL 2020 Points Table: ಆರ್​ಸಿಬಿಗೆ ಪ್ಲೇಆಫ್​ ಖಚಿತವಾಗಲು ಸಾಕು ಇನ್ನೊಂದೇ ಗೆಲುವು!

ಆರ್​ಸಿಬಿ ಆಡಿದ 10 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಮೂರರಲ್ಲಿ ಸೋಲು ಕಂಡಿದೆ. ನಿನ್ನೆಯ ಪಂದ್ಯವನ್ನು ಅನಾಯಾಸವಾಗಿ ಗೆಲ್ಲುವ ಮೂಲಕ ಇಷ್ಟು ದಿನ ಮೈನಸ್​ ಇದ್ದ ರನ್​ ರೇಟ್​ ಈಗ ಧನಾತ್ಮಕವಾಗಿದೆ. 

news18-kannada
Updated:October 22, 2020, 7:54 AM IST
IPL 2020 Points Table: ಆರ್​ಸಿಬಿಗೆ ಪ್ಲೇಆಫ್​ ಖಚಿತವಾಗಲು ಸಾಕು ಇನ್ನೊಂದೇ ಗೆಲುವು!
RCB
  • Share this:
ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಅಮೋಘ ಗೆಲುವು ಕಂಡಿದೆ. ಆರ್​ಸಿಬಿ ಬೌಲರ್​ಗಳ ಬೆಂಕಿಯ ಚೆಂಡಿಗೆ ನಲುಗಿದ ಕೆಕೆಆರ್ ಸೋಲುಂಡರೆ ಆರ್​ಸಿಬಿ 8 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಸಾಕಷ್ಟು ಅಡೆತಡೆಗಳನ್ನು ಎದುರಿಸಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಭಾರತದಲ್ಲಿ ಐಪಿಎಲ್​ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್​ ಯುಎಇಗೆ ಶಿಫ್ಟ್​ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್​ ಆಡಿದ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಈ ಮೂಲಕ 14 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೊದಲಿದೆ. ಆರ್​ಸಿಬಿ ಆಡಿದ 10 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಮೂರರಲ್ಲಿ ಸೋಲು ಕಂಡಿದೆ. ನಿನ್ನೆಯ ಪಂದ್ಯವನ್ನು ಅನಾಯಾಸವಾಗಿ ಗೆಲ್ಲುವ ಮೂಲಕ ಇಷ್ಟು ದಿನ ಮೈನಸ್​ ಇದ್ದ ರನ್​ ರೇಟ್​ ಈಗ ಧನಾತ್ಮಕವಾಗಿದೆ.  ಅಲ್ಲದೆ, ಡೆಲ್ಲಿ-ಆರ್​ಸಿಬಿ ಪ್ಲೇ ಆಫ್​ಗೆ ಏರುವುದು ಬಹುತೇಕ ಖಚಿತವಾಗಿದೆ. ಮುಂಬೈ ಇಂಡಿಯನ್ಸ್​​  ಆಡಿದ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಮೂರನೇ ಸ್ಥಾನದಲ್ಲಿದೆ.

ಕೋಲ್ಕತ್ತಾ 10  ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಐದರಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಪಂಜಾಬ್​ ಇದೆ. ಆರನೇ ಸ್ಥಾನದಲ್ಲಿ ರಾಜಸ್ಥಾನ್​​, ಏಳನೇ ಸ್ಥಾನದಲ್ಲಿ ಹೈದರಾಬಾದ್​ ಹಾಗೂ ಕೊನೆಯ ಸ್ಥಾನದಲ್ಲಿ ಚೆನ್ನೈ ಇದೆ.

POINTS TABLE:


ಅತಿ ಹೆಚ್ಚು ರನ್​ ಹೊಡೆದವರಿಗೆ ನೀಡುವ ಆರೆಂಜ್​ ಕ್ಯಾಪ್​ ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡದ ನಾಯಕ ಕೆಎಲ್​ ರಾಹುಲ್​ ಬಳಿ ಇದೆ. 10 ಪಂದ್ಯಗಳಿಂದ ಅವರು 540 ರನ್​ ಕಲೆ ಹಾಕಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಬೌಲರ್​ ರಬಾಡ 21 ವಿಕೆಟ್​ ತೆಗೆಯುವ ಮೂಲಕ ಈ ಮೂಲಕ ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.
Published by: Rajesh Duggumane
First published: October 22, 2020, 7:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading