IPL

  • associate partner

SRH vs RCB: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಪಡಿಕ್ಕಲ್, ಎಬಿಡಿ ಅಬ್ಬರ: ಹೈದರಾಬಾದ್​ಗೆ ಕಠಿಣ ಟಾರ್ಗೆಟ್

Dream11 IPL 2020 in Kannada: ಇಂದಿನ ಪಂದ್ಯಕ್ಕೆ ಆರ್​ಸಿಬಿ ತಂಡವು ಕನ್ನಡಿಗ ದೇವದತ್‍ ಪಡಿಕ್ಕಲ್ ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಆ್ಯರೋನ್‍ಪಿಂಚ್‍ನೊಂದಿಗೆ ಇನ್ನಿಂಗ್ಸ್ ಕಟ್ಟಲು ಅವಕಾಶ ಕೊಟ್ಟಲು ಈ ಸಂದರ್ಭವನ್ನು ಅತ್ಯುತ್ತಮವಾಗಿ ಪಡಿಕ್ಕಲ್ ಉಪಯೋಗಿಸಿಕೊಂಡರು.

news18-kannada
Updated:September 21, 2020, 9:21 PM IST
SRH vs RCB: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಪಡಿಕ್ಕಲ್, ಎಬಿಡಿ ಅಬ್ಬರ: ಹೈದರಾಬಾದ್​ಗೆ ಕಠಿಣ ಟಾರ್ಗೆಟ್
ದೇವದತ್ ಪಡಿಕ್ಕಲ್.
  • Share this:
ದುಬೈ (ಸೆ. 21): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 3ನೇ ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಉತ್ತಮ ಮೊತ್ತ ಕಲೆಹಾಕಿದೆ. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಅವರ ಉತ್ತಮ ಜೊತೆಯಾಟ ಮತ್ತು ಅಂತಿಮ ಹಂತದಲ್ಲಿ ಎಬಿ ಡಿವಿಲಿಯರ್ಸ್​ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ ಹೈದರಾಬಾದ್​​ಗೆ ಗೆಲ್ಲಲು 164 ರನ್​ಗಳ ಕಠಿಣ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಆರ್​​ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಓಪನರ್​ಗಳು 6 ಓವರ್​ನಲ್ಲಿ 53 ರನ್ ಕಲೆಹಾಕಿದರು.




ನಂತರವೂ ತನ್ನ ಆರ್ಭಟ ಮುಂದುವರೆಸಿದ ಪಡಿಕ್ಕಲ್ 36 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ ಐಪಿಎಲ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. ಆದರೆ, ಅರ್ಧಶತಕದ ಬೆನ್ನಲ್ಲೆ 56 ರನ್​ಗೆ ಔಟ್ ಆದರು. ಇದರ ಬೆನ್ನಲ್ಲೆ 27 ಎಸೆತಗಳಲ್ಲಿ 29 ರನ್ ಗಳಿಸಿದ್ದ ಫಿಂಚ್ ಕೂಡ ನಿರ್ಗಮಿಸಿ ಶಾಕ್ ನೀಡಿದರು. ನಾಯಕ ವಿರಾಟ್ ಕೊಹ್ಲಿ ತುಂಬಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 14 ರನ್​ಗೆ ಔಟ್ ಆದರು.IPL 2020 Live Score, SRH vs RCB:

ಬಳಿಕ ಎಬಿ ಡಿವಿಲಿಯರ್ಸ್​ ಹಾಗೂ ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಎಬಿಡಿ ಕೇವಲ 30 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಿಡಿಸಿ 51 ರನ್ ಚಚ್ಚಿ ಕೊನೆಯ ಓವರ್​​ನಲ್ಲಿ ಔಟ್ ಆದರು. ಅಂತಿಮವಾಗಿ ಆರ್​ಸಿಬಿ ನಿಗದಿತ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು.

 ಹೈದರಾಬಾದ್ ಪರ ನಟರಾಜನ್, ಅಭಿಷೇಕ್ ಶರ್ಮಾ ಹಾಗೂ ವಿಜಯ್ ಶಂಕರ್ ತಲಾ 1 ವಿಕೆಟ್ ಕಿತ್ತರು.

ಇಂದಿನ ಪಂದ್ಯಕ್ಕೆ ಆರ್​ಸಿಬಿ ತಂಡವು ಕನ್ನಡಿಗ ದೇವದತ್‍ ಪಡಿಕ್ಕಲ್ ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಆ್ಯರೋನ್‍ಪಿಂಚ್‍ನೊಂದಿಗೆ ಇನ್ನಿಂಗ್ಸ್ ಕಟ್ಟಲು ಅವಕಾಶ ಕೊಟ್ಟಲು ಈ ಸಂದರ್ಭವನ್ನು ಅತ್ಯುತ್ತಮವಾಗಿ ಪಡಿಕ್ಕಲ್ ಉಪಯೋಗಿಸಿಕೊಂಡರು.

ಆರ್‌ಸಿಬಿ : ಆ್ಯರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್‍ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಜೋಶ್ ಫಿಲಿಪ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ನವದೀಪ್ ಸೈನಿ, ಯಜುವೇಂದ್ರ ಚಹಲ್, ಡೇಲ್ ಸ್ಟೈನ್.

ಎಸ್‍ಆರ್​​ಎಚ್: ದೇವಿಡ್ ವಾರ್ನರ್ (ನಾಯಕ), ಜಾನಿ ಬೈರ್​ಸ್ಟೋ, ಮನೀಶ್ ಪಾಂಡೆ, ವಿಜಯ್ ಶಂಕರ್, ಮಿಚೆಲ್ ಸ್ಟಾರ್ಕ್​, ಪ್ರಿಯಂ ಗರ್ಗ್​, ಅಭಿಷೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಟಿ ನಟರಾಜನ್.
Published by: Vinay Bhat
First published: September 21, 2020, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading