IPL

  • associate partner

IPL 2020: ಅದ್ಭುತ ಕ್ಯಾಚ್ ಮೂಲಕ ಪವರ್ ಹರಿಸಿದ ಪಡಿಕ್ಕಲ್: ವಿಡಿಯೋ ವೈರಲ್

45 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 74 ರನ್ ಬಾರಿಸಿದರು. ಈ ಆಕರ್ಷಕ ಆಟದಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಮೂಡಿಬಂದಿತ್ತು. ಆರ್​ಸಿಬಿ ಆರಂಭಿಕ ಮನಮೋಹಕ ಬ್ಯಾಟಿಂಗ್​ ನೆರವಿನಿಂದ ಅಂತಿಮವಾಗಿ ಆರ್​​ಸಿಬಿ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.

news18-kannada
Updated:October 28, 2020, 11:03 PM IST
IPL 2020: ಅದ್ಭುತ ಕ್ಯಾಚ್ ಮೂಲಕ ಪವರ್ ಹರಿಸಿದ ಪಡಿಕ್ಕಲ್: ವಿಡಿಯೋ ವೈರಲ್
ದೇವದತ್ ಪಡಿಕ್ಕಲ್
  • Share this:
ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ದೇವದತ್‌ ಪಡಿಕ್ಕಲ್‌ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಮೊಹಮ್ಮದ್ ಸಿರಾಜ್ ಎಸೆದ 11ನೇ ಓವರಿನ 4ನೇ ಎಸೆತವನ್ನು ಸೌರಭ್ ತಿವಾರಿ ಮಿಡ್ ಆನ್​ನತ್ತ ಬಲವಾಗಿ ಹೊಡೆದಿದ್ದರು. ಆದರೆ ಅಲ್ಲೇ ಫೀಲ್ಡಿಂಗ್​ನಲ್ಲಿದ್ದ ದೇವದತ್ ಪಡಿಕ್ಕಲ್ ಮುಂದಕ್ಕೆ ಡೈವ್ ಹೊಡೆಯುವ ಮೂಲಕ ಚೆಂಡನ್ನು ತಮ್ಮ ಕೈಯೊಳಗೆ ಬಂಧಿಸಿದರು. ಈ ಅದ್ಭುತ ಕ್ಯಾಚ್ ನೋಡಿ ಆರ್​ಸಿಬಿ ಕೋಚ್ ಸೈಮನ್ ಕ್ಯಾಟಿಚ್ ಕೂಡ ದಂಗಾದರು.

ಪಡಿಕ್ಕಲ್ ಅವರ ಈ ಅತ್ಯುತ್ತಮ ಫೀಲ್ಡಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್​ ತಂಡದ ಮೂರನೇ ವಿಕೆಟ್ ಪತನವಾಯಿತು. ಇದಕ್ಕೂ ಮುನ್ನ ಬ್ಯಾಟಿಂಗ್​ನಲ್ಲಿ ಮಿಂಚಿದ್ದ ದೇವದತ್ ಆರ್​ಸಿಬಿ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿದ್ದರು. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಜೋಷ್ ಫಿಲಿಪ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 71 ರನ್​ಗಳ ಕಾಣಿಕೆ ಕಲೆಹಾಕಿದರು.



ಈ ಹಂತದಲ್ಲಿ ಮುನ್ನುಗ್ಗಿ ಚೆಂಡನ್ನು ಹೊಡೆಯಲು ಹೋಗಿ ಫಿಲಿಪ್ (33) ಸ್ಟಂಪ್​ ಔಟ್​ಗೆ ಬಲಿಯಾದರು. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ(9) ಕೂಡ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಪಡಿಕ್ಕಲ್ ಐಪಿಎಲ್​ನಲ್ಲಿ 3ನೇ ಅರ್ಧಶತಕ ಸಿಡಿಸಿ ಮಿಂಚಿದರು. 3ನೇ ವಿಕೆಟ್​ಗೆ ಎಬಿ ಡಿವಿಲಿಯರ್ಸ್​ ಜೊತೆಯಾದ ಪಡಿಕ್ಕಲ್ ಒಂದಿಷ್ಟು ರನ್ ಕಲೆಹಾಕಿದರು. ಆದರೆ ಎಬಿಡಿ(15) ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರು.


45 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 74 ರನ್ ಬಾರಿಸಿದರು. ಈ ಆಕರ್ಷಕ ಆಟದಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಮೂಡಿಬಂದಿತ್ತು. ಆರ್​ಸಿಬಿ ಆರಂಭಿಕ ಮನಮೋಹಕ ಬ್ಯಾಟಿಂಗ್​ ನೆರವಿನಿಂದ ಅಂತಿಮವಾಗಿ ಆರ್​​ಸಿಬಿ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಇದೀಗ ಫೀಲ್ಡಿಂಗ್​ನಲ್ಲೂ ತಮ್ಮ ಕಾಣಿಕೆ ನೀಡುವ ಸಂಚಲನ ಸೃಷ್ಟಿಸುತ್ತಿದ್ದಾರೆ ದೇವದತ್ ಪಡಿಕ್ಕಲ್.



POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!
Published by: zahir
First published: October 28, 2020, 10:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading