IPL

  • associate partner

IPL 2020 Points Table: ಈ ಬಾರಿಯ ಐಪಿಎಲ್​ ಪಾಯಿಂಟ್​ ಟೇಬಲ್​ ಇಲ್ಲಿದೆ

ಅತಿ ಹೆಚ್ಚು ರನ್​ ಹೊಡೆದವರಿಗೆ ನೀಡುವ ಆರೆಂಜ್​ ಕ್ಯಾಪ್​ ಮಯಾಂಕ್​ ಅಗರ್​ವಾಲ್​ (89 ರನ್​) ಹಾಗೂ ಅತಿ ಹೆಚ್ಚು ವಿಕೆಟ್​ ಪಡೆದವರಿಗೆ ನೀಡುವ ಪರ್ಪಲ್​ ಕ್ಯಾಪ್​ ಮಹ್ಮದ್​ ಶಮಿ (3 ವಿಕೆಟ್ಸ್​) ಬಳಿ ಇದೆ.

news18-kannada
Updated:September 21, 2020, 12:31 PM IST
IPL 2020 Points Table: ಈ ಬಾರಿಯ ಐಪಿಎಲ್​ ಪಾಯಿಂಟ್​ ಟೇಬಲ್​ ಇಲ್ಲಿದೆ
ಸಾಂದರ್ಭಿಕ ಚಿತ್ರ
  • Share this:
ಸಾಕಷ್ಟು ಅಡೆತಡೆಗಳನ್ನು ಎದುರಿಸಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಭಾರತದಲ್ಲಿ ಐಪಿಎಲ್​ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್​ ಯುಎಇಗೆ ಶಿಫ್ಟ್​ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ. ಈಗಾಗಲೇ ಎರಡು ಪಂದ್ಯ ಮುಗಿದಿದ್ದು, ಮೂರನೇ ಪಂದ್ಯ ಆರ್​ಸಿಬಿ ಹಾಗೂ ಸನ್​ ರೈಸರ್ಸ್​ ಹೈದರಾಬಾದ್  ನಡುವೆ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿ ಸ್ಟೇಡಿಯಂನಲ್ಲಿ ಕಿಕ್ಕಿರದ ಅಭಿಮಾನಿಗಳು, ಹರ್ಷೋದ್ಘಾರ ಇಲ್ಲ.  ಪಂದ್ಯದ ನಡುವೆ ಬೌಂಡರಿ- ಸಿಕ್ಸರ್ ಹೊಡೆದಾಗ​ ಹಾಗೂ ವಿಕೆಟ್​ ಬಿದ್ದಾಗ ನೃತ್ಯ ಮಾಡುತ್ತಿದ್ದ ಚಿಯರ್​ ಲೀಡರ್​ಗಳೂ ಇಲ್ಲ.  ಆದರೆ, ಟಿವಿ ಪ್ರಸಾರದ ವೇಳೆ ಜನರ ಕೂಗಾಟ, ಸಿಳ್ಳೆಯ ಮ್ಯೂಸಿಕ್​ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಈ ಮೂಲಕ ನೋಡುಗರಿಗೆ ಮನರಂಜನೆ ನೀಡಲಾಗುತ್ತಿದೆ.

ಐಪಿಎಲ್​ ಪಾಯಿಂಟ್​ ಟೇಬಲ್​ ಪಟ್ಟಿ ಬಗ್ಗೆ ಎಲ್ಲರ ಗಮನ ಇದ್ದೇ ಇರುತ್ತದೆ. ಆ ಬಗ್ಗೆ ಇಲ್ಲಿದೆ ಮಾಹಿತಿ. ಒಂದು ಪಂದ್ಯ ಗೆದ್ದರೆ ಒಂದು ತಂಡಕ್ಕೆ ಎರಡು ಪಾಯಿಂಟ್​ ನೀಡಲಾಗುತ್ತದೆ. ಇನ್ನು, ಪಂದ್ಯ ರದ್ದಾದರೆ ಎರಡೂ ತಡಂಕ್ಕೆ ತಲಾ ಒಂದು ಪಾಯಿಂಟ್​ ನೀಡಲಾಗುತ್ತದೆ.

ತಲಾ ಒಂದು ಮ್ಯಾಚ್​ ಗೆಲ್ಲುವ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಮೊದಲೆರಡು ಸ್ಥಾನದಲ್ಲಿವೆ. ಕಿಂಗ್ಸ್​ ಇಲವೆನ್ ಪಂಜಾಬ್​ ಮೂರನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್​ ಕೊನೆಯ ಸ್ಥಾನದಲ್ಲಿದೆ.

ಪಾಯಿಂಟ್​ ಟೇಬಲ್


ಅತಿ ಹೆಚ್ಚು ರನ್​ ಹೊಡೆದವರಿಗೆ ನೀಡುವ ಆರೆಂಜ್​ ಕ್ಯಾಪ್​ ಮಯಾಂಕ್​ ಅಗರ್​ವಾಲ್​ (89 ರನ್​) ಹಾಗೂ ಅತಿ ಹೆಚ್ಚು ವಿಕೆಟ್​ ಪಡೆದವರಿಗೆ ನೀಡುವ ಪರ್ಪಲ್​ ಕ್ಯಾಪ್​ ಮಹ್ಮದ್​ ಶಮಿ (3 ವಿಕೆಟ್ಸ್​) ಬಳಿ ಇದೆ.
Published by: Rajesh Duggumane
First published: September 21, 2020, 12:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading