IPL

  • associate partner

IPL 2020: ಫಾಫ್ ಡು ಪ್ಲೆಸಿಸ್ ಅಂದಿನ ಸ್ಥಿತಿ ಬಗ್ಗೆ ಮರುಕ ವ್ಯಕ್ತಪಡಿಸಿದ ಇಮ್ರಾನ್ ತಾಹಿರ್

Imran Tahir: ಈ ತಂಡದ ಮಾಲೀಕರು ನೀಡಿದ ಗೌರವ ಬೇರೆಲ್ಲೂ ನೋಡಿಲ್ಲ. ಚೆನ್ನೈ ಅಭಿಮಾನಿಗಳ ಪ್ರೀತಿ ಹಾಗೂ ನನ್ನ ಕುಟುಂಬ ಬಿಟ್ಟರೆ ಹೆಚ್ಚಿನ ಕಾಳಜಿ ವಹಿಸುವ ಬೇರೆ ಯಾವ ಫ್ರಾಂಚೈಸಿಯನ್ನು ಕಂಡಿಲ್ಲ ಎಂದು ತಾಹಿರ್ ಹೇಳಿದರು.

news18-kannada
Updated:October 22, 2020, 8:04 PM IST
IPL 2020: ಫಾಫ್ ಡು ಪ್ಲೆಸಿಸ್ ಅಂದಿನ ಸ್ಥಿತಿ ಬಗ್ಗೆ ಮರುಕ ವ್ಯಕ್ತಪಡಿಸಿದ ಇಮ್ರಾನ್ ತಾಹಿರ್
Imran Tahir
  • Share this:
IPL 2019ರ ಪರ್ಪಲ್ ಕ್ಯಾಪ್ ವಿನ್ನರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ ಮಾಂತ್ರಿಕ ಇಮ್ರಾನ್ ತಾಹಿರ್ ಈ ಬಾರಿ ಒಂದೇ ಒಂದು ಪಂದ್ಯವನ್ನಾಡಿಲ್ಲ. 10 ಪಂದ್ಯಗಳನ್ನಾಡಿರುವ ಸಿಎಸ್​ಕೆ 3 ರಲ್ಲಿ ಮಾತ್ರ ಗೆಲುವು ಕಂಡಿದೆ. ಇದರ ಹೊರತಾಗಿಯೂ ಕಳೆದ ಸೀಸನ್​ನ ಯಶಸ್ವಿ ಸ್ಪಿನ್ನರ್​ರನ್ನು ಧೋನಿ ಕಣಕ್ಕಿಳಿಸಿಲ್ಲ. ಇದರ ನಡುವೆ ತಂಡದ ಆಟಗಾರರಿಗೆ ಡ್ರಿಂಕ್ಸ್ ತೆಗೆದುಕೊಂಡು ಮೈದಾನಕ್ಕಿಳಿದು ತಾಹಿರ್ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ. ಹೀಗಾಗಿಯೇ ಹಲವು ಸಿಎಸ್​ಕೆ ಅಭಿಮಾನಿಗಳು ಈ ಸ್ಪಿನ್ ಮಾಂತ್ರಿಕನನ್ನು ಕಣಕ್ಕಿಳಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸಿದ್ದರು. ಇದಾಗ್ಯೂ ಇಮ್ರಾನ್ ತಾಹಿರ್​ಗೆ ಅವಕಾಶ ದೊರೆತಿಲ್ಲ. ಮುಂದಿನ ಪಂದ್ಯಗಳಲ್ಲಿ ಸಿಗಲಿದೆಯಾ ಎಂಬ ಪ್ರಶ್ನೆಗೆ ಖುದ್ದು ತಾಹಿರ್ ಗೊತ್ತಿಲ್ಲ ಎಂಬ ಉತ್ತರ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ತಾಹಿರ್, ಡ್ರಿಂಕ್ಸ್ ತೆಗೆದುಕೊಂಡು ಹೋಗಬೇಕಾಗಿ ಬಂದಿರುವುದಕ್ಕೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದಾರೆ. ಏಕೆಂದರೆ ಕಳೆದ ಸೀಸನ್​ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ತಂಡದ ಆಟಗಾರರಿಗೆ ಡ್ರಿಂಕ್ಸ್ ತೆಗೆದುಕೊಂಡು ಹೋಗಬೇಕಾಗಿ ಬಂದಿತ್ತು. ಇದನ್ನು ನೋಡಲು ನನಗೆ ತುಂಬಾ ನೋವಾಗಿತ್ತು. ಅವರಿಗೆ ಆಗಿದ್ದ ನೋವು ಏನು ಎಂಬುದು ನನಗೀಗ ಅರ್ಥವಾಗಿದೆ ಎಂದು ಹೇಳಿದರು.

ಇದೇ ವೇಳೆ ಸಿಎಸ್​ಕೆ ಫ್ರಾಂಚೈಸಿಯನ್ನು ಹಾಡಿ ಹೊಗಳಿದ ತಾಹಿರ್, ನಾನು ವಿಶ್ವದಲ್ಲಿ ನೋಡಿದ ಅತ್ಯುತ್ತಮ ಕ್ರಿಕೆಟ್ ಫ್ರಾಂಚೈಸಿ ಎಂದರೆ ಅದು ಚೆನ್ನೂ ಸೂಪರ್ ಕಿಂಗ್ಸ್. ಈ ತಂಡದ ಮಾಲೀಕರು ನೀಡಿದ ಗೌರವ ಬೇರೆಲ್ಲೂ ನೋಡಿಲ್ಲ. ಚೆನ್ನೈ ಅಭಿಮಾನಿಗಳ ಪ್ರೀತಿ ಹಾಗೂ ನನ್ನ ಕುಟುಂಬ ಬಿಟ್ಟರೆ ಹೆಚ್ಚಿನ ಕಾಳಜಿ ವಹಿಸುವ ಬೇರೆ ಯಾವ ಫ್ರಾಂಚೈಸಿಯನ್ನು ಕಂಡಿಲ್ಲ ಎಂದು ತಾಹಿರ್ ಹೇಳಿದರು.

ನಾನು ಸಿಎಸ್​ಕೆ ಪರ ಆಡುವಾಗ ವಿಭಿನ್ನ ವಾತಾವರಣವಿರುತ್ತದೆ. ಇದಕ್ಕೆ ಮುಖ್ಯ ಕಾರಣ ನಾನು ಅವರ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ. ಫ್ರಾಂಚೈಸಿ ಕೂಡ ಪ್ರದರ್ಶನಗಳ ಬಗ್ಗೆ ಮಾತನಾಡುವುದಿಲ್ಲ. ನೀವು ಒಂದು ದಿನ ಪ್ರದರ್ಶನ ನೀಡುತ್ತೀರಿ, ಮತ್ತೊಂದು ದಿನ ಯಶಸ್ವಿಯಾಗುವುದಿಲ್ಲ. ಆದರೆ, ಸಿಎಸ್​ಕೆ ಯಾವಾಗಲೂ ಬೆಂಬಲ ನೀಡುತ್ತಿರುತ್ತಾರೆ. ಇದುವೇ ನನಗೆ ಈ ತಂಡದಲ್ಲಿ ತುಂಬಾ ಇಷ್ಟವಾದ ವಿಷಯ ಎಂದು ತಾಹಿರ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಇನ್ನು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದೀರಾ ಎಂಬ ಪ್ರಶ್ನೆಗೆ ಅದರ ಬಗ್ಗೆ ನನಗೆ ಯಾವುದೇ ಸುಳಿವಿಲ್ಲ ಎಂದರು. ಏಕೆಂದರೆ ಈ ಹಿಂದೊಮ್ಮೆ ಫಾಫ್ ಡುಪ್ಲೆಸಿಸ್ ಉತ್ತಮ ಫಾರ್ಮ್​ನಲ್ಲಿದ್ದರೂ ಅವರು ಡ್ರಿಂಕ್ಸ್ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದು ಅವರಿಗೆ ಯಾವ ಭಾವನೆ ಉಂಟಾಗಿರಬಹುದು ಎಂಬುದರ ಅರಿವು ಈಗ ನನಗಾಗಿದೆ. ಒಂದು ತಂಡದಲ್ಲಿ ನಾಲ್ವರು ವಿದೇಶಿ ಆಟಗಾರರು ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ರೆ, 5ನೇ ಆಟಗಾರ ತಂಡದಲ್ಲಿ ಸ್ಥಾನ ಪಡೆಯುವುದು ತುಂಬಾ ಕಷ್ಟ. ಆದರೂ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಂಬಿಕೆಯಂತು ಇದೆ ಎಂದು ತಾಹಿರ್ ತಿಳಿಸಿದರು.
POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
Published by: zahir
First published: October 22, 2020, 8:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading