IPL

  • associate partner

MI vs RCB, IPL 2020: ಸೂರ್ಯಕುಮಾರ್ ಬ್ಯಾಟಿಂಗ್ ವೈಭವ: ಪ್ಲೇ-ಆಫ್​ನತ್ತ ಮುಂಬೈ ದಾಪುಗಾಲು!

IPL 2020, Mumbai Indians vs Royal Challengers Bangalore: ಆರ್​​ಸಿಬಿ ನೀಡಿದ್ದ 165 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಕ್ವಿಂಟನ್ ಡಿಕಾಕ್ ಹಾಗೂ ಇಶಾನ್ ಕಿಶನ್ ಬಿರುಸಿನ ಬ್ಯಾಟಿಂಗ್ ನಡೆಸಿದರು.

news18-kannada
Updated:October 28, 2020, 10:59 PM IST
MI vs RCB, IPL 2020: ಸೂರ್ಯಕುಮಾರ್ ಬ್ಯಾಟಿಂಗ್ ವೈಭವ: ಪ್ಲೇ-ಆಫ್​ನತ್ತ ಮುಂಬೈ ದಾಪುಗಾಲು!
ಸೂರ್ಯಕುಮಾರ್
  • Share this:
ಅಬುಧಾಬಿ (ಅ. 28): ಇಲ್ಲಿನ ಶೇಕ್ ಝಯೇದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 48ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ವೈಭವದ ನೆರವಿನಿಂದ ರೋಹಿತ್ ಪಡೆ 5 ವಿಕೆಟ್​ಗಳ ಜಯಕಂಡು ಪ್ಲೇ ಆಫ್ ಹಂತವನ್ನು ಬಹುತೇಕ ಖಚಿತ ಪಡಿಸಿದೆ. ಇತ್ತ ಆರ್​​ಸಿಬಿ 5ನೇ ಸೋಲುಕಂಡು ತನ್ನ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ.

ಆರ್​​ಸಿಬಿ ನೀಡಿದ್ದ 165 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಕ್ವಿಂಟನ್ ಡಿಕಾಕ್ ಹಾಗೂ ಇಶಾನ್ ಕಿಶನ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಮೊದಲ ವಿಕೆಟ್​ಗೆ ಈ ಜೋಡಿ 37 ರನ್​ಗಳ ಕಾಣಿಕೆ ನೀಡಿತು. ಆದರೆ, ಡಿಕಾಕ್ 18 ರನ್ ಗಳಿಸಿ ಔಟ್ ಆದರೆ, ಕಿಶನ್ 25 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಸೌರಭ್ ತಿವಾರಿ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 5 ರನ್​ಗೆ ಬ್ಯಾಟ್ ಕೆಳಗಿಟ್ಟರು. ಕ್ರುನಾಲ್ ಪಾಂಡ್ಯ(10) ಚಹಾಲ್ ಸ್ಪಿನ್ ಮೋಡಿಗೆ ಬಲಿಯಾದರು. ಈ ಸಂದರ್ಭ ಹಾರ್ದಿಕ್ ಪಾಂಡ್ಯ ಜೊತೆಯಾದ  ಸೂರ್ಯಕುಮಾರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅರ್ಧಶತಕ ಸಿಡಿಸಿ ತಂಡದ ಗೆಲುವನ್ನು ಖಚಿತ ಪಡಿಸಿದರು.



ಸೂರ್ಯಕುಮಾರ್ 43 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 79 ರನ್ ಚಚ್ಚಿದರೆ, ಹಾರ್ದಿಕ್ 17 ರನ್ ಗಳಿಸಿದರು.

ಮುಂಬೈ 19.1 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವ ಮೂಲಕ 8ನೇ ಗೆಲುವು ಕಂಡಿತು. ಆರ್​ಸಿಬಿ ಪರ ಮೊಹಮ್ಮದ್ ಸಿರಾಜ್ ಹಾಗೂ ಯಜುವೇಂದ್ರ ಚಹಾಲ್ ತಲಾ 2 ವಿಕೆಟ್, ಕ್ರಿಸ್ ಮೊರೀಸ್ 1 ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಜೋಷ್ ಫಿಲಿಪ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 71 ರನ್​ಗಳ ಕಾಣಿಕೆ ನೀಡಿತು.

ಚೆನ್ನಾಗಿಯೆ ಆಡುತ್ತಿದ್ದ ಫಿಲಿಪ್ ಅನಗತ್ಯವಾಗಿ ಸ್ಟಂಪ್​ಔಟ್​ಗೆ ಬಲಿಯಾದರು. 24 ಎಸೆತಗಳಲ್ಲಿ 33 ರನ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ(9) ಈ ಬಾರಿ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಈ ನಡುವೆ ಪಡಿಕ್ಕಲ್ ಐಪಿಎಲ್​ನಲ್ಲಿ 3ನೇ ಅರ್ಧಶತಕ ಸಿಡಿಸಿ ಮಿಂಚಿದರು. 3ನೇ ವಿಕೆಟ್​ಗೆ ಎಬಿ ಡಿವಿಲಿಯರ್ಸ್​ ಜೊತೆಯಾದ ಪಡಿಕ್ಕಲ್ ಒಂದಿಷ್ಟು ರನ್ ಕಲೆಹಾಕಿದರು. ಆದರೆ ಎಬಿಡಿ(15) ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರು.

ಶಿವಂ ದುಬೆ ಆಟ 2 ರನ್​ಗೆ ಅಂತ್ಯವಾಯಿತು. ಫಿನಿಶ್ ಮಾಡುವಲ್ಲಿ ಎಡವಿದ ಪಡಿಕ್ಕಲ್ 45 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಿಡಿಸಿ 74 ರನ್​ಗೆ ಔಟ್ ಆದರು. ಕ್ರಿಸ್ ಮೊರೀಸ್ ಬಂದ ಬೆನ್ನಲ್ಲೆ ಒಂದು ಬೌಂಡರಿ ಬಾರಿಸಿ ನಿರ್ಗಮಿಸಿದರು. 131 ರನ್​ಗೆ 3 ವಿಕೆಟ್ ಕಳೆದುಕೊಂಡಿದ್ದ ಆರ್​ಸಿಬಿ 138 ರನ್ ಆಗುವ ಹೊತ್ತಿಗೆ 6 ವಿಕೆಟ್ ಪತನಗೊಂಡಿತು.





ಅಂತಿಮವಾಗಿ ಆರ್​​ಸಿಬಿ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಮುಂಬೈ ಪರ ಜಸ್​ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದರೆ, ರಾಹುಲ್ ಚಹಾರ್, ಕೀರೊನ್ ಪೊಲಾರ್ಡ್ ಹಾಗೂ ಟ್ರೆಂಟ್ ಬೌಲ್ಟ್​ ತಲಾ 1 ವಿಕೆಟ್ ಪಡೆದರು.
Published by: Vinay Bhat
First published: October 28, 2020, 10:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading