IPL

  • associate partner

IPL 2020 Points Table: ಪಾಯಿಂಟ್ ಪಟ್ಟಿಯಲ್ಲಿ ಸಿಎಸ್​ಕೆ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆರ್​​ಸಿಬಿ

ಆರ್​ಸಿಬಿ, ಸಿಎಸ್​ಕೆ, ಡೆಲ್ಲಿ ತಲಾ ಒಂದು ಮ್ಯಾಚ್​ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿವೆ. ಎಲ್ಲರಿಗೂ ಪಾಯಿಂಟ್ಸ್​ ಎರಡೇ ಬಂದರೂ ರನ್​ ರೇಟ್​ ಆಧಾರದ ಮೇಲೆ ಬೇರೆ ಬೇರೆ ಸ್ಥಾನ ನೀಡಲಾಗಿದೆ.

news18-kannada
Updated:September 22, 2020, 8:45 AM IST
IPL 2020 Points Table: ಪಾಯಿಂಟ್ ಪಟ್ಟಿಯಲ್ಲಿ ಸಿಎಸ್​ಕೆ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆರ್​​ಸಿಬಿ
RCB
  • Share this:
ಸೋಮವಾರ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 10 ರನ್​ಗಳ ರೋಚಕ ಜಯ ಸಾಧಿಸಿತು. ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಬಗ್ಗು ಬಡಿದ ಕೊಹ್ಲಿ ಪಡೆ ಮೊದಲ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಸಾಕಷ್ಟು ಅಡೆತಡೆಗಳನ್ನು ಎದುರಿಸಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಭಾರತದಲ್ಲಿ ಐಪಿಎಲ್​ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್​ ಯುಎಇಗೆ ಶಿಫ್ಟ್​ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ. ಈಗಾಗಲೇ ಮೂರು ಪಂದ್ಯ ಮುಗಿದಿದ್ದು, ಈ ಪಂದ್ಯಗಳ ಫಲಿತಾಂಶದಲ್ಲಿ ಆರ್​ಸಿಬಿ ಮೊದಲ ಸ್ಥಾನದಲ್ಲಿದೆ. ಈ ಮೂಲಕ ಸಿಎಸ್​ಕೆ ಎರಡನೇ ಸ್ಥಾನಕ್ಕೆ ಇಳಿದಿದೆ.

ಆರ್​ಸಿಬಿ, ಸಿಎಸ್​ಕೆ, ಡೆಲ್ಲಿ ತಲಾ ಒಂದು ಮ್ಯಾಚ್​ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಅನುಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಎಲ್ಲರಿಗೂ ಪಾಯಿಂಟ್ಸ್​ ಎರಡೇ ಬಂದರೂ ರನ್​ ರೇಟ್​ ಆಧಾರದ ಮೇಲೆ ಆರ್​ಸಿಬಿ ಸಿಎಸ್​ಕೆಗಿಂತ ಮುಂದಿದೆ. ಆರ್​ಸಿಬಿಯ ರನ್​ ರೇಟ್​ +0.500 ಇದ್ದರೆ, ಸಿಎಸ್​ಕೆಯದ್ದು, +0486 ಇದೆ. ಡೆಲ್ಲಿಯದ್ದು +0.000 ಇದೆ.



ಅತಿ ಹೆಚ್ಚು ರನ್​ ಹೊಡೆದವರಿಗೆ ನೀಡುವ ಆರೆಂಜ್​ ಕ್ಯಾಪ್​ ಮಯಾಂಕ್​ ಅಗರ್​ವಾಲ್​ (89 ರನ್​) ಹಾಗೂ ಅತಿ ಹೆಚ್ಚು ವಿಕೆಟ್​ ಪಡೆದವರಿಗೆ ನೀಡುವ ಪರ್ಪಲ್​ ಕ್ಯಾಪ್​ ಮಹ್ಮದ್​ ಶಮಿ (3 ವಿಕೆಟ್ಸ್​) ಬಳಿ ಇದೆ.
Published by: Rajesh Duggumane
First published: September 22, 2020, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading