IPL

  • associate partner

IPL 2020: ಕನ್ನಡಿಗನ ಕೈಯಲ್ಲಿದೆ ಆರೆಂಜ್​ ಕ್ಯಾಪ್​; ರಬಾಡ ಬಳಿ ಇದೆ ಪರ್ಪಲ್ ಕ್ಯಾಪ್

ಐಪಿಎಲ್​ ಎಂದಮೇಲೆ ಸಿಕ್ಸ್​​ನ ಸುರಿಮಳೆ ಸುರಿಯೋದು ಕಾಮನ್​. ಈ ರೀತಿ ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ನಿಕೋಲಸ್​ ಪೂರನ್​ ಮೊದಲಿದ್ದಾರೆ. 10  ಪಂದ್ಯಗಳಲ್ಲಿ ಅವರು ಬರೋಬ್ಬರಿ 22 ಸಿಕ್ಸ್​ ಸಿಡಿಸಿದ್ದಾರೆ.

news18-kannada
Updated:October 22, 2020, 8:13 AM IST
IPL 2020: ಕನ್ನಡಿಗನ ಕೈಯಲ್ಲಿದೆ ಆರೆಂಜ್​ ಕ್ಯಾಪ್​; ರಬಾಡ ಬಳಿ ಇದೆ ಪರ್ಪಲ್ ಕ್ಯಾಪ್
ಸಾಂದರ್ಭಿಕ ಚಿತ್ರ
  • Share this:
ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಅಮೋಘ ಗೆಲುವು ಕಂಡಿದೆ. ಆರ್​ಸಿಬಿ ಬೌಲರ್​ಗಳ ಬೆಂಕಿಯ ಚೆಂಡಿಗೆ ನಲುಗಿದ ಕೆಕೆಆರ್ ಸೋಲುಂಡರೆ ಆರ್​ಸಿಬಿ 8 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ಅತಿ ಹೆಚ್ಚು ರನ್​ ಹೊಡೆಯುವವರಿಗೆ ನೀಡುವ ಆರೆಂಜ್​ ಕ್ಯಾಪ್ ಕಿಂಗ್ಸ್​ ಇಲವೆನ್ ಪಂಜಾಬ್​ ತಂಡದ ಆಟಗಾರ, ಕನ್ನಡಿಗ ಕೆಎಲ್​ ರಾಹುಲ್​​ ಬಳಿ ಇದೆ. 10 ಪಂದ್ಯಗಳಲ್ಲಿ ಅವರು 540 ರನ್​ ಕಲೆ ಹಾಕಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್​ ಕಲೆ ಹಾಕುವ ಮೂಲಕ ಆರೇಂಜ್​ ಕ್ಯಾಪ್​ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ORANGE CAP:

ಇನ್ನು ಅತಿ ಹೆಚ್ಚು ವಿಕೆಟ್​ ತೆಗೆದವರಿಗೆ ನೀಡುವ ಪರ್ಪಲ್ ಕ್ಯಾಪ್​ ಈ ಬಾರಿ ಡೆಲ್ಲಿ ಬೌಲರ್​ ರಬಾಡ ಬಳಿ ಇದೆ. 21 ವಿಕೆಟ್​ ಕೀಳುವ ಮೂಲಕ ಅವರು ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.

ORANGE CAP:

ಐಪಿಎಲ್​ ಎಂದಮೇಲೆ ಸಿಕ್ಸ್​​ನ ಸುರಿಮಳೆ ಸುರಿಯೋದು ಕಾಮನ್​. ಈ ರೀತಿ ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ನಿಕೋಲಸ್​ ಪೂರನ್​ ಮೊದಲಿದ್ದಾರೆ. 10  ಪಂದ್ಯಗಳಲ್ಲಿ ಅವರು ಬರೋಬ್ಬರಿ 22 ಸಿಕ್ಸ್​ ಸಿಡಿಸಿದ್ದಾರೆ.

MOST SIXES: ಡೆಲ್ಲಿ ಕ್ಯಾಪಿಟಲ್ಸ್​ ಆಡಿದ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಈ ಮೂಲಕ 14 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೊದಲಿದೆ. ಆರ್​ಸಿಬಿ ಆಡಿದ 10 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಮೂರರಲ್ಲಿ ಸೋಲು ಕಂಡಿದೆ. ನಿನ್ನೆಯ ಪಂದ್ಯವನ್ನು ಅನಾಯಾಸವಾಗಿ ಗೆಲ್ಲುವ ಮೂಲಕ ಇಷ್ಟು ದಿನ ಮೈನಸ್​ ಇದ್ದ ರನ್​ ರೇಟ್​ ಈಗ ಧನಾತ್ಮಕವಾಗಿದೆ. ಅಲ್ಲದೆ, ಡೆಲ್ಲಿ-ಆರ್​ಸಿಬಿ ಪ್ಲೇ ಆಫ್​ಗೆ ಏರುವುದು ಬಹುತೇಕ ಖಚಿತವಾಗಿದೆ. ಮುಂಬೈ ಇಂಡಿಯನ್ಸ್​​ ಆಡಿದ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಮೂರನೇ ಸ್ಥಾನದಲ್ಲಿದೆ.

POINTS TABLE:

ಕೋಲ್ಕತ್ತಾ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಐದರಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಪಂಜಾಬ್​ ಇದೆ. ಆರನೇ ಸ್ಥಾನದಲ್ಲಿ ರಾಜಸ್ಥಾನ್​​, ಏಳನೇ ಸ್ಥಾನದಲ್ಲಿ ಹೈದರಾಬಾದ್​ ಹಾಗೂ ಕೊನೆಯ ಸ್ಥಾನದಲ್ಲಿ ಚೆನ್ನೈ ಇದೆ.
Published by: Rajesh Duggumane
First published: October 22, 2020, 8:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading