IPL

  • associate partner

KKR vs RCB, IPL 2020: ಆರ್​ಸಿಬಿ ಬೌಲರ್​ಗಳ ಬಿರುಗಾಳಿಗೆ ಕೆಕೆಆರ್ ತತ್ತರ: 85 ರನ್ಸ್ ಟಾರ್ಗೆಟ್

IPL 2020, Kolkata Knight Riders vs Royal Challengers Bangalore: ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಉಭಯ ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಕೋಲ್ಕತ್ತಾ ನೈಟ್ ರೈಡರ್ಸ್​​ ತಂಡ 15ರಲ್ಲಿ ಗೆಲುವು ದಾಖಲಿಸಿದ್ದರೆ, ರಾಯಲ್ ಚಾಲೆಂಜರ್ಸ್​ ಬೆಂಗಳೂರು‌ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ.

news18-kannada
Updated:October 21, 2020, 9:09 PM IST
KKR vs RCB, IPL 2020: ಆರ್​ಸಿಬಿ ಬೌಲರ್​ಗಳ ಬಿರುಗಾಳಿಗೆ ಕೆಕೆಆರ್ ತತ್ತರ: 85 ರನ್ಸ್ ಟಾರ್ಗೆಟ್
RCB
  • Share this:
ಅಬುಧಾಬಿ (ಅ. 21): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ಐಪಿಎಲ್​ನ 39ನೇ ಪಂದ್ಯ ನಡೆಯಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಬೌಲರ್​​ಗಳ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಮೊಹಮ್ಮದ್ ಸಿರಾಜ್ ಅವರ ಬೆಂಕಿಯ ಚೆಂಡಿಗೆ ನಲುಗಿದ ಕೆಕೆಆರ್ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 84 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಕೋಲ್ಕತ್ತಾ ಕೇವಲ 14 ರನ್​ಗೆ 4 ವಿಕೆಟ್ ಕಳೆದುಕೊಂಡಿತು. ಶುಭ್ಮನ್ ಗಿಲ್ ಜೊತೆ ಓಪನರ್ ಆಗಿ ಕಣಕ್ಕಿಳಿದ ರಾಹುಲ್ ತ್ರಿಪಾಠಿ ಕೇವಲ 1 ರನ್​ ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಔಟ್ ಆದರು. ಮುಂದಿನ ಎಸೆತದಲ್ಲೇ ನಿತೀಶ್ ರಾಣಾ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು.




3ನೇ ಓವರ್ ಬೌಲಿಂಗ್​ಗೆ ಇಳಿದ ನವ್​ದೀಪ್ ಸೈನಿ ತಮ್ಮ ಎರಡನೇ ಎಸೆತದಲ್ಲಿ ಶುಭ್ಮನ್ ಗಿಲ್(1) ಅವರನ್ನು ಔಟ್ ಮಾಡುವ ಮತ್ತೊಂದು ಬ್ರೇಕ್ ನೀಡಿದರು. ಟಾಮ್ ಬಾಂಟನ್ ಆಟ 10 ರನ್​ಗೆ ಅಂತ್ಯವಾಯಿತು. ದಿನೇಶ್ ಕಾರ್ತಿಕ್(4) ಚಹಾಲ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸಿಲುಕಿದರು.ಪ್ಯಾಟ್ ಕಮಿನ್ಸ್​ ಕೂಡ ಬಂದ ಬೆನ್ನಲ್ಲೆ ನಿರ್ಗಮಿಸಿದರು. ನಾಯಕ ಇಯಾನ್ ಮಾರ್ಗನ್​ಗೆ ಯಾವೊಬ್ಬ ಬ್ಯಾಟ್ಸ್​ಮನ್ ಸಾತ್ ನೀಡಲಿಲ್ಲ. 16ನೇ ಓವರ್​ನ​ ಸುಂದರ್ ಬೌಲಿಂಗ್​ನಲ್ಲಿ ಮಾರ್ಗನ್ ಕೂಡ ಔಟ್ ಆದರು. 34 ಎಸೆತಗಳಲ್ಲಿ 30 ಗಳಿಸಿ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು.

ಅಂತಿಮವಾಗಿ ಕೆಕೆಆರ್ 20 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 84 ರನ್ ಗಳಿಸಿತು. ಆರ್​ಸಿಬಿ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಿತ್ತರೆ, ಯಜುವೇಂದ್ರ ಚಹಾಲ್ 2 ಹಾಗೂ ವಾಷಿಂಗ್ಟನ್ ಸುಂದರ್, ನವ್​ದೀಪ್ ಸೈನಿ 1 ವಿಕೆಟ್ ಪಡೆದರು.

ರಾಯಲ್ ಚಾಲೆಂಜರ್ಸ್​ ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿ.ಕೀ), ಗುರುಕೀರತ್ ಮನ್​ ಸಿಂಗ್, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯಜುವೇಂದ್ರ ಚಾಹಲ್.

ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಟಾಮ್ ಬಾಂಟನ್, ಪ್ಯಾಟ್ ಕಮ್ಮಿನ್ಸ್, ಕುಲ್ದೀಪ್ ಯಾದವ್, ವರಣ್ ಚಕ್ರವರ್ತಿ, ಲಾಕಿ ಫರ್ಗೂಸನ್, ಪ್ರಸಿದ್ಧ್ ಕೃಷ್ಣ
Published by: Vinay Bhat
First published: October 21, 2020, 9:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading