IPL

  • associate partner

IPL 2020: ಕನ್ನಡಿಗನ ಕೈಯಲ್ಲಿದೆ ಆರೆಂಜ್​ ಕ್ಯಾಪ್​; ರಾಹುಲ್​ ಈ ಬಾರಿ ಹೊಡೆದ ರನ್​ಗಳೆಷ್ಟು ಗೊತ್ತಾ?

ಐಪಿಎಲ್​ ಎಂದಮೇಲೆ ಸಿಕ್ಸ್​​ನ ಸುರಿಮಳೆ ಸುರಿಯೋದು ಕಾಮನ್​. ಈ ರೀತಿ ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ನಿಕೋಲಸ್​ ಪೂರನ್​ ಮೊದಲಿದ್ದಾರೆ. 8  ಪಂದ್ಯಗಳಲ್ಲಿ ಅವರು ಬರೋಬ್ಬರಿ 22 ಸಿಕ್ಸ್​ ಸಿಡಿಸಿದ್ದಾರೆ.

news18-kannada
Updated:October 21, 2020, 8:11 AM IST
IPL 2020: ಕನ್ನಡಿಗನ ಕೈಯಲ್ಲಿದೆ ಆರೆಂಜ್​ ಕ್ಯಾಪ್​; ರಾಹುಲ್​ ಈ ಬಾರಿ ಹೊಡೆದ ರನ್​ಗಳೆಷ್ಟು ಗೊತ್ತಾ?
ಕೆ. ಎಲ್ ರಾಹುಲ್.
  • Share this:
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 38ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ನಿಕೋಲಸ್ ಪೂರನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಹುಲ್ ಪಡೆ ಗೆದ್ದು ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಇತ್ತ ಡೆಲ್ಲಿ ತಂಡ ಟೂರ್ನಿಯಲ್ಲಿ ಮೂರನೇ ಸೋಲುಕಂಡಿದೆ. ಪಂಜಾಬ್​ ಸತತ ಹ್ಯಾಟ್ರಿಕ್​ ಗೆಲುವು ದಾಖಲಿಸುವ ಮೂಲಕ ಕೋಲ್ಕತ್ತಾ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಏರಲು ರೆಡಿ ಆಗಿದೆ.

ಅತಿ ಹೆಚ್ಚು ರನ್​ ಹೊಡೆಯುವವರಿಗೆ ನೀಡುವ ಆರೆಂಜ್​ ಕ್ಯಾಪ್ ಕಿಂಗ್ಸ್​ ಇಲವೆನ್ ಪಂಜಾಬ್​ ತಂಡದ ಆಟಗಾರ, ಕನ್ನಡಿಗ ಕೆಎಲ್​ ರಾಹುಲ್​​ ಬಳಿ ಇದೆ. 10 ಪಂದ್ಯಗಳಲ್ಲಿ ಅವರು 540 ರನ್​ ಕಲೆ ಹಾಕಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್​ ಕಲೆ ಹಾಕುವ ಮೂಲಕ ಆರೇಂಜ್​ ಕ್ಯಾಪ್​ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ORANGE CAP:

ಇನ್ನು ಅತಿ ಹೆಚ್ಚು ವಿಕೆಟ್​ ತೆಗೆದವರಿಗೆ ನೀಡುವ ಪರ್ಪಲ್ ಕ್ಯಾಪ್​ ಈ ಬಾರಿ ಡೆಲ್ಲಿ ಬೌಲರ್​ ರಬಾಡ ಬಳಿ ಇದೆ. 21 ವಿಕೆಟ್​ ಕೀಳುವ ಮೂಲಕ ಅವರು ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.

ORANGE CAP:

ಐಪಿಎಲ್​ ಎಂದಮೇಲೆ ಸಿಕ್ಸ್​​ನ ಸುರಿಮಳೆ ಸುರಿಯೋದು ಕಾಮನ್​. ಈ ರೀತಿ ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ನಿಕೋಲಸ್​ ಪೂರನ್​ ಮೊದಲಿದ್ದಾರೆ. 8  ಪಂದ್ಯಗಳಲ್ಲಿ ಅವರು ಬರೋಬ್ಬರಿ 22 ಸಿಕ್ಸ್​ ಸಿಡಿಸಿದ್ದಾರೆ.

MOST SIXES: ಡೆಲ್ಲಿ ಕ್ಯಾಪಿಟಲ್ಸ್​ ಆಡಿದ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಈ ಮೂಲಕ 14 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೇಲಿದೆ. ಅಲ್ಲದೆ, ಪ್ಲೇ ಆಫ್​ಗೆ ಏರುವುದು ಬಹುತೇಕ ಖಚಿತವಾಗಿದೆ. ಮುಂಬೈ ಇಂಡಿಯನ್ಸ್​​ಆಡಿದ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಆರ್​ಸಿಬಿ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಈ ಮೂಲಕ ಮೂರನೇ ಸ್ಥಾನ ಅಲಂಕರಿಸಿದೆ.

POINTS TABLE:

ಕೋಲ್ಕತ್ತಾ 9 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಪಂಜಾಬ್​ ಇದೆ. ಆರನೇ ಸ್ಥಾನದಲ್ಲಿ ರಾಜಸ್ಥಾನ್​, ಏಳನೇ ಸ್ಥಾನದಲ್ಲಿ ಹೈದರಾಬಾದ್​, ಕೊನೆಯ ಸ್ಥಾನದಲ್ಲಿ ಚೆನ್ನೈ ಇದೆ.
Published by: Rajesh Duggumane
First published: October 21, 2020, 8:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading