IPL

  • associate partner

KKR - ಕೋಲ್ಕತಾ ತಂಡದಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆ: ಸುನೀಲ್ ಗವಾಸ್ಕರ್ ಅಭಿಪ್ರಾಯ

IPL 2020 - ಕೋಲ್ಕತಾ ನೈಟ್ ರೈಡರ್ಸ್ ತಂಡ ಆರಂಭದ ನಾಲ್ಕೈದು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರದೇ ಹೋದಲ್ಲಿ ದಿನೇಶ್ ಕಾರ್ತಿಕ್ ಬದಲು ಇಯಾನ್ ಮಾರ್ಗನ್ ಅವರನ್ನ ನಾಯಕರನ್ನಾಗಿ ಮಾಡಬಹುದು ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

news18
Updated:September 21, 2020, 2:29 PM IST
KKR - ಕೋಲ್ಕತಾ ತಂಡದಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆ: ಸುನೀಲ್ ಗವಾಸ್ಕರ್ ಅಭಿಪ್ರಾಯ
ಇಯಾನ್ ಮಾರ್ಗನ್
  • News18
  • Last Updated: September 21, 2020, 2:29 PM IST
  • Share this:
ಈ ಬಾರಿಯ ಐಪಿಎಲ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಆರಂಭಿಕ ಪಂದ್ಯಗಳಲ್ಲಿ ಯಶಸ್ಸು ಕಾಣದೇ ಹೋದಲ್ಲಿ ನಾಯಕತ್ವ ಬದಲಾವಣೆ ಆಗಬಹುದು ಎಂದು ಮಾಜಿ ಟೀಮ್ ಇಂಡಿಯಾ ಕ್ಯಾಪ್ಟನ್ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಟೂರ್ನಿಯ ಮೊದಲಾರ್ಧದಲ್ಲಿ ಕೆಕೆಆರ್ ತಂಡದಿಂದ ನಿರೀಕ್ಷಿತ ಪ್ರದರ್ಶನ ಬರದೇ ಹೋದಲ್ಲಿ ದಿನೇಶ್ ಕಾರ್ತಿಕ್ ಬದಲು ಇಂಗ್ಲೆಂಡ್​ನ ಇಯಾನ್ ಮಾರ್ಗನ್ ಅವರನ್ನು ನಾಯಕರನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಗವಾಸ್ಕರ್ ಸಂಶಯಪಟ್ಟಿದ್ದಾರೆ.

“ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಬಹಳ ಬಲಿಷ್ಠವಾಗಿದೆ. ಇಯಾನ್ ಮಾರ್ಗನ್ ಅವರನ್ನ ಸೇರಿಸಿಕೊಂಡ ಬಳಿಕ ಮಧ್ಯಮ ಕ್ರಮಾಂಕಕ್ಕೆ ಹೆಚ್ಚು ಬಲ ಮತ್ತು ಅನುಭವ ಸಿಕ್ಕಂತಾಗಿದೆ. ಮಾರ್ಗನ್ ಎದುರಾಳಿ ತಂಡಗಳಿಗೆ ಬಹಳ ಅಪಾಯಕಾರಿ ಆಗಬಲ್ಲರು... ಜೊತೆಗೆ, ಮೊದಲ ನಾಲ್ಕೈದು ಪಂದ್ಯಗಳಲ್ಲಿ ತಂಡ ಸರಿಯಾಗಿ ಆಡದೇ ಹೋದಲ್ಲಿ ದಿನೇಶ್ ಕಾರ್ತಿಕ್ ಅವರ ಬದಲು ಮಾರ್ಗನ್ ಅವರನ್ನೇ ನಾಯಕರನ್ನಾಗಿ ಮಾಡುವ ಸಾಧ್ಯತೆ ಇದೆ. ಇಂಥದ್ದೊಂದು ಪ್ರವೃತ್ತಿ ನಮ್ಮಲ್ಲಿ ಮೊದಲಿಂದಲೂ ಇದೆ” ಎಂದು 71 ವರ್ಷದ ಗವಾಸ್ಕರ್ ಅವರು ಸ್ಪೋರ್ಟ್ಸ್ ಟಾಕ್ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಾ ಬಾ ಬಾ... ಬರ್ಬೇಡ ಬರ್ಬೇಡ...: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೆ ಗೌತಮ್, ಮಯಂಕ್​ ಕನ್ನಡ ಸಂಭಾಷಣೆ

ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ತಂಡದಲ್ಲೂ ಇದೇ ರೀತಿಯ ಪರಿಸ್ಥಿತಿ ಬಂದಿತ್ತು. ರಾಯಲ್ಸ್ ತಂಡ ಆರಂಭಿಕ ಪಂದ್ಯಗಳಲ್ಲಿ ಸರಿಯಾಗಿ ಪ್ರದರ್ಶನ ತೋರದ ಹಿನ್ನೆಲೆಯಲ್ಲಿ ಅಜಿಂಕ್ಯ ರಹಾನೆ ಬದಲು ಸ್ಟೀವ್ ಸ್ಮಿತ್​ಗೆ ನಾಯಕತ್ವ ವಹಿಸಿಕೊಡಲಾಗಿತ್ತು. ಸುನೀಲ್ ಗವಾಸ್ಕರ್ ಈ ಉದಾಹರಣೆ ನೀಡುತ್ತಾ ಕೆಕೆಆರ್ ತಂಡದಲ್ಲೂ ಇಂಥದ್ದೇ ಬದಲಾವಣೆ ಆಗಬಹುದು ಎಂದಿದ್ದಾರೆ.

ಇಯಾನ್ ಮಾರ್ಗನ್ ಅವರು ಇಂಗ್ಲೆಂಡ್​ನ ಸೀಮಿತ ಓವರ್​ಗಳ ಕ್ರಿಕೆಟ್ ತಂಡಗಳ ನಾಯಕರಾಗಿ ಅಪಾರ ಯಶಸ್ಸು ಗಳಿಸಿದ್ದಾರೆ. ಅವರು ನಾಯಕರಾಗಿ 120 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 72 ಪಂದ್ಯಗಳನ್ನ ಗೆಲ್ಲಿಸಿದ್ದಾರೆ. ಅವರ ನಾಯಕತ್ವದಲ್ಲಿ 51 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ 28ರಲ್ಲಿ ಜಯಭೇರಿ ಭಾರಿಸಿದೆ. ಮಿಡಲ್ ಆರ್ಡರ್ ಅನ್ನು ಬಲಪಡಿಸುವ ಉದ್ದೇಶದಿಂದ ಕೆಕೆಆರ್ ತಂಡ ಮಾರ್ಗನ್ ಅವರನ್ನ 5.25 ಕೋಟಿಗೆ ಖರೀದಿಸಿತ್ತು. ಇಯಾನ್ ಮಾರ್ಗನ್ ಐಪಿಎಲ್ ಟೂರ್ನಿಗಳಲ್ಲಿ ಅಷ್ಟೇನೂ ದೊಡ್ಡ ಯಶಸ್ಸು ಕಾಣದಿದ್ದರೂ ಅವರ ಈಗಿನ ಫಾರ್ಮ್ ಬಹಳ ಮುಖ್ಯ ಪಾತ್ರ ವಹಿಸಲಿದೆ. ಈವರೆಗೆ ವಿವಿಧ ಋತುಗಳಲ್ಲಿ ಮಾರ್ಗನ್ 52 ಐಪಿಎಲ್ ಪಂದ್ಯಗಳನ್ನ ಆಡಿ 852 ರನ್ ಗಳಿಸಿದ್ದಾರೆ. 66 ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್. 121.13 ಸ್ಟ್ರೈಕ್ ರೇಟ್ ಹಾಗೂ 21.35 ರನ್ ಸರಾಸರಿ ಹೊಂದಿದ್ದಾರೆ. 2015-17ರವರೆಗೆ ಮೂರು ವರ್ಷ ಬಿಟ್ಟರೆ ಉಳಿದ ಋತುಗಳಲ್ಲಿ ಅವರು ಕೆಕೆಆರ್ ತಂಡದಲ್ಲೇ ಆಡಿರುವುದು.

ಇದನ್ನೂ ಓದಿ: IPL Games App: ಸ್ಮಾರ್ಟ್​ಫೋನ್​ನಲ್ಲಿ ಆಡಬಹುದಾದ 5 ಬೆಸ್ಟ್​ ಐಪಿಎಲ್​​​​ ಗೇಮ್​ಗಳು!

2017ರವರೆಗೂ ಕೆಕೆಆರ್ ತಂಡಕ್ಕೆ ಗೌತಮ್ ಗಂಭೀರ್ ನಾಯಕತ್ವ ಇತ್ತು. ಅವರು ನಿವೃತ್ತರಾದ ಬಳಿಕ ದಿನೇಶ್ ಕಾರ್ತಿಕ್ ಆ ತಂಡದ ನಾಯಕರಾಗಿದ್ದಾರೆ. ಆದರೆ, ಇತ್ತೀಚೆಗೆ ದಿನೇಶ್ ಕಾರ್ತಿಕ್ ಅವರ ವೈಯಕ್ತಿಕ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಟೀಕೆ ಇದೆ. ಹೀಗಾಗಿ, ಗವಾಸ್ಕರ್ ಅನುಮಾನ ಪಟ್ಟಂತೆ ಟೂರ್ನಿ ಮಧ್ಯೆ ನಾಯಕತ್ವ ಬದಲಾವಣೆ ಆದರೂ ಅಚ್ಚರಿ ಇಲ್ಲ.
Published by: Vijayasarthy SN
First published: September 21, 2020, 2:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading