Mohammed Siraj: ಸಿರಾಜ್ ಬೌಲಿಂಗ್ ಬಿರುಗಾಳಿ: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಆರ್​ಸಿಬಿ ಬೌಲರ್

IPL 2020, KXIP vs RCB: ಕೆಕೆಆರ್ ಬ್ಯಾಟ್ಸ್​​ಮನ್​ಗಳ ಪತನಕ್ಕೆ ಕಾರಣವಾಗಿದ್ದು ಮೊಹಮ್ಮದ್ ಸಿರಾಜ್. 2ನೇ ಓವರ್ ಬೌಲಿಂಗ್ ಮಾಡಲು ಬಂದ ಸಿರಾಜ್ ತನ್ನ ಮೊದಲ ಓವರ್​ನ ಮೂರನೇ ಎಸೆತದಲ್ಲೇ ರಾಹುಲ್ ತ್ರಿಪಾಠಿಯನ್ನು ಔಟ್ ಮಾಡಿದರು.

news18-kannada
Updated:October 21, 2020, 8:25 PM IST
Mohammed Siraj: ಸಿರಾಜ್ ಬೌಲಿಂಗ್ ಬಿರುಗಾಳಿ: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಆರ್​ಸಿಬಿ ಬೌಲರ್
ಮೊಹಮ್ಮದ್ ಸಿರಾಜ್. (ಫೋಟೋ ಕೃಪೆ: RCB, Twitter)
  • Share this:
ಅಬುಧಾಬಿ (ಅ. 21): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಕೊಹ್ಲಿ ಸೈನ್ಯದ ಬೌಲರ್​ಗಳು ಬೆಂಕಿಯ ಚೆಂಡನ್ನು ಉಗುಳುತ್ತಿದ್ದಾರೆ. ಅದರಲ್ಲೂ ಮೊಹಮ್ಮದ್ ಸಿರಾಜ್ ಹೊಸ ದಾಖಲೆ ಬರೆದಿದ್ದಾರೆ.

ಟಾಸ್ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ಆರಂಭದಲ್ಲೇ ತನ್ನ ಪ್ರಮುಖ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತರಗೆಲೆಯಂತೆ ಉರುಳಿದ ಕೆಕೆಆರ್ ಬ್ಯಾಟ್ಸ್​ಮನ್​ಗಳು ಕೇವಲ 20 ರನ್​ಗೂ ಮೊದಲೇ 4 ವಿಕೆಟ್ ಕಳೆದುಕೊಂಡಿತು.


ಕೆಕೆಆರ್ ಬ್ಯಾಟ್ಸ್​​ಮನ್​ಗಳ ಪತನಕ್ಕೆ ಕಾರಣವಾಗಿದ್ದು ಮೊಹಮ್ಮದ್ ಸಿರಾಜ್. 2ನೇ ಓವರ್ ಬೌಲಿಂಗ್ ಮಾಡಲು ಬಂದ ಸಿರಾಜ್ ತನ್ನ ಮೊದಲ ಓವರ್​ನ ಮೂರನೇ ಎಸೆತದಲ್ಲೇ ರಾಹುಲ್ ತ್ರಿಪಾಠಿಯನ್ನು ಔಟ್ ಮಾಡಿದರು. ಮುಂದಿನ ಎಸೆತದಲ್ಲೇ ನಿತೀಶ್ ರಾಣ ಅವರನ್ನು ಪೆವಿಲಿಯನ್​ಗೆ ಅಟ್ಟಿದರು. ಜೊತೆಗೆ ಈ ಓವರ್ ಮೇಡನ್ ಕೂಡ ಆಯಿತು.ಇನ್ನೂ ತನ್ನ 2ನೇ ಓವರ್​ನಲ್ಲಿ ಅಪಾಯಕಾರಿ ಬ್ಯಾಟ್ಸ್​ಮನ್​ ಟಾಮ್ ಬಾಂಟನ್ ಅವರನ್ನು ಔಟ್ ಮಾಡಿ ಮೂರನೇ ವಿಕೆಟ್ ಕಿತ್ತರು. ಜೊತೆಗೆ ತನ್ನ 2ನೇ ಓವರ್ ಕೂಡ ಮೇಡನ್ ಮಾಡಿದರು.

ಈ ಮೂಲಕ ಮೊಹಮ್ಮದ್ ಸಿರಾಜ್ ಹೊಸ ದಾಖಲೆ ಬರೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಸತತ ಎರಡು ಓವರ್ ಮೇಡನ್ ಮಾಡಿದ ಮೊದಲ ಬೌಲರ್ ಎಂಬ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ದಾಖಲೆಯ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

KKR vs RCB, IPL 2020 Live Score

ಸದ್ಯ ಕೆಕೆಆರ್ ಆರಂಭದಲ್ಲೇ ತನ್ನ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕೆಕೆ ಆರ್​ಗೆ ಈ ಪಂದ್ಯ ಮುಖ್ಯವಾಗಿದೆ. ಇತ್ತ ಆರ್​ಸಿಬಿ ಈ ಪಂದ್ಯವನ್ನು ಗೆದ್ದು ಪ್ಲೇ ಆಫ್ ಹಂತವನ್ನು ಸನಿಹಗೊಳಿಸುವ ಅಂದಾಜಿನಲ್ಲಿದೆ.

ಇಂದಿನ ಪಂದ್ಯಕ್ಕೆ ಕೊಹ್ಲಿ ಪಡೆಯಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ಶಹ್ಬಾಜ್ ಅಹ್ಮದ್ ಬದಲು ಮೊಹಮ್ಮದ್ ಸಿರಾಜ್ ಕಣಕ್ಕಿಳಿದಿದ್ದಾರೆ. ಇತ್ತ ಕೆಕೆಆರ್ ತಂಡದಲ್ಲಿ 2 ಬದಲಾವಣೆ ಆಗಿದೆ. ಶಿವಂ ಮಾವಿ ಮತ್ತು ಆ್ಯಂಡ್ರೋ ರಸೆಲ್ ಬದಲು ಟಾಮ್ ಬಾಂಟನ್ ಮತ್ತು ಪ್ರಸಿದ್ಧ್ ಕೃಷ್ಣ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
Published by: Vinay Bhat
First published: October 21, 2020, 8:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading