IPL

  • associate partner

KKR vs RCB, IPL 2020: 8 ವಿಕೆಟ್​ಗಳಿಂದ ಗೆದ್ದು ಬೀಗಿದ ಆರ್​ಸಿಬಿ: 2ನೇ ಸ್ಥಾನಕ್ಕೇರಿದ ಕೊಹ್ಲಿ ಸೈನ್ಯ

IPL 2020, Kolkata Knight Riders vs Royal Challengers Bangalore: ಕೆಕೆಆರ್ ನೀಡಿದ್ದ 85 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಆರ್​ಸಿಬಿ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಆ್ಯರೋನ್ ಫಿಂಚ್ ಮೊದಲ ವಿಕೆಟ್​ಗೆ 46 ರನ್​ಗಳ ಕಾಣಿಕೆ ನೀಡಿದರು.

news18-kannada
Updated:October 21, 2020, 10:30 PM IST
KKR vs RCB, IPL 2020: 8 ವಿಕೆಟ್​ಗಳಿಂದ ಗೆದ್ದು ಬೀಗಿದ ಆರ್​ಸಿಬಿ: 2ನೇ ಸ್ಥಾನಕ್ಕೇರಿದ ಕೊಹ್ಲಿ ಸೈನ್ಯ
RCB
  • Share this:
ಅಬುಧಾಬಿ (ಅ. 21): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಅಮೋಘ ಗೆಲುವು ಕಂಡಿದೆ. ಆರ್​ಸಿಬಿ ಬೌಲರ್​ಗಳ ಬೆಂಕಿಯ ಚೆಂಡಿಗೆ ನಲುಗಿದ ಕೆಕೆಆರ್ ಸೋಲುಂಡರೆ ಆರ್​ಸಿಬಿ 8 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ಕೆಕೆಆರ್ ನೀಡಿದ್ದ 85 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಆರ್​ಸಿಬಿ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಆ್ಯರೋನ್ ಫಿಂಚ್ ಮೊದಲ ವಿಕೆಟ್​ಗೆ 46 ರನ್​ಗಳ ಕಾಣಿಕೆ ನೀಡಿದರು. ಆದರೆ, ಫಿಂಚ್ 16 ರನ್ ಗಳಿಸಿದ್ದಾಗ ಔಟ್ ಆದರೆ, ಪಡಿಕ್ಕಲ್ 17 ಎಸೆತಗಳಲ್ಲಿ 25 ರನ್ ಬಾರಿಸಿ ನಿರ್ಗಮಿಸಿದರು.
ಬಳಿಕ ಒಂದಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಗುರುಕೀರತ್ ಮನ್​ಸಿಂಗ್ 13.3 ಓವರ್​ನಲ್ಲೇ 85 ರನ್ ಬಾರಿಸಿ ತಂಡಕ್ಕೆ ಗೆಲುವು ತಂದಿಟ್ಟರು. ಕೊಹ್ಲಿ ಅಜೇಯ 18 ಹಾಗೂ ಗುರುಕೀರತ್ ಅಜೇಯ 21 ರನ್ ಗಳಿಸಿದರು. ಕೆಕೆಆರ್ ಪರ ಲಾಕಿ ಫರ್ಗೂಸನ್ 1 ವಿಕೆಟ್ ಪಡೆದರು.ಈ ಗೆಲುವಿನೊಂದಿಗೆ ಆರ್​ಸಿಬಿ ಆಡಿದ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ, ಇನ್ನುಳಿದ ಮೂರರಲ್ಲಿ ಸೋಲು ಅನುಭವಿಸಿದೆ. ಒಟ್ಟು 14 ಅಂಕಗಳೊಂದಿಗೆ ಐಪಿಎಲ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ 2ನೇ ಸ್ಥಾನಕ್ಕೇರಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಕೋಲ್ಕತ್ತಾ ಕೇವಲ 14 ರನ್​ಗೆ 4 ವಿಕೆಟ್ ಕಳೆದುಕೊಂಡಿತು. ಶುಭ್ಮನ್ ಗಿಲ್ ಜೊತೆ ಓಪನರ್ ಆಗಿ ಕಣಕ್ಕಿಳಿದ ರಾಹುಲ್ ತ್ರಿಪಾಠಿ ಕೇವಲ 1 ರನ್​ ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಔಟ್ ಆದರು. ಮುಂದಿನ ಎಸೆತದಲ್ಲೇ ನಿತೀಶ್ ರಾಣಾ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು.

3ನೇ ಓವರ್ ಬೌಲಿಂಗ್​ಗೆ ಇಳಿದ ನವ್​ದೀಪ್ ಸೈನಿ ತಮ್ಮ ಎರಡನೇ ಎಸೆತದಲ್ಲಿ ಶುಭ್ಮನ್ ಗಿಲ್(1) ಅವರನ್ನು ಔಟ್ ಮಾಡುವ ಮತ್ತೊಂದು ಬ್ರೇಕ್ ನೀಡಿದರು. ಟಾಮ್ ಬಾಂಟನ್ ಆಟ 10 ರನ್​ಗೆ ಅಂತ್ಯವಾಯಿತು. ದಿನೇಶ್ ಕಾರ್ತಿಕ್(4) ಚಹಾಲ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸಿಲುಕಿದರು.

ಪ್ಯಾಟ್ ಕಮಿನ್ಸ್​ ಕೂಡ ಬಂದ ಬೆನ್ನಲ್ಲೆ ನಿರ್ಗಮಿಸಿದರು. ನಾಯಕ ಇಯಾನ್ ಮಾರ್ಗನ್​ಗೆ ಯಾವೊಬ್ಬ ಬ್ಯಾಟ್ಸ್​ಮನ್ ಸಾತ್ ನೀಡಲಿಲ್ಲ. 16ನೇ ಓವರ್​ನ​ ಸುಂದರ್ ಬೌಲಿಂಗ್​ನಲ್ಲಿ ಮಾರ್ಗನ್ ಕೂಡ ಔಟ್ ಆದರು. 34 ಎಸೆತಗಳಲ್ಲಿ 30 ಗಳಿಸಿ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು.

ಅಂತಿಮವಾಗಿ ಕೆಕೆಆರ್ 20 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 84 ರನ್ ಗಳಿಸಿತು. ಆರ್​ಸಿಬಿ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಿತ್ತರೆ, ಯಜುವೇಂದ್ರ ಚಹಾಲ್ 2 ಹಾಗೂ ವಾಷಿಂಗ್ಟನ್ ಸುಂದರ್, ನವ್​ದೀಪ್ ಸೈನಿ 1 ವಿಕೆಟ್ ಪಡೆದರು.
Published by: Vinay Bhat
First published: October 21, 2020, 10:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading