IPL

  • associate partner

IPL 2020: ಆರೆಂಜ್​-ಪರ್ಪಲ್​ ಕ್ಯಾಪ್​ ಯಾರ ಬಳಿ ಇದೆ?; ಇಲ್ಲಿದೆ ಮಾಹಿತಿ

ಐಪಿಎಲ್​ ಎಂದಮೇಲೆ ಸಿಕ್ಸ್​​ನ ಸುರಿಮಳೆ ಸುರಿಯೋದು ಕಾಮನ್​. ಈ ರೀತಿ ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ನಿಕೋಲಸ್​ ಪೂರನ್​ ಮೊದಲಿದ್ದಾರೆ. 10  ಪಂದ್ಯಗಳಲ್ಲಿ ಅವರು ಬರೋಬ್ಬರಿ 22 ಸಿಕ್ಸ್​ ಸಿಡಿಸಿದ್ದಾರೆ.

news18-kannada
Updated:October 23, 2020, 8:12 AM IST
IPL 2020: ಆರೆಂಜ್​-ಪರ್ಪಲ್​ ಕ್ಯಾಪ್​ ಯಾರ ಬಳಿ ಇದೆ?; ಇಲ್ಲಿದೆ ಮಾಹಿತಿ
IPL 2020
  • Share this:
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 40ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಅವರ ಶತಕದ ಜೊತೆಯಾಟದ ನೆರವಿನಿಂದ ಎಸ್​ಆರ್​ಹೆಚ್ ತಂಡ 8 ವಿಕೆಟ್​ಗಳ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ.

ಅತಿ ಹೆಚ್ಚು ರನ್​ ಹೊಡೆಯುವವರಿಗೆ ನೀಡುವ ಆರೆಂಜ್​ ಕ್ಯಾಪ್ ಕಿಂಗ್ಸ್​ ಇಲವೆನ್ ಪಂಜಾಬ್​ ತಂಡದ ಆಟಗಾರ, ಕನ್ನಡಿಗ ಕೆಎಲ್​ ರಾಹುಲ್​​ ಬಳಿ ಇದೆ. 10 ಪಂದ್ಯಗಳಲ್ಲಿ ಅವರು 540 ರನ್​ ಕಲೆ ಹಾಕಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್​ ಕಲೆ ಹಾಕುವ ಮೂಲಕ ಆರೇಂಜ್​ ಕ್ಯಾಪ್​ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ORANGE CAP:

ಇನ್ನು ಅತಿ ಹೆಚ್ಚು ವಿಕೆಟ್​ ತೆಗೆದವರಿಗೆ ನೀಡುವ ಪರ್ಪಲ್ ಕ್ಯಾಪ್​ ಈ ಬಾರಿ ಡೆಲ್ಲಿ ಬೌಲರ್​ ರಬಾಡ ಬಳಿ ಇದೆ. 21 ವಿಕೆಟ್​ ಕೀಳುವ ಮೂಲಕ ಅವರು ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.

ORANGE CAP:

ಐಪಿಎಲ್​ ಎಂದಮೇಲೆ ಸಿಕ್ಸ್​​ನ ಸುರಿಮಳೆ ಸುರಿಯೋದು ಕಾಮನ್​. ಈ ರೀತಿ ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ನಿಕೋಲಸ್​ ಪೂರನ್​ ಮೊದಲಿದ್ದಾರೆ. 10  ಪಂದ್ಯಗಳಲ್ಲಿ ಅವರು ಬರೋಬ್ಬರಿ 22 ಸಿಕ್ಸ್​ ಸಿಡಿಸಿದ್ದಾರೆ.

MOST SIXES: ಡೆಲ್ಲಿ ಕ್ಯಾಪಿಟಲ್ಸ್​ ಆಡಿದ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಈ ಮೂಲಕ 14 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೊದಲಿದೆ. ಆರ್​ಸಿಬಿ ಆಡಿದ 10 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಮೂರರಲ್ಲಿ ಸೋಲು ಕಂಡಿದೆ. ಕೆಕೆಆರ್​ ವಿರುದ್ಧ ಅನಾಯಾಸವಾಗಿ ಗೆಲ್ಲುವ ಮೂಲಕ ಇಷ್ಟು ದಿನ ಮೈನಸ್​ ಇದ್ದ ರನ್​ ರೇಟ್​ ಈಗ ಧನಾತ್ಮಕವಾಗಿದೆ. ಅಲ್ಲದೆ, ಡೆಲ್ಲಿ-ಆರ್​ಸಿಬಿ ಪ್ಲೇ ಆಫ್​ಗೆ ಏರುವುದು ಬಹುತೇಕ ಖಚಿತವಾಗಿದೆ. ಮುಂಬೈ ಇಂಡಿಯನ್ಸ್​​ ಆಡಿದ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಮೂರನೇ ಸ್ಥಾನದಲ್ಲಿದೆ.

POINTS TABLE:

ಕೋಲ್ಕತ್ತಾ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಐದರಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಹೈದರಾಬಾದ್​ನಲ್ಲಿದೆ. ಆರನೇ ಸ್ಥಾನದಲ್ಲಿ ಪಂಜಾಬ್​​, ಏಳನೇ ಸ್ಥಾನದಲ್ಲಿ ರಾಜಸ್ಥಾನ್​​ ಹಾಗೂ ಕೊನೆಯ ಸ್ಥಾನದಲ್ಲಿ ಚೆನ್ನೈ ಇದೆ.
Published by: Rajesh Duggumane
First published: October 23, 2020, 8:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading